ಕುರಾಯ ಶ್ರೀ ಸದಾಶಿವ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 10ಲಕ್ಷ ರೂ. ದೇಣಿಗೆ

karaya denige copyಬಂದಾರು : ನವೀಕರಣ ಪುನರ್‌ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೀಡಿರುವ ಸಹಾಯಧನ ರೂಪಾಯಿ 10ಲಕ್ಷ ಮೊತ್ತದ ಚೆಕ್‌ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗದ ಮುಖ್ಯಸ್ಥರಾದ ಬಿ. ಬಾಲಕೃಷ್ಣ ಪೂಜಾರಿಯವರು ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಕ್ಷೇ.ಗ್ರಾ. ಯೋಜನೆಯ ಯೋಜನಾಧಿಕಾರಿ ರೂಪ ಜೈನ್, ಕಣಿಯೂರು ವಲಯ ಮೇಲ್ವಿಚಾರಕ ಆದಿತ್ಯ, ಬೆಳ್ತಂಗಡಿ ವಲಯ ಮೇಲ್ವಿಚಾರಕ ಸುರೇಶ್ ಗೌಡ, ಗ್ರಾಮೀಣಾಭಿವೃದ್ಧಿ ಒಕ್ಕೂಟದ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ತಿಮ್ಮಯ್ಯ ಗೌಡ, ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಧರ್ಣಪ್ಪ ಗೌಡ, ತಾ.ಪಂ ಸದಸ್ಯ ಕೃಷ್ಣಯ್ಯ ಆಚಾರ್ಯ, ಬಂದಾರು ಪಂಚಾಯತ್ ಅಧ್ಯಕ್ಷ ಉದಯ ಬಿ.ಕೆ., ಸೇವಾ ಪ್ರತಿನಿದಿ ನಿರಂಜನ್, ಡೊಂಬ ಗೌಡ, ಆಶೋಕ್ ಭಟ್ ಕಾನಿಷ್ಕ, ಶ್ರೀಧರ ಗೌಡ, ಪ್ರಶಾಂತ್ ಗೌಡ, ಪ್ರಚಾರ ಸಮಿತಿಯ ಸಂಚಾಲಕ ಮೋಹನ್ ಬಂಗೇರ, ಗೀರಿಶ್ ಬಿ.ಕೆ, ಪಂಚಾಯತ್ ಸದಸ್ಯ ದಿನೇಶ್ ಗೌಡ, ಆಶೋಕ್ ಗೌಡ ಪಾಂಜಲ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.