ನಾರಾವಿ ಗುರುನಾರಾಯಣ ಸೇವಾ ಸಂಘದ ನೂತನ ಜಾಗಕ್ಕೆ ಗುದ್ದಲಿ ಪೂಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

naravi billava sangha ke shilanyasa copyನಾರಾವಿ : ನಾರಾವಿ ಗುರುನಾರಾಯಣ ಸೇವಾ ಸಂಘದ ನೂತನ ಜಾಗಕ್ಕೆ ಗುದ್ದಲಿ ಪೂಜೆ ಮಾ.9 ರಂದು ನಾರಾವಿ ಗ್ರಾಮದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಬಲ್ಯೊಟ್ಟು ಆಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಆಶೀರ್ವಚನವನ್ನು ನೀಡಿದರು. ಹಾಗೂ ನಾರಾವಿ ಸೈಂಟ್ ಆಂಟನಿ ಚರ್ಚ್‌ನ ಧರ್ಮ ಗುರುಗಳಾದ ಫಾ| ಲೂವಿಸ್ ಕುಟ್ಹಿನೋ, ಹೊಸ್ಮಾರು ಮಸೀದಿಯ ಧರ್ಮ ಗುರುಗಳಾದ ಜಲೀಲ್ ಸಖಾತಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಾರಾವಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜೀವಂಧರ ಕುಮಾರ್, ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ವಿ.ಕಿಣಿ, ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ ಜೈನ್, ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ತಂತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವೇದಿಕೆಯಲ್ಲಿ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಯಶೋಧ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಉದಯ ಹೆಗ್ಡೆ, ಶ್ರೀಮತಿ ಸುಜಲತ, ಶ್ರೀಮತಿ ವಸಂತಿ ಊರಿನ ನಾಗರಿಕರು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಡಿ.ಕೆ. ಸ್ವಾಗತಿಸಿ,ವಸಂತ ಧನಲಕ್ಷ್ಮಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.