ವ್ಯವಸ್ಥಿತ ರೀತಿಯಲ್ಲಿ ಗ್ರಾಮಸಭೆ ನಡೆಸಲು ಅನುವುಮಾಡಿಕೊಟ್ಟ ಗ್ರಾಮಸ್ಥರಿಗೆ ಅಭಿನಂದನೆ: ರವೀಂದ್ರ ಪೂಜಾರಿ

naravi gramashabe copyಬೇಡಿಕೆಗಳು
ಮನೆಕಟ್ಟಲು ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯಿಂದ ಪರವಾನಿಗೆ.
ಉದ್ಯೋಗಖಾತರಿ ಮೊತ್ತ ಶೀಘ್ರ ಬಿಡುಗಡೆ ನೀರಿನ ಪೈಪ್‌ಲೈನ್ ಅಳವಡಿಕೆ ಮನೆ ರಿಪೇರಿಗೆ ಸಹಾಯಧನ. ಕಾಡುಪ್ರಾಣಿಗಳಿಗೆ (ಕಾಡುಕೋಣ) ತಡೆಬೇಲಿ, ಕೋತಿಗಳ ತೊಂದರೆ ತಪ್ಪಿಸುವುದು.  

ಇಲಾಖೆ ಮಾಹಿತಿ
ಎಲ್ಲಾ ಪಿಂಚಣಿದಾರರು ಕಡ್ಡಾಯ ಆಧಾರ್ ಜೋಡನೆ.
ಅರಣ್ಯ ಇಲಾಖೆಯಿಂದ ಸಸಿಗಳಿಗೆ ಪ್ರೋತ್ಸಾಹ ಧನ.
ಮಿಶ್ರತಳಿ, ಕರುಸಾಕಣೆ, ಆಡು ಸಾಕಣೆ ಸಹಾಯಧನ.
ಕೃಷಿ ಇಲಾಖೆಯಿಂದ ಶೇ.50% ಸುಣ್ಣ, ಹುಲ್ಲು ಕಟಾವು ಯಂತ್ರ (ಸಬ್ಸಿಡಿ ದರದಲ್ಲಿ), 100% ಸಹಾಯಧನದಲ್ಲಿ ದ್ವಿದಳದಾನ್ಯ ಬಿತ್ತನೆ ಬೀಜ.
ಆರ್‌ಟಿಇ ಉಚಿತ ಶಿಕ್ಷಣ ನೊಂದಾವಣೆ.
ನವೋದಯ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ.
ಆರೋಗ್ಯ ಇಲಾಖೆಯಿಂದ ಜನನಿ ಸುರಕ್ಷ ಯೋಜನೆ, ತಾಯಿಭಾಗ್ಯ, ನಗು-ಮಗು ಯೋಜನೆ, ಆರೋಗ್ಯ ಕಾರ್ಡು.

ನಾರಾವಿ: ಯಾವುದೇ ಸಮಸ್ಯೆಗಳು ಇದ್ದಲ್ಲಿ ಗ್ರಾಮಸಭೆಯಲ್ಲಿ ಮನವರಿಕೆ ಮಾಡಿದಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ. ಜನಪ್ರತಿನಿಧಿಗಳಾದ ನಾವು ನಿಮ್ಮ ಯಾವುದೇ ರೀತಿಯ ಬೇಡಿಕೆಗಳು ಇದ್ದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಸದಾ ಸಿದ್ದರಿದ್ದೇವೆ ಎಂದರು ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು ಹೇಳಿದರು.
ಅವರು ಮಾ.13ರಂದು ನಾರಾವಿ ಗ್ರಾ.ಪಂ. ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿ ವ್ಯವಸ್ಥಿತ ರೀತಿಯಲ್ಲಿ ಗ್ರಾಮಸಭೆ ನಡೆಸಲು ಸರ್ವರು ಸಹಕರಿಸಿದರೆ ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯ ಎಂದು ಗ್ರಾಮಸಭೆ ನಡೆಸಲು ಉತ್ತಮ ರೀತಿಯಲ್ಲಿ ಸ್ಪಂದಿಸಿದಕ್ಕೆ ಅಭಿನಂದನೆ ಸಲ್ಲಿಸಿದರು. ಕೇವಲ ಅರ್ಜಿಗಳನ್ನು ಕೊಟ್ಟರೆ ಸಾಲದು ಅದು ಏನು ಆಗಿದೆ ಎಂಬುದು ಆಗಾಗ ಪಂಚಾಯತ್‌ಗೆ ಭೇಟಿ ಕೊಟ್ಟು ಪರಿಷ್ಕರಿಸುವುದು ಗ್ರಾಮಸ್ಥರಾದ ನಿಮ್ಮ ಕರ್ತವ್ಯ ಎಂದರು.
ಜಿ.ಪಂ. ಸದಸ್ಯರಾದ ಧರಣೇಂದ್ರ ಕುಮಾರ್ ಮಾತನಾಡಿ ಇದು ನಮ್ಮ ವಿಧಾನಸಭೆ ಇದ್ದ ಹಾಗೆ, ಗ್ರಾಮ ಸಭೆಯಲ್ಲಿ ನಿಮ್ಮ ದೂರು, ಬೇಡಿಕೆಗಳನ್ನು ನೀಡುವ ಸಭೆಯೇ ಗ್ರಾಮಸಭೆ. ಅಭಿವೃದ್ಧಿ ಬಗ್ಗೆ ಚರ್ಚಿಸಲು ಗ್ರಾಮಸಭೆಯಲ್ಲಿ ಅವಕಾಶವಿದೆ ಎಂದರು. ಜಿಲ್ಲಾ ಪಂಚಾಯತ್ ಅನುದಾನದಿಂದ ಸಿಗುವ ಅನುದಾನವನ್ನು ಒದಗಿಸುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಾರಾವಿ ಮರೋಡಿ ರಸ್ತೆ ಅಭಿವೃದ್ಧಿ, ಕುತ್ಲೂರು-ಅಬ್ಬಿಪಾಲ್ಸ್ ರಸ್ತೆ ಅಭಿವೃದ್ಧಿ, ಸಬ್‌ಸ್ಟೇಷನ್‌ಗೆ ಜಾಗ ಮಂಜೂರಾಗಿದ್ದು ಸದಸ್ಯ ಉದಯ ಹೆಗ್ಡೆ ಪ್ರಸ್ತಾಪಿಸಿದಾಗ ಕೂಡಲೇ ಸ್ಪಂದಿಸುವುದಾಗಿ ಸಭೆಯಲ್ಲಿ ಭರವಸೆ ನೀಡಿದರು. ಕಂದಾಯಧಿಕಾರಿ ಮಾತನಾಡಿ ಕುರಿಯಾಡಿ ಅಂಗನವಾಡಿ ಯ ದಾಖಲೆ ಪತ್ರಗಳು ಇನ್ನು ಸರಿ ಆಗಿಲ್ಲದ ಕಾರಣ ಬಾಬು ಮಲೆಕುಡಿಯ ಇವರು ಜಾಗವನ್ನು ಸರಕಾರಕ್ಕೆ ಹಸ್ತಾಂತರಿಸಿದರಿಂದ ಅವರ ಪಟ್ಟ ಜಾಗದಲ್ಲಿ ಅಂಗನವಾಡಿ ಕಟ್ಟಡ ಇದೇ ಪಂಚಾಯತ್‌ನಿಂದ ನಿರ್ಣಯ ಮಾಡಿ ಕಳಿಸಿದಲ್ಲಿ ಕೂಡಲೆ ದಾಖಲೆಗಳನ್ನು ಪಡೆಯುವಲ್ಲಿ ಸಹಕರಿಸುವುದಾಗಿ ಮತ್ತು ಪಂಚಾಯತ್‌ಗೆ ಸೇರಿದ ಜಾಗ ಇದ್ದಲ್ಲಿ ಸರ್ವೆ ಮಾಡಿಕೊಡಬೇಕಾಗಿ ಬೇಡಿಕೆ ಇಟ್ಟಲ್ಲಿ ಕೂಡಲೇ ಸರ್ವೆ ಮಾಡಿಕೊಡು ವುದಾಗಿ ತಿಳಿಸಿದರು. ಉಪ ಅರಣ್ಯಾಧಿ ಕಾರಿ, ಅರಣ್ಯ ರಕ್ಷಕ – ವನ್ಯಜೀವಿ ವಿಭಾಗ, ಪಶು ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೆಸ್ಕಾಂ, ಆರೋಗ್ಯ ಇಲಾಖೆ, ಮಾಹಿತಿ ನೀಡಿದರು. ನೋಡಲ್ ಅಧಿಕಾರಿಯಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ಶುಭಾಶ್ ಜಾದಾವ್ ಮಾತನಾಡಿ, ತಾಲೂಕಿನಲ್ಲಿ 350 ಶಾಲೆಗಳಿದ್ದು 43,072 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಒಟ್ಟು 808 ಶಿಕ್ಷಕರ ಹುದ್ದೆ ಹೊಂದಿದ್ದು 740 ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಕೊರತೆ ಇರುವ ಶಿಕ್ಷಕರನ್ನು ಕೂಡಲೇ ನೇಮಕಾತಿಯ ಬಗ್ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ತಾಲೂಕಿನಲ್ಲಿ ಆರ್.ಟಿ.ಇ. ಯೋಜನೆ ಯಡಿ ಉಚಿತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. 17 ಶಾಲೆಗಳಿಂದ 260 ಶೀಟುಗಳು ಲಭ್ಯವಿದೆ. ಮುಗುಳಿಯಲ್ಲಿ ನವೋದಯ ವಸತಿ ಶಾಲೆ ಪ್ರಾರಂಭವಾಗಿದೆ. ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಇಲ್ಲಿ ಅವಕಾಶವಿದೆ ಎಂದು ತಿಳಿಸಿದರು. ಎಕೌಂಟೆಂಟ್ ಮಧು ಹೆಚ್.ಎಂ. ವರದಿ ಮಂಡಿಸಿದರು. ಪಿ.ಡಿ.ಒ. ನಿರ್ಮಲ್ ಕುಮಾರ್ ಸ್ವಾಗತಿಸಿ ನಿರೂಪಿಸಿದರು. ಪಂಚಾಯತ್ ಸದಸ್ಯ ಅನಿಲ್ ರೋಶನ್ ವಂದಿಸಿದರು. ಸಿಬ್ಬಂದಿ ಸತೀಶ್ ವಾರ್ಡ್ ಸಭೆಗಳ ಬೇಡಿಕೆ ಮತ್ತು ದೂರುಗಳ ಪಟ್ಟಿ ಓದಿ ಸಭೆಗೆ ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಯಶೋದಾ, ಸದಸ್ಯರಾದ ಉದಯ ಹೆಗ್ಡೆ, ಶ್ರೀಮತಿ ಸುಜಲತಾ, ಸಂಜೀವ, ಶ್ರೀಮತಿ ಎಲಿಜಾ, ಶ್ರೀಮತಿ ಪ್ರಮೀಳ ಭಟ್, ಶ್ರೀಮತಿ ಭಾರತಿ, ಶ್ರೀಮತಿ ಜಯಂತಿ, ಶ್ರೀಮತಿ ವಸಂತಿ, ಕುಮಾರಿ ಗಿರಿಜಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.