ಮಂಜುಳಾ -ನಾಗರಾಜ

nagaraj manjula new copyಉಜಿರೆಯ ಶ್ರೀ ಗಣೇಶ ಪ್ಲವರ‍್ಸ್‌ನ ಮಾಲಕ ಶಿವಶಂಕರ ಕುಡ್ವ ಮತ್ತು ಶ್ರೀಮತಿ ಸುಧಾ ಕುಡ್ವ ದಂಪತಿಗಳ ಪುತ್ರಿ ಮಂಜುಳ ರವರ ವಿವಾಹವು ಶ್ರೀಮತಿ ಅನಸೂಯ ಮತ್ತು ಗಣೇಶ್ ವಿಟ್ಠಲ ಕಾಮತರ ಪುತ್ರ ನಾಗರಾಜರೊಂದಿಗೆ ಮಾ.6 ರಂದು ಉಜಿರೆ ರಾಮನಗರದ ಶ್ರೀ ಸೀತಾರಾಮ ಕಲಾಮಂದಿರದಲ್ಲಿ ನಡೆಯಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರು, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಉಜಿರೆ ಶ್ರೀ. ಧ.ಮಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೋ ಎಸ್. ಪ್ರಭಾಕರ್,ಉಜಿರೆಯ ಹಿರಿಯ ಉದ್ಯಮಿಗಳಾದ ಸುಬ್ರಾಯ ಶೆಣೈ, ನ್ಯಾಯವಾದಿಗಳಾದ ಪ್ರತಾಪ ಸಿಂಹ ನಾಯಕ್, ಉಜಿರೆ ಸಹನಾ ಐಸ್‌ಕ್ರೀಂ ಮಾಲಕ ಸುರೇಂದ್ರ ನಾಯಕ್, ಊರ ಪರವೂರ ಗಣ್ಯರು, ಅತಿಥಿಗಳು, ಬಂಧು ಮಿತ್ರರು, ಆಪ್ತೇಷ್ಟರು ಆಗಮಿಸಿ ನೂತನ ದಂಪತಿಗಳನ್ನು ಹರಸಿ ಆಶೀರ್ವದಿಸಿದರು. ಮಾರ್ಚ್ 5ರ ರಾತ್ರಿ ಸೀತಾರಾಮ ಕಲಾಮಂದಿರದಲ್ಲಿ ನಡೆದ ಫೂಲ್‌ಮುಡ್ಡಿ ಕಾರ್ಯಕ್ರಮದಂಗವಾಗಿ ಖ್ಯಾತ ಗಾಯಕರಿಂದ ಭಜನಾ ಸಂಧ್ಯಾ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.