ಒಂದು ವರ್ಷದ ಅವಧಿಯಲ್ಲಿ 81 ಗ್ರಾಮಗಳಲ್ಲಿ ತಲಾ ಒಂದು ಕಾಮಗಾರಿ ಮಂಜೂರಾತಿ ಗುರಿ: ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Sulkerimugru pade rasthe shilanyasa copyಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೆ ರೂ.12 ಕೋಟಿ ವೆಚ್ಚದಲ್ಲಿ ಮಿನಿ ವಿಧಾನ ಸೌಧ ಸೇರಿದಂತೆ ತಾಲೂಕಿನಲ್ಲಿ ರಸ್ತೆ, ಸೇತುವೆ, ಹಾಸ್ಟೇಲ್‌ಗಳು ಮೊದಲಾದ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದೇನೆ. ಮುಂದೆ ಒಂದು ವರ್ಷದ ಅವಧಿಯಲ್ಲಿ ತಾಲೂಕಿನ 81 ಗ್ರಾಮಗಳಿಗೆ ತಲಾ ಒಂದು ಕಾಮಗಾರಿಯನ್ನು ತರುವ ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಮಾ.13ರಂದು ರೂ.20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕುಕ್ಕೇಡಿ ಗ್ರಾಮದ ಪೊಸಲಾಯಿ ಪ.ಪಂಗಡ ರಸ್ತೆ ಕಾಂಕ್ರೀಟೀಕರಣ, ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಲ್ಕೇರಿಮೊಗ್ರು ಗ್ರಾಮದ ಮಾಳಿಗೆ-ಪಂಜಾಲ ರಸ್ತೆ ಕಾಂಕ್ರೀಟೀಕರಣ ಮತ್ತು ರೂ.4.30 ಲಕ್ಷ ವೆಚ್ಚದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ನಿರ್ಮಾಣವಾಗಲಿರುವ ಸುಲ್ಕೇರಿಮೊಗ್ರು ಗ್ರಾಮದ ನಡಿಬೆಟ್ಟು-ಪಾದೆರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
1962ರಲ್ಲಿ ವೈಕುಂಠ ಬಾಳಿಗರು ಪ್ರಥಮವಾಗಿ ತಂದ ವಿದ್ಯುತ್‌ನ್ನು ತಾಲೂಕಿನ 81 ಗ್ರಾಮಗಳಿಗೆ ಕೊಂಡೋಗುವ ಕೆಲಸವನ್ನು ಮಾಡಿದ್ದೇನೆ. ಮುಂದಿನ ಆರು ತಿಂಗಳ ಒಳಗೆ ತಾಲೂಕಿನ ಪ್ರತಿಯೊಂದು ಮನೆಗೆ ವಿದ್ಯುತ್ ತಲುಪಿಸುವ ಪ್ರಯತ್ನ ಮಾಡುತ್ತೇನೆ. ಇದರಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ವಿದ್ಯುತ್ ಹೋಗಲು ಕೆಲವೊಂದು ಕಾನೂನು ಅಡಚಣೆಗಳಿದ್ದು, ಇದನ್ನೂ ಕೂಡಾ ಪರಿಹರಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದೇನೆ ಎಂದು ಹೇಳಿದರು.
1982ರಲ್ಲಿ ನಾನು ಪ್ರಥಮ ಬಾರಿಗೆ ಶಾಸಕನಾದಾಗ ತಾಲೂಕು ಹೇಗಿತ್ತು ಈಗ ಹೇಗಿದೆ ಏನೆಲ್ಲಾ ಬದಲಾವಣೆ ಆಗಿದೆ ಎಂದು ಜನರೇ ಚಿಂತನೆ ಮಾಡಿ ನೋಡಲಿ, ನಾನು ತಾಲೂಕಿನ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದೇನೆ, ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರಕಾರದಿಂದ ಮಂಜೂರುಗೊಳಿಸಿ ತಾಲೂಕಿಗೆ ತಂದಿದ್ದೇನೆ ಪ್ರತಿ ಗ್ರಾಮದಲ್ಲಿ ಸೇತುವೆ, ರಸ್ತೆ, ಸೇರಿದಂತೆ ಗ್ರಾಮದ ಶೇ. 80 ಬೇಡಿಕೆಗಳು ಈಡೇರಿದೆ. ಮುಂದೆ ಒಂದು ವರ್ಷದ ಅವಧಿ ಇದೆ. ಈ ಅವಧಿಯಲ್ಲಿಯೂ ಸಾಧ್ಯವಾದಷ್ಟು ಅಭಿವೃದ್ಧಿ
ಯೋಜನೆಯನ್ನು ಮಂಜೂರು ಗೊಳಿಸುತ್ತೇನೆ, ಜನರ ಹೆಚ್ಚಿನ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಭರವಸೆಯಿತ್ತರು. ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್‌ಕುಮಾರ್ ಮಿತ್ತಮಾರ್ ಸ್ವಾಗತಿಸಿ, ಸುಲ್ಕೇರಿಮೊಗ್ರು ಗ್ರಾಮದಲ್ಲಿ ನಡೆದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ವಸಂತ ಬಂಗೇರರೇ ಕಾರಣರಾಗಿದ್ದಾರೆ. ಇದು ಈ ಭಾಗದ ಎಲ್ಲಾ ಜನರ ಮನಸ್ಸಿನಲ್ಲಿಯೂ ಇದೆ, ಆದರೆ ಒಂದಿಬ್ಬರು ಇಲ್ಲಿಯ ಅಭಿವೃದ್ಧಿಗೆ ಅಡ್ಡಿಪಡಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.
ವಿವಿಧ ಕಡೆಗಳಲ್ಲಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯೆ ವಿನೂಷ ಪ್ರಕಾಶ್, ಕುಕ್ಕೇಡಿ ಗ್ರಾಮ ಪಂಚಾಯತು ಅಧ್ಯಕ್ಷೆ ತೇಜಾಕ್ಷಿ, ಸದಸ್ಯರಾದ ಪದ್ಮನಾಭ ಬರೆಮೇಲು, ಸರೋಜಿನಿ, ಶ್ರೀಮತಿ ಗೌರಿ, ಉಪಾಧ್ಯಕ್ಷ ಅಶೋಕ್ ಪಾಣೂರು, ಪಿ.ಡಿ.ಒ. ರಶ್ಮಿ ಹಾಗೂ ರವಿ, ವಿಠಲ ಪೂಜಾರಿ, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.