ಬೆಳ್ತಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಸಂಘದ ತಾಲೂಕು ಮಟ್ಟದ ಸಮಾವೇಶ

Advt_NewsUnder_1
Advt_NewsUnder_1
Advt_NewsUnder_1

bel milk society1 copyಬೆಳ್ತಂಗಡಿ : ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಸಂಘದ ತಾಲೂಕು ಮಟ್ಟದ ಸಮಾವೇಶ ಇಂದು(ಮಾ.11)ರಂದು ಬೆಳ್ತಂಗಡಿ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದ.ಕ.ಹಾ.ಉ. ಒಕ್ಕೂಟದ ನಿರ್ದೇಶಕ ಬಿ. ನಿರಂಜನ್ ಉದ್ಘಾಟಿಸಿದರು. ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಎನ್.ಎಸ್. ಗೋಖಲೆ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಹಾ.ಉ.ಸ.ಸ. ನೌಕರರ ಒಕ್ಕೂಟದ ಅಧ್ಯಕ್ಷ ಆನಂದ ಎಸ್. ಪೂಜಾರಿ, ಮಂಗಳೂರು ನೌಕರರ ಟ್ರಸ್ಟ್‌ನ ಸದಸ್ಯ ಎಸ್. ಕೇಶವ ರಾವ್, ಬೆಳ್ತಂಗಡಿ ಎಪಿಎಂಸಿ ಸದಸ್ಯ ಕೇಶವ ಗೌಡ, ವಲಯ ವಿಸ್ತರಣಾಧಿಕಾರಿ ಸುಚಿತ್ರಾ, ಉಪವ್ಯವಸ್ಥಾಪಕ ಎಂ. ಶ್ರೀನಿವಾಸ್, ಪುತ್ತೂರು ವಲಯ ಉಪವ್ಯವಸ್ಥಾಪಕ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಪೆರಿಂಜೆ ಹಾ.ಉ.ಸ. ಸಂಘದ ನಿವೃತ್ತ ಕಾರ್ಯದರ್ಶಿ ಉದಯ ಕುಮಾರ್ ಮತ್ತು ನಿರಂಜನ್ ಬಾವಂತಬೆಟ್ಟು ಅವರಿಗೆ ಸನ್ಮಾನ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಸೀತಾರಾಮ್ ಹೆಬ್ಬಾರ್ ಕಬ್ಬಿನಾಲೆ ಉಪನ್ಯಾಸ ನೀಡಿದರು.
ರೇವತಿ ಕನ್ಯಾಡಿ ಪ್ರಾರ್ಥನೆ ಹಾಡಿ, ಬೆಳ್ತಂಗಡಿ ಹಾ.ಉ.ಸ.ಸಂ ಅಧ್ಯಕ್ಷ ಬಿ. ಮಹಮ್ಮದ್ ಶರೀಫ್ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಮೇಬಲ್ ಕ್ರಾಸ್ತ ವರದಿ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.