HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಧರ್ಮಸ್ಥಳ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ

dharmasthala anudnaitha uttama shale prasast copy

ಧರ್ಮಸ್ಥಳ : ಬೆಳ್ತಂಗಡಿ ಭಾರತೀಯ ಜೀವ ವಿಮಾ ಸಂಸ್ಥೆಯವರು ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ತಾಲೂಕಿನ ಉತ್ತಮ ಶಾಲೆ ಎಂದು ಗುರುತಿಸಿ ಗೌರವಿಸಿರುತ್ತಾರೆ. ಮಾ.೨ ರಂದು ಧರ್ಮಸ್ಥಳ ಶಾಲೆಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಡಿ.ಧರ್ಣಪ್ಪರವರು ನಡೆಸಿ ಒಳ್ಳೆಯ ಕೆಲಸಗಳು ನಡೆದಾಗ ಸಮಾಜ ಸಂಘ ಸಂಸ್ಥೆಗಳು ಅದನ್ನು ಗುರುತಿಸಿ ಗೌರವಿಸುತ್ತಾರೆ. ಅಂತೆಯೇ ಜೀವ ವಿಮಾ ನಿಗಮದವರು ನಮ್ಮ ಶಾಲೆಯನ್ನು ತಾಲೂಕಿನ ಉತ್ತಮ ಶಾಲೆ ಎಂದು ಗುರುತಿಸಿ ಗೌರವಿಸುವಿಸಿರುವುದು ನಮ್ಮ ಸಂಸ್ಥೆಗೆ ಸಂದ ಗೌರವ ಎಂದು ಜೀವ ವಿಮಾ ನಿಗಮಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.
ಬೆಳ್ತಂಗಡಿ ಜೀವ ವಿಮಾ ಸಂಸ್ಥೆಯ ಮುಖ್ಯ ಪ್ರಬಂಧಕ ಆರ್.ಡಿ ಯೋಗೇಂದ್ರರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ತಾಲೂಕಿನಲ್ಲಿ ಧರ್ಮಸ್ಥಳ ಶಾಲೆಯನ್ನು ಉತ್ತಮ ಶಾಲೆ ಎಂದು ಗುರುತಿಸಿರುತ್ತೇವೆ ಎಂದು ಹೇಳಿ, ಈ ಸಂಸ್ಥೆ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳಾದ ೫ನೇ ತರಗತಿಯ ಪ್ರೀತಿ ದೇವಾಡಿಗ, ೬ನೇ ತರಗತಿಯ ನಯನ ಕುಮಾರಿ, ೭ನೇ ತರಗತಿಯ ದೀಕ್ಷಿತ್ ರವರನ್ನು ಹೆತ್ತವರ ಸಮ್ಮುಖದಲ್ಲಿ ಸ್ಮರಣಿಕೆ ನೀಡಿ ಗೌರವಿಸಿದರು.
ಜೀವ ವಿಮಾ ನಿಗಮದ ಸ್ಥಳೀಯ ಏಜೆಂಟರಾದ ಲೋಕೇಶ್ ಶೆಟ್ಟಿಯವರು ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು.
ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಾಲಾ ಅಧ್ಯಾಪಕಿ ಶ್ರೀಮತಿ ಮನೋರಮಾ ಸ್ವಾಗತಿಸಿ, ಶ್ರೀಮತಿ ಸತ್ಯವತಿ ಧನ್ಯವಾದವಿತ್ತರು. ಹಾಗೂ ಡಿ ವಸಂತ್ ಭಟ್, ಪಿ. ಸುಬ್ರಹ್ಮಣ್ಯ ರಾವ್ ನಿರೂಪಿಸಿದರು. ಶಾಲಾ ಶಿಕ್ಷಕರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.