ಲಯನ್ಸ್ ಕ್ಲಬ್ ಪ್ರಾಂತೀಯ ವಲಯಾಧ್ಯಕ್ಷರ ಭೇಟಿ

vnr loins club copyವೇಣೂರು: ಧಾರ್ಮಿಕವಾಗಿ ವೇಣೂರಿಗೆ ಐತಿಹಾಸಿಕ ಹಿನ್ನೆಲೆ ಇದೆ. ಇಂತಹ ವಲಯದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಲಯನ್ಸ್ ಕ್ಲಬ್ ಕೂಡಾ ಸಾಕಷ್ಟು ಸೇವಾ ಚಟುವಟಿಕೆಗಳನ್ನು ನಡೆಸಿ ಐತಿಹಾಸಿಕವಾಗಿ ಉಳಿಯುವಂತೆ ಮಾಡಿದೆ. ಒಗ್ಗಟ್ಟಿನ ಮೂಲಕ ಇನ್ನಷ್ಟು ಸೇವಾ ಚಟುವಟಿಕೆ ಮಾಡುವ ಶಕ್ತಿ ಲಯನ್ಸ್ ಕ್ಲಬ್‌ಗೆ ಬರಲಿ ಎಂದು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಪ್ರಮೋದ್ ಕುಮಾರ್ ಹೇಳಿದರು.
ಅವರು ಮಾ. 5 ರಂದು ವೇಣೂರು ಜೆಪಿ ಟವರ್‌ನ ಜೆಪಿ ಹಾಲ್‌ನಲ್ಲಿ ಜರಗಿದ ಲಯನ್ಸ್ ಕ್ಲಬ್ ಪ್ರಾಂತೀಯ ಹಾಗೂ ವಲಯಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ವೇಣೂರು ಲಯನ್ಸ್ ಕ್ಲಬ್‌ಗೆ ಸೇರ್ಪಡೆಗೊಂಡ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ಸ್ ಕ್ಲಬ್ ವಲಯಧ್ಯಕ್ಷ ರಾಜು ಶೆಟ್ಟಿಯವರು ವಲಯದ ಕ್ಲಬ್‌ಗಳ ಕಾರ್ಯಸಾದನೆಯನ್ನು ಶ್ಲಾಘಿಸಿದರು. ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ ಎಂ.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ರವಿರಾಜ್ ಗೌಡ, ಜಗನ್ನಾಥ ದೇವಾಡಿಗ ಎಲ್‌ಐಸಿ ಅವರು ವೇಣೂರು ಲಯನಸ್ ಕ್ಲಬ್‌ಗೆ ನೂತನವಾಗಿ ಸೇರ್ಪಡೆಗೊಂಡರು.
ಸನ್ಮಾನ: ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಹೆಗೆ, ರಾಷ್ಟ್ರಮಟ್ಟದ ಉತ್ತಮ ಅಂಗನವಾಡಿ ಶಿಕ್ಷಕಿ ಜಾನಕಿ ಪಿ., ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವೇಣೂರು ವಿದ್ಯೋದಯ ಶಾಲಾ ನಿವೃತ್ತ ಪದವೀದರ ಮುಖ್ಯ ಶಿಕ್ಷಕಿ ಶೀಲಾ ಎಸ್. ಹೆಗೆ, ರವಿರಾಜ್ ಗೌಡ, ಯಶೋದಾ ಶಟ್ಟಿ, ಬಾಲಪ್ರತಿಭೆ ನಿಹಾತ್ ಅವರನ್ನು ಸನ್ಮಾನಿಸಲಾಯಿತು.
ನಾರಾವಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೇಮಾ ಕುಮಾರ್ ಪ್ರಾಂತೀಯ ಅಧ್ಯಕ್ಷರನ್ನು ಹಾಗೂ ಜಗದೀಶ್ಚಂದ್ರ ಡಿ.ಕೆ. ಅವರು ವಲಯಧ್ಯಕ್ಷರನ್ನು ಪರಿಚಯಿಸಿದರು. ಲಯನ್ಸ್ ಕ್ಲಬ್ ರಾಜ್ಯಪಾಲರ ಪ್ರಾಂತೀಯ ವಿಶೇಷ ಪ್ರತಿನಿಧಿ ಪ್ರವೀಣ್ ಕುಮಾರ್ ಇಂದ್ರ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಶೀಲ ಎಸ್. ಹೆಗ್ಡೆ, ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಸದಾನಂದ ಪೂಜಾರಿ, ನಾರಾವಿಯ ಅಧ್ಯಕ್ಷ ಪ್ರೇಮ್‌ಕುಮಾರ್, ಕೋಶಾಧಿಕಾರಿಗಳಾದ ಸುಧೀರ್ ಭಂಡಾರಿ, ಅನಿಲ್ ನಾಯ್ಗ, ಪಕಿರಬ್ಬ, ಹಿಲಾರಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ನವಚೇತನ ವಿಶೇಷ ಶಾಲೆಗೆ ಹಾಗೂ ಉಮೇಶ್ ಕುತ್ಲೂರು ಅವರ ಚಿಕಿತ್ಸೆಗೆ ಆರ್ಥಿಕ ಸಹಾಯಹಸ್ತ ನೀಡಲಾಯಿತು.
ಅತಿಥೇಯ ವೇಣೂರು ಕ್ಲಬ್‌ನ ಪದಾಧಿಕಾರಿಗಳು ಸಹಕರಿಸಿದರು. ವಲಯದ ಕಾರ್ಯದರ್ಶಿಗಳಾದ ನಿತೀಶ್ ಎಚ್., ಮೇದಿನಿ ಡಿ. ಗೌಡ, ವಿಲಿಯಂ ಕೊಡ್ದೆರೊ ಹಾಗೂ ವಿಜಯ ಕುಮಾರ್ ಅಳದಂಗಡಿ ಅವರು ವರದಿ ವಾಚಿಸಿದರು. ವೆಂಕಟೇಶ್ ಎಂ.ಬಿ. ಸ್ವಾಗತಿಸಿ ಸುಜಿತ್ ವಂದಿಸಿದರು. ವಿನಯ ಹಾಗೂ ಶಿಕ್ಷಕ ಧರಣೇಂದ್ರ ಕೆ. ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.