HomePage_Banner_
HomePage_Banner_
HomePage_Banner_

ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘದ ಶಿಶಿಲ ಶಾಖಾ ಕಟ್ಟಡ ಶ್ರೀನಿಧಿ ಇದರ ಉದ್ಘಾಟನೆ

Advt_NewsUnder_1

shishila

shishila1

shishila2

shishila3

shishila4

shishila5

shishila6ಶಿಶಿಲ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಸಿನಮಕ್ಕಿ ಇದರ ಶಿಶಿಲ ಶಾಖಾ ಕಟ್ಟಡ ಶ್ರೀನಿಧಿ ಇದರ ಉದ್ಘಾಟನಾ ಸಮಾರಂಭವು ಮಾ.9 ರಂದು ಶಿಶಿಲದಲ್ಲಿ ಜರುಗಿತು.
ನೂತನ ಕಟ್ಟಡ ಹಾಗೂ ಭದ್ರತಾ ಕೊಠಡಿಯನ್ನು ಮಂಗಳೂರಿನ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ನೆರವೇರಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಹತ್ಯಡ್ಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎ. ಜಗನ್ನಾಥ ಗೌಡ ವಹಿಸಿದ್ದರು.
ಭದ್ರತಾ ಕೋಶದ ಉದ್ಘಾಟನೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಬಿ. ನಿರಂಜನ ಬಾವಂತಬೆಟ್ಟು, ವಾಣಿಜ್ಯ ಸಂಕೀರ್ಣದ ಉದ್ಘಾಟನೆಯನ್ನು ತಾ.ಪಂ.ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ, ಸೌರವಿದ್ಯುತ್ ದೀಪ ಉದ್ಘಾಟನೆಯನ್ನು ಶಿಶಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯಂತಿ ಪೂವಪ್ಪ ಪೂಜಾರಿ ನೆರವೇರಿಸಿದರು.
ಅಭ್ಯಾಗತರಾಗಿ ಶಿಶಿಲ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್.ಎಸ್. ಡಿ. ರಾಜಾರಾಮ, ಶಿಶಿಲ ಹಾ.ಉ.ಸ.ಸಂಘದ ಅಧ್ಯಕ್ಷ ಯೋಗೀಶ್ ದಾಮ್ಲೆ, ಶಿಶಿಲ ವೈಕುಂಠಪುರ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ಕೆ. ನಾರಾಯಣ, ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಉಪಸ್ಥಿತರಿದ್ದರು. ಈ ಸಂದರ್ಭ ಅಶೋಕ ಪೂಜಾರಿ ಶಿಶಿಲ, ನೆಲ್ಯಾಡಿ ಇಂಜಿನಿಯರ್ ಶಿವಣ್ಣ ಪಿ. ಹೆಗ್ಡೆ, ಮೋಹನ ಜೋಶಿ ಶಿಶಿಲ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಎಂ. ಕೇಶವ ರಾವ್ ಸ್ವಾಗತಿಸಿದರು. ಪ್ರವೀಣ್ ಕುಲಾಲ್ ಮತ್ತು ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.