ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕ್ರೀಡಾಕೂಟ ಬೆಳಾಲಿನ ಅಪೇಕ್ಷ ರಾಜ್ಯಮಟ್ಟದಲ್ಲಿ ಪ್ರಥಮ

Apeksha copyಬೆಳಾಲು : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರಿನಲ್ಲಿ ಮಾ.7 ರಂದು ನಡೆದ  ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಿಶೋರಿಯರ ವಿಭಾಗದ 100 ಮೀ ಓಟದ ಸ್ಪರ್ಧೆಯಲ್ಲಿ ಬೆಳಾಲು ಗ್ರಾಮದ ಕು| ಅಪೇಕ್ಷಾ ಅಮುಂಜಿ  ಪ್ರಥಮ ಸ್ಥಾನ ಗಳಿಸಿದರು. ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ  ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಉಜಿರೆ ಅನುಗ್ರಹ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಅಮುಂಜಿ ಪ್ರೇಮಲತಾ ಮತ್ತು ಉಜಿರೆ ವಿಶ್ವಾಸ್ ಟೈಲರ್ ಮಾಲಕ ವಿಶ್ವನಾಥ ಗೌಡ  ದಂಪತಿಯ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.