ನಡ ಹಾಲು ಉತ್ಪಾದಕರ ಸಂಘ : ಮಿಶ್ರತಳಿ ಕರುಗಳ ಪ್ರದರ್ಶನ ಮಿಶ್ರತಳಿ ದನ ಸಾಕಾಣಿಕೆ ಲಾಭದಾಯಕ: ಶಾಸಕ ಬಂಗೇರ

Nada januvaru pradarshana copyನಡ : ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ ಮತ್ತು ನಡ ಹಾಲು ಉತ್ಪಾದಕರ ಸಹಕಾರ ಸಂಘ ಇವರ ಜಂಟಿ ಆಶ್ರಯದಲ್ಲಿ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮವು ಮಾ.6ರಂದು ನಡ ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಜರುಗಿತು.
ಕರುಗಳ ಪ್ರದರ್ಶನವನ್ನು ಶಾಸಕ ಕೆ. ವಸಂತ ಬಂಗೇರ ಅವರು ಉದ್ಘಾಟಿಸಿ ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ 78 ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದು, ದಿನಕ್ಕೆ 80 ಸಾವಿರ ಹಾಲು ಸಂಗ್ರಹಣೆಯಾಗುತ್ತಿದೆ ಈ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು. ಸರಕಾರ ಹಾಲು ಉತ್ಪಾದಕರಿಗೆ ಲೀಟರಿಗೆ ರೂ.5 ರಂತೆ ಪ್ರೋತ್ಸಾಹಧನ ನೀಡುತ್ತಿದೆ. ಮಿಶ್ರತಳಿ ದನ ಸಾಕಾಣಿಕೆ ಲಾಭದಾಯಕವಾಗಿದೆ. ತಾಲೂಕಿನ ಪ್ರತಿ ಮನೆಯವರು ಎರಡು ಹಸುಗಳನ್ನು ಸಾಕುವಂತಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಜಿ.ಪಂ. ಸದಸ್ಯೆ ಸೌಮ್ಯಲತಾ ಮಾತನಾಡಿ ಹೈನುಗಾರಿಕೆಯಲ್ಲಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ಐದು ದನ ಸಾಕಿದವರಿಗೆ ಮಾತ್ರ ದೊರೆಯುತ್ತದೆ ಆದರೆ ಇದು ಸಣ್ಣ ರೈತರಿಗೂ ದೊರೆಯುವಂತಾಗಬೇಕು ಎಂದು ಸಲಹೆಯಿತ್ತರು. ದ.ಕ. ಒಕ್ಕೂಟದ ನಿರ್ದೇಶಕ ಬಿ. ನಿರಂಜನ್ ಮಾತನಾಡಿ ದ.ಕ. ಹಾಲು ಒಕ್ಕೂಟ ದಿಂದ ದಿನಕ್ಕೆ 4.50 ಲಕ್ಷ ಲೀಟರ್ ಹಾಲು ಸಂಗ್ರಹಣೆ ಮಾಡಲಾಗುತ್ತಿದೆ. ಉಭಯ ಜಿಲ್ಲೆಯಲ್ಲಿ ಒಟ್ಟು 5 ಲಕ್ಷ ಹಾಲಿನ ಬೇಡಿಕೆಯಿದ್ದು, ಉಳಿದ ಹಾಲನ್ನು ಹೊರ ಜಿಲ್ಲೆಗಳಿಂದ ತರಿಸಿ ಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಈಗ 80 ಸಾವಿರ ಲೀಟರ್ ಪ್ರತಿ ದಿನ ಸಂಗ್ರಹ ವಾಗುತ್ತಿದ್ದು, ಮುಂದಿನ ಮಾರ್ಚ್ ಒಳಗೆ 1 ಲಕ್ಷ ಲೀಟರ್ ಹಾಲು ಸಂಗ್ರಹಣೆ ಆಗುವ ದಿನ ದೂರವಿಲ್ಲ ಎಂದು ತಿಳಿಸಿದರು.
ಕರು ಪ್ರದರ್ಶನದಲ್ಲಿ ಪ್ರಥಮ, ದ್ವಿತೀಯ, ಹಾಗೂ ಚಾಂಪಿಯನ್ ಬಹುಮಾನಗಳನ್ನು ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆ.ಜೆ. ಆಗಸ್ಟಿನ್ ಅವರು ವಿತರಿಸಿ, ಕರು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಹೈನುಗಾರರು ಈ ಕಾರ್ಯಕ್ರಮಕ್ಕೆ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಮಂಗಳೂರಿನ ಡಾ| ಟಿ. ತಿಪ್ಪೇಸ್ವಾಮಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ್ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಕೆ.ವಸಂತ ಬಂಗೇರ, ಹಾಗೂ ಸಂಘದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಬೆಳ್ತಂಗಡಿ ಸಿ.ಎ. ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮುನಿರಾಜ ಅಜ್ರಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪಡ್ಪು ಹಾಲು ಉತ್ಪಾದಕರ ಸಂಘಕ್ಕೆ ರೂ.50 ಸಾವಿರ ಪ್ರೋತ್ಸಾಹ ಧನ ಮತ್ತು ನಡ ಪ್ರೌಢ ಶಾಲಾ ಸ್ಮಾರ್ಟ್ ಕ್ಲಾಸ್ ಯೋಜನೆಗೆ ರೂ.5 ಸಾವಿರ ಸಹಾಯವನ್ನು ಸಂಘದ ವತಿಯಿಂದ ಶಾಸಕರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ 110 ಮಿಶ್ರತಳಿ ಕರುಗಳ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಜನಾರ್ದನ ಗೌಡ, ಬೆಳ್ತಂಗಡಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ, ಕೆ.ಎಂ.ಎಫ್. ಮೇಲ್ವಿಚಾರಕ ಶ್ರೀನಿವಾಸ್, ಇಂದಬೆಟ್ಟು, ನಾವೂರು ಸೊಸೈಟಿಯ ಅಧ್ಯಕ್ಷರು, ನಡ ಸಂಘದ ನಿರ್ದೇಶಕರುಗಳು, ಕಾರ್ಯದರ್ಶಿ ರೀಟಾ ಡಿ’ಸೋಜ ಉಪಸ್ಥಿತರಿದ್ದರು. ನಳಿನಿ ಇವರ ಪ್ರಾರ್ಥನೆ ಬಳಿಕ ಸಂಘದ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ ಸ್ವಾಗತಿ ಸಿ, ಜೇಸಿ ಶ್ರೀನಾಥ್ ಕೆ.ಎಂ. ಕಾರ್ಯಕ್ರಮ ನಿರೂಪಿಸಿ, ಸಂಘದ ನಿರ್ದೇಶಕ ಸ್ಟಾನ್ಲ್ಯಿ ಪಿಂಟೋ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.