ಕಿರಿಯಾಡಿ : ಕಾಂಕ್ರೀಟ್ ರಸ್ತೆ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

kiriyadi raste shilanyasa copyಉಜಿರೆ : ದ.ಕ ಜಿಲ್ಲಾ ಪಂಚಾಯತ್ ಅನುದಾನದಿಂದ ಉಜಿರೆ ಕ್ಷೇತ್ರದ ಜಿ.ಪ ಸದಸ್ಯೆ ಶ್ರೀಮತಿ ನಮಿತಾರವರ ಅನುದಾನದಿಂದ ನಿರ್ಮಾಣಗೊಂಡಿರುವ 200ಮಿ. ಕಾಂಕ್ರೀಟ್ ರಸ್ತೆಯನ್ನು ಮಾ.6 ರಂದು ಶಾಸಕರು ಹಾಗೂ ರಾಜ್ಯ ಸರಕಾರದ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಶಾಸಕರನ್ನು ಹಾಗೂ ಕ್ಷೇತ್ರದ ಜಿ.ಪ ಸದಸ್ಯೆ ನಮಿತಾರವರನ್ನು ಊರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಮೊಕ್ತೇಸರ ಉದಯ ಕುಮಾರ್ ಸಂಪಿಗೆತ್ತಾಯ, ಉಜಿರೆ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ವಿನುತಾ ರಜತ ಗೌಡ, ಪಂಚಾಯತ್ ಸದಸ್ಯರುಗಳಾದ ಮಂಜಪ್ಪ ಪೂಜಾರಿ, ಶ್ರೀಮತಿ ಶಾಂತಾ, ಗುತ್ತಿಗೆದಾರ ಹೊನ್ನಪ್ಪ ಗೌಡ, ದೇವಸ್ಥಾನದ ಪ್ರಧಾನ ಅರ್ಚಕ ಅನಂತರಾಮ ಕಾರಂತ ಮೊದಲಾದವರು ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ಉದಯಕುಮಾರ್ ಸಂಪಿಗೆತ್ತಾಯ ಸ್ವಾಗತಿಸಿ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ರಮೇಶ ಗೌಡ ವಂದಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಧರ್ಣಪ್ಪ ಗೌಡ ಧರಣಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ಸದಸ್ಯರುಗಳು, ಭಜನಾ ಮಂಡಳಿ ಸದಸ್ಯರುಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.