ಮಾಲಾಡಿ : ಇಂದು(ಮಾ.9) ಎಸ್.ಕೆ. ಪೆಟ್ರೋಲಿಯಂ ಇದರ ಉದ್ಘಾಟನಾ ಸಮಾರಂಭವು ರಾಷ್ಟ್ರೀಯ ಹೆದ್ದಾರಿ ಮಾಲಾಡಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಎಚ್ಪಿಸಿಎಲ್ ನ ರೀಜಿನಲ್ ಮೇನೇಜರ್ ವಸಂತ ರಾವ್ ಉದ್ಘಾಟಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಪೂಜ್ಯನೀಯ ಅನಂತ ಪದ್ಮನಾಭ ಅಸ್ರಣ್ಣರವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ದ.ಕ ಮತ್ತು ಉಡುಪಿ ಜಿಲ್ಲೆ ಜಮಾಯತುಲ್ ಫಲಾಹ್ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಮಂಗಳೂರು ಎಚ್ಪಿಸಿಎಲ್ ಸೇಲ್ಸ್ ಮೆನೇಜರ್ ನಲ್ಲ ಚೈತನ್ಯ ಹಾಗೂ ಎಸ್.ಕೆ. ಪೆಟ್ರೋಲಿಯಂ ಮಾಲಿಕ ಉದಯಚಂದ್ರ ಉಪಸ್ಥಿತರಿದ್ದರು.