ಇಂದಿನಿಂದ ಪಿ.ಯು. ಪರೀಕ್ಷೆ ಉನ್ನತ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆ ಬೆಳ್ತಂಗಡಿಗೆ

Advt_NewsUnder_1
Advt_NewsUnder_1
Advt_NewsUnder_1

exam 1 copyತಾಲೂಕಿನಲ್ಲಿ ಒಟ್ಟು 4 ಸೆಂಟರ್‌ಗಳು
ತಾಲೂಕಿನ 21 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು.
ಒಟ್ಟು ಪರೀಕ್ಷೆ ಎದುರಿಸುವ  ವಿದ್ಯಾರ್ಥಿಗಳ ಸಂಖ್ಯೆ 3664

ಬೆಳ್ತಂಗಡಿ : ಈ ಬಾರಿಯ ಪಿಯುಸಿ ಪರೀಕ್ಷೆ ರಾಜ್ಯದಾದ್ಯಂತ ಇಂದಿನಿಂದ ಮಾ. 9 ಪ್ರಾರಂಭಗೊಳ್ಳುತ್ತಿದೆ. ತಾಲೂಕಿನ ಒಟ್ಟು ನಾಲ್ಕು ಸೆಂಟರ್‌ಗಳಲ್ಲಿ ನಿಯಮಾನುಸಾರ ಪರೀಕ್ಷೆ ನಡೆಯಲಿದ್ದು ತಾಲೂಕಿನ ಒಟ್ಟು 21 ಕಾಲೇಜಿನ 3664 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ. ಈ ಪೈಕಿ 10 ಖಾಸಗಿ ಕಾಲೇಜುಗಳಾದರೆ 11 ಸರಕಾರಿ ಕಾಲೇಜುಗಳಾಗಿವೆ.
ಸೆಂಟರ್‌ಗಳು ಯಾವ್ಯಾವುವು?
ಎಸ್‌ಡಿಎಂ ಪ. ಪೂರ್ವ ಕಾಲೇಜು ಉಜಿರೆ
ವಾಣಿ ಪ. ಪೂರ್ವ ಕಾಲೇಜು ಬೆಳ್ತಂಗಡಿ
ಸ.ಪ.ಪೂ. ಕಾಲೇಜು ಬೆಳ್ತಂಗಡಿ
ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಮಡಂತ್ಯಾರು.
ಇವು ನಾಲ್ಕು ತಾಲೂಕಿನಲ್ಲಿರುವ ಪರೀಕ್ಷಾ ಕೇಂದ್ರಗಳು. ಈ ಪೈಕಿ ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಬಂಟ್ವಾಳ ರೂಟ್‌ಗೆ ಸೇರಲ್ಪಟ್ಟಿದೆ.
3664 ಮಂದಿ ವಿದ್ಯಾರ್ಥಿಗಳು:
ಈ ಬಾರಿಯ ಪರೀಕ್ಷೆಯಲ್ಲಿ ಎಸ್.ಡಿ.ಎಂ. ಕೇಂದ್ರದಲ್ಲಿ 1175 ವಿದ್ಯಾರ್ಥಿಗಳು, ವಾಣಿ ಕಾಲೇಜಿನ ಕೇಂದ್ರದಲ್ಲಿ 1106 ವಿದ್ಯಾರ್ಥಿಗಳು, ಸೇಕ್ರೆಡ್‌ಹಾರ್ಟ್ ಕಾಲೇಜಿನ ಕೇಂದ್ರದಲ್ಲಿ 788 ವಿದ್ಯಾರ್ಥಿಗಳು ಮತ್ತು  ಬೆಳ್ತಂಗಡಿ ಜೂನಿಯರ್ ಕಾಲೇಜು ಕೇಂದ್ರದಲ್ಲಿ 595  ಸೇರಿ ಒಟ್ಟು ತಾಲೂಕಿನಿಂದ 3664 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸುತ್ತಿದ್ದಾರೆ.
ಪ್ರಶ್ನೆ ಪತ್ರಿಕೆ ಬರುವ ವಿಧಾನ:
ಕಳೆದ ವರ್ಷ ಎರಡೆರಡು ಬಾರಿ ಪಿಯುಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷ ಕಾಳಜಿ ವಹಿಸಿ ಭದ್ರತೆ ಒದಗಿಸಲಾಗಿದೆ. ಬೆಳ್ತಂಗಡಿ ತಹಶಿಲ್ದಾರ್ ತಿಪ್ಪೇಸ್ವಾಮಿ, ದೈಹಿಕ ಶಿಕ್ಷಣಾಧಿಕಾರಿ ಯಶೋಧರ ಸುವರ್ಣ, ಮತ್ತು ಪುಂಜಾಲಕಟ್ಟೆ ಸರಕಾರಿ ಪ. ಪೂ ಕಾಲೇಜು ಪ್ರಾಂಶುಪಾಲ ಸುಕುಮಾರ್ ಜೈನ್ ಇವರನ್ನೊಳಗೊಂಡ ಮೂರು ಮಂದಿಯ ಸಮಿತಿ ಬೆಂಗಳೂರಿಗೆ ಹೋಗಿ ಬೆರಳಚ್ಚು ನೀಡುವ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಮಂಗಳೂರಿಗೆ ತರಲಾಗಿದ್ದು ಸಬ್‌ರಿಜಿಸ್ಟ್ರಾರ್ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. 2 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಮಾತ್ರ ಮೊದಲ ಹಂತದಲ್ಲಿ ಬಂದಿದ್ದು ಅದನ್ನು ಮಾ. 9 ರಂದು (ಇಂದು) ಬೆಳಿಗ್ಗೆ ಇದೇ ಮೂರು ಮಂದಿಯ ಸಮಿತಿ ಬೆಳಿಗ್ಗೆ 6 ಗಂಟೆಗೆ ಬೆರಳಚ್ಚು ನೀಡಿ ಸೂಕ್ತ ಭದ್ರತೆಯೊಂದಿಗೆ 9 ಗಂಟೆಗೆ ಬೆಳ್ತಂಗಡಿಗೆ ತರಲಿದ್ದಾರೆ. ಬಳಿಕ ಅದನ್ನು ಸೆಂಟರ್‌ಗಳಿಗೆ ವಿತರಿಸಲಿದ್ದಾರೆ.
ಉಳಿಕೆ ಪ್ರಶ್ನೆ ಪತ್ರಿಕೆಗಳು ಮೂಡಬಿದ್ರೆ ತಹಶೀಲ್ದಾರ್, ಓರ್ವ ಡಿವೈಎಸ್‌ಪಿ ಸಹಿತ ಇರುವ ವಿಶೇಷ ಭದ್ರತಾ ತಂಡ ಬೆಂಗಳೂರಿನಿಂದ ಪಡೆದು ಎರಡು ವಿಶೇಷ ಪೊಲೀಸ್ ವಾಹನದ ಭದ್ರತೆಯೊಂದಿಗೆ ಬೆಂಗಳೂರಿನಿಂದ ಮಂಗಳೂರು ಕೇಂದ್ರಕ್ಕೆ ತರಲಿದೆ. ಅಲ್ಲಿಂದ ಇದೇ ಮಾದರಿಯಲ್ಲಿ ರೂಟ್‌ಗಳಿಗೆ ಪ್ರಶ್ನೆ ಪತ್ರಿಕೆ ವಿತರಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.