ದೇವಾಲಯಗಳು ಸಂಸ್ಕೃತಿ ಭದ್ರಪಡಿಸುವ ನೆಲೆಗಟ್ಟುಗಳು : ರಾಜಶೇಖರಾನಂದ ಶ್ರೀ

perla baipadi annachathra copy                                                ಪೆರ್ಲಬೈಪಾಡಿ ಕ್ಷೇತ್ರದಲ್ಲಿ ಅನ್ನಛತ್ರ, ಕಲಾವೇದಿಕೆ ಉದ್ಘಾಟನೆ

ಬಂದಾರು : ಧಾರ್ಮಿಕ ಕೇಂದ್ರಗಳು ಪರಂಪರೆಯ ಆಚಾರ ವಿಚಾರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸನಾತನ ಸಂಸ್ಕೃತಿಯನ್ನು ಭದ್ರಮಾಡುವ ನೆಲೆಗಟ್ಟುಗಳು ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪೆರ್ಲಬೈಪಾಡಿ ಕ್ಷೇತ್ರದಲ್ಲಿ ಮಾ. 6 ರಂದು ನಡೆದ ಪ್ರತಿಷ್ಠಾ ವರ್ಧಂತ್ಯುತ್ಸವ, ಶ್ರೀ ಸತ್ಯನಾರಾಯಣ ಪೂಜೆಯ ಜೊತೆಗೆ ವಿನಾಯಕ ಅನ್ನಛತ್ರ ಮತ್ತು ಸಿದ್ದಿಶ್ರೀ ಕಲಾವೇದಿಕೆ ಉದ್ಘಾಟನೆಗೊಳಿಸಿ ಅವರು ಆಶಿರ್ವಚನ ನೀಡಿದರು.
ಮನುಷ್ಯನಿಗೆ ಆರೋಗ್ಯ ಮತ್ತು ನೆಮ್ಮದಿ ಅತೀ ಮುಖ್ಯವಾದುದು. ದೇವರ ಬಳಿ ನಾವು ಪ್ರಾರ್ಥನೆ ಸಲ್ಲಿಸುವಾಗ ಐಶ್ವರ್ಯ, ಐಶಾರಾಮ, ಮಡದಿ ಮಕ್ಕಳ ಕ್ಷೇಮವನ್ನು ಮಾತ್ರ ಹೆಚ್ಚಾಗಿ ಪ್ರಾರ್ಥಿಸುತ್ತೇವೆ. ಅದಕ್ಕೆ ಬದಲಾಗಿ ಶಾಂತಿಗಾಗಿ ಪ್ರಾರ್ಥಿಸಿದರೆ ಉಳಿದೆಲ್ಲವೂ ತನ್ನಿಂತಾನೆ ಬಂದುಬಿಡುತ್ತದೆ. ಸಾಂಸಾರಿಕ ಬದುಕಿಗೆ ಅರ್ಥ ಕೊಡುವವರು ಸಿದ್ಧಿವಿನಾಯಕ ದೇವರು. ಪಾರ್ವತಿ ಮತ್ತು ಪರಮೇಶ್ವರರ ಪುತ್ರರಾದ ಸಿದ್ಧಿವಿನಾಯಕ ಸಿದ್ಧಿ ಮತ್ತು ಬುದ್ಧಿಯನ್ನೇ ವರಿಸಿಕೊಂಡವರು. ಆದ್ದರಿಂದ ಈ ಕ್ಷೇತ್ರದಲ್ಲಿ ವಿವಾಹ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿದೆ. ಸಾಂಸಾರಿಕೆ ಉನ್ನತಿಯ ದಾರಿ ಗಟ್ಟಿಯಾಗಲು ಈ ಕ್ಷೇತ್ರ ಪರಮಪಾವನವಾದುದು ಎಂದವರು ತಿಳಿಸಿದರು.
ಈ ವರ್ಷ ಹಂತ ಹಂತವಾಗಿ 100 ಕೋಟಿ ರೂ. ಅನುದಾನ: ಬಂಗೇರ
ಪ್ರಧಾನ ಅತಿಥಿಯಾಗಿ ಭಾಗವಹಿಸಿದ್ದ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ, ಶಾಸಕ ವಸಂತ ಬಂಗೇರ ಮಾತನಾಡಿ, ಮುಖ್ಯ ಮಂತ್ರಿಗಳು ನನ್ನ ಕ್ಷೇತ್ರಕ್ಕೆ 100 ಕೋಟಿ ರೂ. ಗಳ ಅಭಿವೃದ್ಧಿ ಅನುದಾನ ನೀಡುತ್ತೇನೆಂದು ಭರವಸೆ ನೀಡಿದ ಬಳಿಕ ಹುದ್ದೆ ವಹಿಸಿಕೊಂಡಿದ್ದೇನೆ. ಬಜೆಟ್ ನಂತರ ಹಂತ ಹಂತವಾಗಿ ಅದನ್ನು ತರಲಿದ್ದೇನೆ. ಜೈನ್‌ಪೇಟೆಯ ಬಳಿ ಇರುವ ಕೈಗಾರಿಕಾ ಮೀಸಲು ಪ್ರದೇಶದಲ್ಲಿ ಸಣ್ಣ ಕೈಗಾರಿಕಾ ಶೆಡ್ ನಿರ್ಮಾಣ, ರಬ್ಬರ್‌ಗೆ ಅಧಿಕ ಬೆಲೆ ದೊರೆಯುವಂತೆ ರಬ್ಬರ್ ಕ್ಲಸ್ಟರ್ ಸ್ಥಾಪನೆ ನನ್ನ ಮುಂದಿನ ಗುರಿ ಎಂದರು. ದೇವಸ್ಥಾನದ ಕಡೆಯಿಂದ ಸಲ್ಲಿಕೆಯಾದ ಮನವಿಗೆ ಸ್ಪಂದಿಸಿದ ಅವರು, ಈ ಕ್ಷೇತ್ರದ ಬೇಡಿಕೆ ಪೂರೈಕೆಗಾಗಿ ಧಾರ್ಮಿಕ ಧತ್ತಿ ಇಲಾಖೆಗೆ ಪತ್ರ ಬರೆದು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ತಿಮ್ಮಪ್ಪ ಗೌಡ ಸೋಣಕುಮೇರು ವಹಿಸಿ ಮಾತನಾಡಿ, ಮಕ್ಕಳಿಗೆ ದೇವರ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಜೀವನದಲ್ಲಿ ಆಸೆಗಳ ಮೇಲೆ ಮಿತಿಯಿಟ್ಟು ಗುರಿ ತಲುಪಬೇಕು ಎಂದರು.
ಬಂದಾರು ಗ್ರಾ.ಪಂ ಅಧ್ಯಕ್ಷ ಉದಯಕುಮಾರ್ ಬಿ. ಕೆ, ಪಂಚಶ್ರೀ ಗ್ರೂಪ್ಸ್‌ನ ನಾರಾಯಣ ಗೌಡ ಕೊಳಂಬೆ,
ಯುವ ಉದ್ಯಮಿ ಜನಾರ್ದನ ಗೌಡ ನಿಂರ್ಬುಡ ಶುಭ, ಗ್ರಾ.ಯೋಜನೆಯ ಸಮುದಾಯ ಅಭಿವೃಧ್ಧಿ ಯೋಜನಾಧಿಕಾರಿ ಗಣೇಶ್ ಭಟ್ ಶುಭ ಕೋರಿದರು.
ವೇದಿಕೆಯಲ್ಲಿ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಕುಕ್ಕಪ್ಪ ಗೌಡ, ದೇವಳದ ಅರ್ಚಕ ಕೆ ಪ್ರಶಾಂತ್ ಹೊಳ್ಳ, ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸತೀಶ್ ಗೌಡ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ಗೌಡ ಬಾಲಂಪಾಡಿ, ಕಾರ್ಯದರ್ಶಿ ಸಂಪತ್ ಗೌಡ, ಆಡಳಿತ ಮಂಡಳಿ ಅಧ್ಯಕ್ಷ ಹೊನ್ನಪ್ಪ ಗೌಡ, ಕಾರ್ಯದರ್ಶಿ ಮಹಾಬಲ ಗೌಡ, ಉಪಸ್ಥಿತರಿದ್ದರು.
ದೇವಾಲಯ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಬಜ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಾಲಯದಲ್ಲಿ ಪ್ರತೀ ವರ್ಷ 30 ರಿಂದ 40 ವಿವಾಹಗಳು ನಡೆಯುತ್ತಿದ್ದು ಅವರ ಅನುಕೂಲಕ್ಕಾಗಿ ಮತ್ತು ಭಕ್ತರ ಅನುಕೂಲಕ್ಕಾಗಿ 21 ಲಕ್ಷ ರೂ ವೆಚ್ಚದಲ್ಲಿ ಅನ್ನಛತ್ರ, ಸಭಾವೇದಿಕೆ ನಿರ್ಮಿಸಲಾಗಿದೆ. ಕೇವಲ 45 ದಿನಗಳಲ್ಲಿ ಕಾಮಗಾರಿ ಅನುಷ್ಠಾನಿಸಲಾಗಿದೆ. ಇದಕ್ಕೆ 14 ಲಕ್ಷ ರೂ. ಗಳಷ್ಟು ಕೊರತೆ ಇದ್ದು ಗ್ರಾಮದ ಎಲ್ಲರೂ ಕೈ ಜೋಡಿಸಬೇಕು ಎಂದು ಕೇಳಿಕೊಂಡರು. ನೆರವು ನೀಡಿದ ಎಲ್ಲರನ್ನೂ ಸ್ಮರಿಸಿದರು.
ಸನ್ಮಾನ:
ಮೇಲ್ಚಾವಣಿ ಕೆಲಸ ನಿರ್ವಹಿಸಿದ ಜಗಧೀಶ್ ಟೆಕ್ನೋ ಕಂಪೆನಿ, ವಯರಿಂಗ್ ಕೆಲಸ ನಿರ್ವಹಿಸಿದ ಶಶಿಧರ ಗೌಡ, ಪೈಂಟಿಂಗ್ ಕೆಲಸ ನಿರ್ವಹಿಸಿದ ದಿವಾಕರ ಬಾಲಂಪಾಡಿ ಮತ್ತು ಚಿದಾನಂದ ಗೌಡ ಅವರನ್ನು ಸ್ಮರಣಿಕೆಯೊಂದಿಗೆ ಗುರುತಿಸಲಾಯಿತು.
ಶಾಸಕ ವಸಂತ ಬಂಗೇರ ಅವರನ್ನು ದೇವಳದ ಕಡೆಯಿಂದ ಸನ್ಮಾನಿಸಲಾಯಿತು.
ವೀಕ್ಷಿತಾ, ಕೃಪಾ, ನಿತಿನ್ಯಾ ಪ್ರಾರ್ಥನೆ ಹಾಡಿದರು. ಶ್ರೀನಿವಾಸ್ ಬೈಪಾಡಿ ಮತ್ತು ಶಿಕ್ಷಕ ಕೊರಗಪ್ಪ ಟಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಹರೀಶ್ ಗೌಡ ಬಂದಾರು ಸ್ವಾಗತಿಸಿ, ಅಭಿವೃದ್ದಿ ಕಾಮಗಾರಿಗೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.