ಶಟ್ಲ್ ಬ್ಯಾಡ್ಮಿಂಟನ್ ಫ್ರೆಂಡ್ಸ್ ಲಾಯಿಲ ಇವರಿಂದ ಫ್ರೆಂಡ್ಸ್ ಟ್ರೋಫಿ 2017 ಶಟ್ಲ್ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1

lailaಲಾಯಿಲ : ಕ್ರೀಡೆಯಿಂದ ಮನೋರಂಜನೆ ಮತ್ತು ಸಂತೋಷ ಅನುಭವಿಸಬೇಕು. ಕ್ರೀಡಾ ಪ್ರೋತ್ಸಾಹದ ವೇಳೆ ತಂಡ, ಗುಂಪು, ವ್ಯಕ್ತಿ ಎಂದು ನೋಡದೆ ಉತ್ತಮ ಆಟಕ್ಕೆ ಸಮಾನವಾದ ಪ್ರೋತ್ಸಾಹ ನೀಡೋಣ ಎಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಪ್ರ. ಧರ್ಮಗುರುಗಳಾದ ರೆ. ಫಾ. ಬೊನೊಮೆಂಚರ್ ನಝ್ರೆತ್ ಹೇಳಿದರು.
ಶಟ್ಲ್ ಬ್ಯಾಡ್ಮಿಂಟನ್ ಫ್ರೆಂಡ್ಸ್ ಲಾಯಿಲ ಬೆಳ್ತಂಗಡಿ ಇದರ ಆಶ್ರಯದಲ್ಲಿ ಲಾಯಿಲ ರೋಬರ್ಟ್ ಸಿಕ್ವೇರ ಕ್ರೀಡಾಂಗಣದಲ್ಲಿ ಮಾ. 04 ರಂದು ನಡೆದ ತಾಲೂಕು ಮಟ್ಟದ ಪುರುಷರ ಹೊನಲು ಬೆಳಕಿನ(ಡಬಲ್ಸ್) ವಿಭಾಗದ ಹೊರಾಂಗಣ ಶಟ್ಲ್ ಬ್ಯಾಡ್ಮಿಂಟನ್ ಫ್ರೆಂಡ್ಸ್ ಟ್ರೋಫಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್ ಜಿ. ಗೌಡ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಭಾಗವಹಿಸಿದ್ದರು. ವೇದಿಕೆಯಲ್ಲಿ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರ ಮೂರ್ಜೆ ವಿವೇಕಾನಂದ ಪ್ರಭು, ಸುದ್ದಿಬಿಡುಗಡೆ ವಾರಪತ್ರಿಕೆ ವ್ಯವಸ್ಥಾಪಕ ಮಂಜುನಾಥ ರೈ, ಲಾಯಿಲ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಲಾಯಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಲಾಯಿಲ ಉದ್ಯಮಿ ವಿಜಯ ಸಿಕ್ವೇರಾ, ಬೆಳ್ತಂಗಡಿ ನ್ಯಾಯವಾದಿ ಶಶಿಕಿರಣ್ ಜೈನ್, ಬೆಳ್ತಂಗಡಿ ಕೆಥೋಲಿಕ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆನ್ರಿ ಲೋಬೋ, ಲಾಯಿಲ ಗಣೇಶ್ ಗ್ಯಾರೇಜ್ ಮಾಲಕ ರಾಜೇಶ್ ಶೆಟ್ಟಿ, ಬೆಳ್ತಂಗಡಿ ತಾ.ಪಂ ಸದಸ್ಯ ಸುಧಾಕರ್ ಬಿ.ಎಲ್, ಬೆಳ್ತಂಗಡಿ ತಾ.ಪಂ ಸದಸ್ಯ ಶಶಿಧರ್ ಕಲ್ಮಂಜ, ಪಿಲಿಬೈಲು ಯಮುನಕ್ಕ ತುಳು ಚಲನಚಿತ್ರದ ಸಹನಿರ್ಮಾಪಕ ಹರೀಶ್ ರಾವ್, ಮಂಜುಶ್ರೀ ಗ್ರಾನೈಟ್ಸ್ & ಟೆಂಪಲ್ ವರ್ಕ್ಸ್‌ನ ವೆಂಕಟೇಶ್ ಕಾಶಿಬೆಟ್ಟು, ಲಾಯಿಲ ಗ್ರಾ.ಪಂ ಸದಸ್ಯ ಮೋಹನ್‌ದಾಸ್, ಬೆಳ್ತಂಗಡಿ ಯುವ ಬಂಟರ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.