ಬದ್ಯಾರ್ ಚರ್ಚ್‌ನಲ್ಲಿ ಮಹಿಳಾ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1

badyar mahila dinacharane copyಬದ್ಯಾರು : ಬದ್ಯಾರು ಸಂತ ರಫಾಯಲ್ ಚರ್ಚಿನಲ್ಲಿ ಸ್ತ್ರೀ ಸಂಘಟನೆಯ ಮಹಿಳಾ ದಿನಾಚರಣೆಯನ್ನು ಫೆ. 26ರಂದು ಆಚರಿಸಲಾಯಿತು. ಸಂಘದ ಎಲ್ಲಾ ಸದಸ್ಯರು ಬಲಿ ಪೂಜೆಯಲ್ಲಿ ಭಾಗವಹಿಸಿದರು.
ಚರ್ಚಿನ ಧರ್ಮಗುರುಗಳಾದ ಫಾ. ವಿಲ್ಫ್ರೇಡ್ ಗೊನ್ಸಾಲ್ವಿಸ್‌ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಸಂಘದಲ್ಲಿ ಏಕತೆಯನ್ನು ಅಭಿವೃದ್ಧಿಗೊಳಿಸಬೇಕು ಹಾಗೂ ಒಂದೇ ಕುಟುಂಬದಲ್ಲಿ ಇರುವಂತೆ ಒಟ್ಟುಗೂಡಬೇಕು ಹಾಗೂ ಉಳಿದ ಸ್ತ್ರೀಯರನ್ನು ಸಂಘಟಿತರನ್ನಾಗಿಸಬೇಕು ಎಂದು ನುಡಿದರು.
ಚರ್ಚಿನ ಉಪಾಧ್ಯಕ್ಷರಾದ ರಫಾಯಲ್ ವೇಗಸ್‌ರವರು ಮಾತನಾಡುತ್ತಾ, ಸ್ತ್ರೀ ಸಂಘಟನೆಯಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಹಾಗೂ ಈ ಒಂದು ಸಂಘವು ಉದಾಹರಣೆಯಾಗಿದೆ ಎಂದು ನುಡಿದರು. ಮಾಹಿತಿದಾರರಾಗಿ ಆಗಮಿಸಿದ ಸ್ಥಳೀಯ ಬೆಥನಿ ಕಾನ್ವೆಂಟಿನ ಭಗಿನಿ ಜ್ಯೋತಿ ಕ್ಲಾರಾರವರು ಸ್ತ್ರೀಯರಿಗೆ ಕಾಡುವ ರೋಗಗಳ ಬಗ್ಗೆ ಹಾಗೂ ಸ್ತ್ರೀಯರ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಸಂಘದ ಕಾರ್ಯದರ್ಶಿ ಶ್ರೀಮತಿ ಶಾಂತಿ ಗೋವಿಯಸ್ ಕಾರ್ಯಕ್ರಮದ ವರದಿ ವಾಚಿಸಿದರು. ಸಂಘದ ಎಲ್ಲಾ ಮಹಿಳೆಯರಿಗೆ ಆಟೋಟಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಶ್ರೀಮತಿ ಲಿಲ್ಲಿ ಡಿಸೋಜ ಸ್ವಾಗತಿಸಿ, ಶ್ರೀಮತಿ ಅನಿತಾ ಡಿಸಿಲ್ವ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.