ನ.ಪಂ ರೂ.8.50 ಲಕ್ಷ ವಿದ್ಯಾರ್ಥಿ ವೇತನ-ವಿಕಲಚೇತನರಿಗೆ ಸಹಾಯಧನ ವಿತರಣೆ, ಪಟ್ಟಣ ಪಂಚಾಯತು ಅಭಿವೃದ್ಧಿಗೆ ರೂ.3 ಕೋಟಿ ಮಂಜೂರು: ಬಂಗೇರ

Advt_NewsUnder_1
Advt_NewsUnder_1
Advt_NewsUnder_1

Pattana panchayath copyಬೆಳ್ತಂಗಡಿ : ಪಟ್ಟಣ ಪಂಚಾಯತ್ ಬೆಳ್ತಂಗಡಿ ಇದರ 2016-17ನೇ ಸಾಲಿನ ವಿವಿಧ ಯೋಜನೆಯಲ್ಲಿ ಒಟ್ಟು ರೂ.8.50 ಲಕ್ಷ ವಿದ್ಯಾರ್ಥಿ ವೇತನ ಹಾಗೂ ವಿಕಲಚೇತನರಿಗೆ ಸಹಾಯಧನವನ್ನು ಫೆ.26ರಂದು ಶಾಸಕ ಹಾಗೂ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ನಗರ ಪಂಚಾಯತು ವಠಾರದಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿದರು.
ಶೇ 24.10ರ ಯೋಜನೆಯಡಿ 10ನೇ ತರಗತಿಯ 10 ವಿದ್ಯಾರ್ಥಿಗಳಿಗೆ ತಲಾ ರೂ.2 ಸಾವಿರದಂತೆ ಒಟ್ಟು ರೂ.20 ಸಾವಿರ, ಪಿಯುಸಿಯ 26 ವಿದ್ಯಾರ್ಥಿಗಳಿಗೆ ತಲಾ ರೂ.3 ಸಾವಿರದಂತೆ ಒಟ್ಟು ರೂ.78 ಸಾವಿರ, ಪದವಿಯ 11 ವಿದ್ಯಾರ್ಥಿಗಳಿಗೆ ತಲಾ ರೂ. 4 ಸಾವಿರದಂತೆ ಒಟ್ಟು 44 ಸಾವಿರ, ವೃತ್ತಿ ಶಿಕ್ಷಣದ 11 ವಿದ್ಯಾರ್ಥಿಗಳಿಗೆ ತಲಾ ರೂ.4 ಸಾವಿರದಂತೆ ಒಟ್ಟು ರೂ. 44 ಸಾವಿರ, ಸ್ನಾತಕೋತ್ತರದ ಓರ್ವ ವಿದ್ಯಾರ್ಥಿಗೆ ರೂ. 6 ಸಾವಿರ ಸೇರಿ ಒಟ್ಟು 1.92 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಶೇ 7.25 ರ ಯೋಜನೆಯಡಿ 10ನೇ ತರಗತಿಯ 9 ವಿದ್ಯಾರ್ಥಿಗಳಿಗೆ ತಲಾ ರೂ.2 ಸಾವಿರದಂತೆ ಒಟ್ಟು ರೂ.18 ಸಾವಿರ, ಪಿಯುಸಿಯ 52 ವಿದ್ಯಾರ್ಥಿಗಳಿಗೆ ತಲಾ ರೂ.2ಸಾವಿರದಂತೆ ಒಟ್ಟು ರೂ. 1.04ಲಕ್ಷ, ಪದವಿಯ 58 ವಿದ್ಯಾರ್ಥಿಗಳಿಗೆ ತಲಾ ರೂ.3 ಸಾವಿರದಂತೆ ಒಟ್ಟು ರೂ.1.74ಲಕ್ಷ, ಸ್ನಾತಕೋತ್ತರದ 22 ವಿದ್ಯಾರ್ಥಿಗಳಿಗೆ ತಲಾ ರೂ.5 ಸಾವಿರದಂತೆ ಒಟ್ಟು ರೂ. 1.10ಲಕ್ಷ ಸೇರಿದಂತೆ ಒಟ್ಟು 4.06ಲಕ್ಷ ವಿದ್ಯಾರ್ಥಿ ವೇತನ ಹಾಗೂ ಶೇ. 3ರ ಯೋಜನೆಯಡಿ ವಿಕಲಚೇತನರಿಗೆ 42 ಫಲಾನುಭವಿಗಳಿಗೆ ತಲಾ ರೂ.6ಸಾವಿರದಂತೆ ಒಟ್ಟು ರೂ.2.52ಲಕ್ಷ ಸಹಾಯಧನ ವಿತರಿಸಲಾಯಿತು.
ನಂತರ ಮಾತನಾಡಿದ ಶಾಸಕರು ಬೆಳ್ತಂಗಡಿ ಪಟ್ಟಣ ಪಂಚಾಯತು ಆಡಳಿತ ಉತ್ತಮವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದು, ಈ ಪಂಚಾಯತದ ಅಭಿವೃದ್ಧಿ ಕೆಲಸಗಳಿಗೆ ರೂ.3 ಕೋಟಿ ಅನುದಾನ ಮಂಜೂರುಗೊಳಿಸಿದ್ದೇನೆ. ಇಲ್ಲಿಯ ಸೋಮಾವತಿ ನದಿಗೆ ತಡೆಗೋಡೆ ನಿರ್ಮಾಣಕ್ಕೆ ರೂ.60 ಲಕ್ಷ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಿಂಡಿಅಣೆಕಟ್ಟು ರಚನೆಗೆ ರೂ.85 ಲಕ್ಷ ಸರಕಾರ ಈಗಾಗಲೇ ಮಂಜೂರುಗೊಳಿಸಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿ, ಶಾಸಕರು ಮಂಜೂರುಗೊಳಿಸಿದ 3 ಕೋಟಿ ವಿಶೇಷ ಅನುದಾನದಲ್ಲಿ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ರೂ.1.50 ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು, ಒಂದು ತಿಂಗಳ ಒಳಗೆ 15 ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೂ.3 ಲಕ್ಷ ವೆಚ್ಚದಲ್ಲಿ ಬಟ್ಟೆ ಒಗೆಯುವ ಯಂತ್ರ ನ.ಪಂ.ದಿಂದ ಅಳವಡಿಸಲಾಗಿದೆ ಎಂದು ತಿಳಿಸಿದರು. ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೇಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ತಮ್ಮ ಗುರಿಯನ್ನು ಸಾಧಿಸಿ ಎಂದು ಸಲಹೆಯಿತ್ತರು.
ಈ ಸಂದರ್ಭದಲ್ಲಿ ಶಾಸಕ ಕೆ. ವಸಂತ ಬಂಗೇರ ಹಾಗೂ 10ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ಪಡೆದ ನ.ಪಂ. ಸದಸ್ಯ ಜನಾರ್ದನ ಬಂಗೇರ ಇವರ ಪುತ್ರಿ ಶರಣ್ಯ ಜೆ. ಇವರನ್ನು ನ.ಪಂ. ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯತು ಉಪಾಧ್ಯಕ್ಷ ಜಗದೀಶ್ ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಸದಸ್ಯರಾದ ನಳಿನಿ, ಮಮತಾ ಎಂ.ಶೆಟ್ಟಿ, ಮುಸ್ತಾರ್‌ಜಾನ್, ಲಲಿತಾ, ಕವಿತಾ, ನಾಮನಿರ್ದೇಶನ ಸದಸ್ಯ ಜನಾರ್ದನ ಬಂಗೇರ, ಮುಖ್ಯಾಧಿಕಾರಿ ಜೆಸಿಂತಾ ಲೂವಿಸ್ ಉಪಸ್ಥಿತರಿದ್ದರು.
ಕು| ವೈಷ್ಣವಿ ಪ್ರಾರ್ಥನೆ ಬಳಿಕ ನ.ಪಂ. ಅಧ್ಯಕ್ಷರು ಸ್ವಾಗತಿಸಿದರು. ನ.ಪಂ. ಮಾಜಿ ಸದಸ್ಯ ಮೆಹಬೂಬ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಜಗದೀಶ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.