ಸೇಕ್ರೆಡ್ ಹಾರ್ಟ್ ಕಾಲೇಜಿಗೆ ನ್ಯಾಕ್ ತಂಡದಿಂದ ಎ ಗ್ರೇಡ್ ಮಾನ್ಯತೆ

Advt_NewsUnder_1
Advt_NewsUnder_1
Advt_NewsUnder_1

sacred heart college naac team copyಮಡಂತ್ಯಾರು : ಇಲ್ಲಿನ ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯ ಮಡಂತ್ಯಾರು ಶಿಕ್ಷಣ ಸಂಸ್ಥೆಗೆ ಇತ್ತೀಚೆಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ತಂಡವು ಭೇಟಿ ನೀಡಿತು.
ತಂಡದಲ್ಲಿ ರಾಜಸ್ಥಾನದ ಮೋಹನ್‌ಲಾಲ್ ಸುಖಾಡಿಯ ವಿಶ್ವವಿದ್ಯಾಲಯ ಉದಯಪುರ ಇಲ್ಲಿನ ಮಾಜಿ ಉಪಕುಲಪತಿಗಳಾದ ಪ್ರೊ.(ಡಾ) ಇಂದ್ರವರ್ಧನ ತ್ರಿವೇದಿ, ಮಹಾರಾಷ್ಟ್ರದ ಯಶವಂತ ರಾವ್ ಚವನ್ ಸ್ಕೂಲ್ ಆಫ್ ರೂರಲ್ ಡೆವಲಪ್‌ಮೆಂಟ್ ಶಿವಾಜಿ ಯುನಿವರ್ಸಿಟಿ ಕೊಲ್ಹಾಪುರ ಈ ಸಂಸ್ಥೆಯ ನಿರ್ದೇಶಕರಾದ ಡಾ.ವಸಂತ ಜುಗಾಲೆ ಹಾಗೂ ಗುಜಾರಾತ್‌ನ ಎ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾದ ಪ್ರೊ. ಬಿಪಿನ್ ವಿ,ಮೆಹ್ತಾ
ಇದ್ದರು. ಭೇಟಿಯ ಅವಧಿಯಲ್ಲಿ ತಂಡದವರು ಕಾಲೇಜಿನ ಆಡಳಿತ ಮಂಡಳಿ ರಕ್ಷಕ- ಶಿಕ್ಷಕ ಸಂಘದ ಪ್ರತಿನಿಧಿಗಳನ್ನು. ಹಳೆವಿದ್ಯಾರ್ಥಿಗಳನ್ನು ಹಾಗೂ ಪ್ರಸಕ್ತ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು. ಕಾಲೇಜಿನ ಶೈಕ್ಷಣಿಕ ಪ್ರಗತಿ, ಪಠ್ಯೇತರ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ, ಮೂಲ ಸೌಕರ್ಯಗಳು, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿಗಳಿಗಿರುವ ವಿವಿಧ ಸೌಲಭ್ಯಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸಲ್ಲಿಸಿದ ವರದಿಯನ್ನು ಆಧರಿಸಿ ನ್ಯಾಕ್ ಸಂಸ್ಥೆಯು ಕಾಲೇಜಿಗೆ ಈ ಮೊದಲಿಗಿಂತ ಹೆಚ್ಚಿನ ಅಂಕಗಳೊಂದಿಗೆ ಎ ಮಾನ್ಯತೆಯನ್ನು ನೀಡಿರುತ್ತದೆ. ಕಾಲೇಜಿನ ಈ ಸಾಧನೆಗೆ ಆಡಳಿತ ಮಂಡಳಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಇದ್ದಕ್ಕೆ ಕಾರಣಕರ್ತರಾದ ಎಲ್ಲರನ್ನೂ ಅಭಿನಂದಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.