ಪೆರ್ಲ ಬೈಪಾಡಿ ಸಹ ಶಕ್ಷಕ ಪುಟ್ಟಸ್ವಾಮಿ ಗೌಡರಿಗೆ ವಯೋ ನಿವ್ರತಿ. ಪೌಢ ಶಾಲಾ ಶಿಕ್ಷಕರ ಸಂಘದಿಂದ ಬೀಳ್ಕೊಡುಗೆ.

Advt_NewsUnder_1
Advt_NewsUnder_1
Advt_NewsUnder_1

perlaಗುರುನಮನ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಬೆಂಗಳೂರು, ತಾಲ್ಲೂಕು ಘಟಕ ಬೆಳ್ತಂಗಡಿ ಇದರ ವತಿಯಿಂದ ಫೆಬ್ರವರಿ 28 ರಂದು ವಯೋನಿವೃತ್ತರಾದ ಸ.ಪ್ರೌ.ಶಾಲೆ ಪೆರ್ಲಬೈಪಾಡಿಯ ಸಹಶಿಕ್ಷಕ ಪುಟ್ಟಸ್ವಾಮಿ ಗೌಡ ಬಿ.ಎಸ್ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಶಿಕ್ಷಕ ಉಮೇಶ್ ಇವರು ವಹಿಸಿದ್ದರು. ಪ್ರಾಸ್ತಾವಿಕ ಮಾತುಗಳನ್ನು ಆಡಿದ ತಾಲ್ಲೂಕು ಸಂಘದ ಕಾರ್ಯದರ್ಶಿ ಮಹಮದ್ ರಿಯಾಜ್ ಈ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ,ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೊಯ್ಯೂರು, ಪದಾಧಿಕಾರಿಗಳಾದ ನಾಗರಾಜ್ ಕಾಯರ್ತಡ್ಕ, ಪ್ರಶಾಂತ್ ನಿಡ್ಲೆ,ಶೇಖರ್ ಶಂಖು ಪಡಂಗಡಿ, ಶಿವಪುತ್ರ ನಡ ,ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.ಕೋಶಾಧಿಕಾರಿ ಆದಂ ಪುತ್ತಿಲ ಕಾರ್ಯಕ್ರಮ ನಿರ್ವಹಿಸಿದರು.ಶಾಲೆಯ ಸಹಶಿಕ್ಷಕರಾದ ಕೊರಗಪ್ಪ ತೆಲುಗ ಸ್ವಾಗತಿಸಿ, ಶಿವಬಾಳು ಕರಾಯ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.