ವೇಣೂರು: ಕಣ್ಣು ನಮ್ಮ ಮಹತ್ವರ ಜ್ಞಾನೇಂದ್ರಿಯಗಳಲ್ಲಿ ಒಂದು. ದೃಷ್ಟಿದೋಷದವರನ್ನು ಚಿಕಿತ್ಸೆಗೆ ದೂರದ ನಗರಗಳಿಗೆ ಕರೆದುಕೊಂಡು ಹೋಗುವುದು ಕಷ್ಟದಾಯಕ. ಅದಕ್ಕಾಗಿ ಕಣ್ಣಿನ ತಪಾಸಣಾ ಶಿಬಿರಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ನಡೆಯಬೇಕು. ಈ ಮೂಲಕ ಸಂಘ-ಸಂಸ್ಥೆಗಳು ಸಮಾಜಕ್ಕೆ ಬೆಳಕು ನೀಡಬೇಕು ಎಂದು ವೇಣೂರಿನ ಹಿರಿಯ ವೈದ್ಯ ಡಾ| ಬಿ.ಪಿ. ಇಂದ್ರ ಹೇಳಿದರು.
ಅವರು ಫೆ.26ರಂದು ವೇಣೂರು ವಿದ್ಯೋದಯ ಶಾಲಾ ಪ್ರಾಂಗಣದಲ್ಲಿ ವಿವೇಕಾನಂದ ಸೇವಾ ಟ್ರಸ್ಟ್ ವೇಣೂರು, ಶ್ರೀ ಗುರುಚೈತನ್ಯ ಸೇವಾ ಪ್ರತಿಷ್ಠಾನ ಹಾಗೂ ಭಾರತೀಯ ಜೈನ್ ಮಿಲನ್ ಆಶ್ರಯದಲ್ಲಿ ಜರಗಿದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಟ್ರಸ್ಟ್ನ ಅಧ್ಯಕ್ಷರಾದ ಎಂ. ವಿಜಯರಾಜ ಅಧಿಕಾರಿ ಮಾತನಾಡಿ, ನೇತ್ರದಾನ ಅತ್ಯಂತ ಶ್ರೇಷ್ಠ ದಾನಗಳಲ್ಲೊಂದು. ಸಮಾಜಕ್ಕೆ ಬೆಳಕು ನೀಡುವ ಇಂತಹ ಪುಣ್ಯ ಕಾರ್ಯಕ್ಕೆ ಯುವ ಪೀಳಿಗೆ ಮುಂದಾಗಬೇಕು ಎಂದರು.
ಸನ್ಮಾನ: ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಕೆ. ಪುಷ್ಪಾರಿಗೆ ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಸೇವಾ ಚೈತನ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಾರಾವಿ ಜಿ.ಪಂ. ಪಿ. ಧರಣೇಂದ್ರ ಕುಮಾರ್, ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ವೇಣೂರು ವರ್ತಕರ ಸಂಘದ ಅಧ್ಯಕ್ಷ ಭಾಸ್ಕರ ಪೈ, ವೇಣೂರು ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ| ಭವಿಷ್ಯಕೀರ್ತಿ, ವೇಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಶ್ರೀನಿಧಿ ಎಂಟರ್ ಪ್ರೈಸಸ್ ಮಾಲಕ ಜಗದೀಶ್ ಭಟ್, ವಿದ್ಯೋದಯ ಸಮೂಹ ಸಂಸ್ಥೆಯ ಸಂಚಾಲಕ ಕೆ. ಶಿವರಾಮ ಹೆಗ್ಡೆ, ಗುಂಡೂರಿ ಶ್ರೀ ಸತ್ಯನಾರಾಯಣ ಪೂಜಾ ಭಜನಾ ಮಂಡಳಿ ಅಧ್ಯಕ್ಷ ಶಾಂತಿರಾಜ ಜೈನ್, ಗೋಳಿಯಂಗಡಿ ಕುಂಭನಿಧಿ ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಹರೀಶ್ ಪೆರ್ಮುಡ ಉಳ್ತೂರು ಮೊಹಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಉಳ್ತೂರು, ವಿವೇಕಾನಂದ ಟ್ರಸ್ಟ್ ಸದಸ್ಯ ದಿನೇಶ್, ಭರತ್ರಾಜ್ ಪಾಪುದಡ್ಕ, ವೇಣೂರು ಪ್ರಖಂಡ ವಿ.ಹಿಂ.ಪ. ಕಾರ್ಯದರ್ಶಿ ಸುನಿಲ್ ಪೂಜಾರಿ, ಉಡುಪಿ ಪ್ರಸಾದ್ ನೇತ್ರಾಲಯದ ಡಾ| ಪ್ರಮೋದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ವೇಣೂರು ಪ್ರಾ.ಆ.ಕೇಂದ್ರದ ಸಹಾಯಕ ಉಪ ನಿರೀಕ್ಷಕ ಮೋಹನ್ ಕುಮಾರ್, ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ಕು| ಸುನಿತಾ ಬಜಿರೆ ಹಾಗೂ ಮಲ್ಲಿಕಾ ಸಹಕರಿಸಿದರು.
ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹೊನ್ನಯ್ಯ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು.