HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಜೀವ ವಿಮಾ ನಿಗಮದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

sdm hischool copyಬೆಳಾಲು : ಭಾರತೀಯ ಜೀವ ವಿಮಾ ನಿಗಮ 60ನೇ ವರ್ಷದ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವ ಕಾರ್ಯಕ್ರಮ ಫೆ.25ರಂದು ಬೆಳಾಲು ಶ್ರೀ.ಧ.ಮಂ ಪ್ರೌಢಶಾಲೆಯಲ್ಲಿ ಜರಗಿತು.
ಸದ್ರಿ ಪ್ರೌಢಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಾದ ಜಯಲಕ್ಷ್ಮೀ, ಅಭಿಷೇಕ್ ಮತ್ತು ಪವಿತ್ರ ಇವರುಗಳಿಗೆ ಜೀವ ವಿಮಾ ನಿಗಮದ ಟ್ರೋಫಿ, ಪ್ರಶಸ್ತಿ ಪತ್ರವನ್ನು ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ಆರ್.ಡಿ ಯೋಗೇಂದ್ರ ನೀಡಿ ಪುರಸ್ಕರಿಸಿ ಶುಭ ಹಾರೈಸಿದರು.
ಅವರು ಮಾತನಾಡುತ್ತಾ ಭಾರತೀಯ ಜೀವ ವಿಮಾ ನಿಗಮದ ದೇಶದ ಅತೀ ದೊಡ್ಡ ಆರ್ಥಿಕ ಸಂಸ್ಥೆಯಾಗಿದ್ದು, ವಿಮೆಯ ಜೊತೆಗೆ ಸಾಮಾಜಿಕ ಸೇವೆಯಲ್ಲಿ ಸಂಸ್ಥೆ ತೊಡಗಿಸಿಕೊಂಡು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಉದಯ ಶಂಕರ್, ಬೆಳಾಲು ಗ್ರಾ.ಪಂ ಸದಸ್ಯ ಸತೀಶ್ ಎಳ್ಳುಗದ್ದೆ ಉಪಸ್ಥಿತರಿದ್ದರು. ಜೀವ ವಿಮಾ ನಿಗಮದ ಸಲಹೆಗಾರ ಪಿ.ಜಾರಪ್ಪ ಪೂಜಾರಿ ಬೆಳಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ವಾರಿಜ ಎಸ್ ಪುರಸ್ಕೃತರ ವಿವರ ನೀಡಿದರು. ಇನ್ನೋರ್ವ ಶಿಕ್ಷಕಿ ಶ್ರೀಮತಿ ರಾಜಶ್ರೀ ವಂದಿಸಿದರು. ಶಿಕ್ಷಕ ವೃಂದದವರು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.