ಬೆಳ್ತಂಗಡಿ : ಶ್ರೀದೇವಿ ಕಾಂಪ್ಲೆಕ್ಸ್‌ನ ಮಾಲಕ ರಾಜೇಂದ್ರ ನಾಯಕ್ ಹೃದಯಾಘಾತದಿಂದ ನಿಧನ

RAJENDRA NAYAK copyಬೆಳ್ತಂಗಡಿ ಪುರಸಭೆಯ ಪ್ರಥಮ ಅಧ್ಯಕ್ಷರಾದ ದಿ| ಕೆ.ರಾಮ ನಾಯಕ್ ಇವರ ಪುತ್ರ ಶ್ರೀರಾಮ ನಗರದ ಶ್ರೀದೇವಿ ಕಾಂಪ್ಲೆಕ್ಸ್‌ನ ಮಾಲಕ ರಾಜೇಂದ್ರ ನಾಯಕ್ (65ವ)ರವರು ಫೆ.21ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಬೆಳ್ತಂಗಡಿ ಮಂಜುಶ್ರೀ ಜೇಸಿಸ್ ಸ್ಥಾಪಕ ಸದಸ್ಯ, ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಸದಸ್ಯ, ಆಶಾ ಯಂಗ್ ಸ್ಟಾರ್ ಇದರ ಸದಸ್ಯರಾಗಿ ವಿವಿಧ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಶರತ್ ಆರ್ ನಾಯಕ್, 2 ಪುತ್ರಿಯರಾದ ರಶ್ಮಿ, ರೀನಾ, ಅಳಿಯಂದಿರಾದ ಪ್ರವೀಣ್, ರೋಶನ್, ಸಹೋದರರಾದ ಲಯನ್ಸ್ ವಿಶ್ವನಾಥ ಆರ್ ನಾಯಕ್, ಪ್ರಜ್ವಲ್ ಕಾಂಪ್ಲೆಕ್ಸ್‌ನ ಮಾಲಕ ಪ್ರಜ್ವಲ್ ಆರ್ ನಾಯಕ್, ಮುಖೇಶ್ ಆರ್ ನಾಯಕ್, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.