HomePage_Banner_
HomePage_Banner_
HomePage_Banner_

ಕಾಪು-ಉಪ್ಪರಡ್ಕ ದೈವಸ್ಥಾನ: ವಾರ್ಷಿಕ ಜಾತ್ರೆ

Advt_NewsUnder_1

kapu copy ಅರಸಿನಮಕ್ಕಿ: ಇಲ್ಲಿಯ ಹತ್ಯಡ್ಕ ಗ್ರಾಮದ ಕಾಪು ಉಪ್ಪರಡ್ಕ ದೈವಸ್ಥಾನದ ವಾರ್ಷಿಕ ಜಾತ್ರೆಯು ಫೆ.18ರಿಂದ ಪ್ರಾರಂಭಗೊಂಡು ಫೆ.20ರ ವರೆಗೆ ವಿಜೃಂಭಣೆಯಿಂದ ಜರುಗಿತು.
ಫೆ.18ರಂದು ತೋರಣ ಮುಹೂರ್ತ, ಭಂಡಾರ ಹಿಡಿಯುವುದು ಮತ್ತು ಬ್ರಹ್ಮರು, ಕುಮಾರ, ಬೊಳಾ, ಪಾಲೇಶರಾಯ, ಪಾಳೆದುಳ್ಳಾಲ್ತಿ, ಮುಗೇರ ಪಂಜುರ್ಲಿ ದೈವಗಳ ನೇಮೋತ್ಸವ ಜರುಗಿತು. ಫೆ.19ರಂದು ಮೆದಿನದಿಂದ ರುದ್ರಚಾಮುಂಡಿ, ಗುತ್ತುವಿನಿಂದ ಶಿರಾಡಿ ದೈವದ, ಉಪ್ಪರಡ್ಕದಲ್ಲಿ ಕೊಡಮಣಿತ್ತಾಯ ದೈವದ ಭಂಡಾರ ಇಳಿದು ಬ್ರಹ್ಮರು, ರುದ್ರಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ಇತ್ಯಾದಿ ದೈವಗಳ ನೇಮೋತ್ಸವ ಜರುಗಿತು. ರಾತ್ರಿ ರುಕ್ಮಯ ಕುಲಾಲ್ ಅರಸಿನಮಕ್ಕಿ ವಿರಚಿತ ತುಳು ಸಾಮಾಜಿಕ ನಾಟಕ ಸುರೇಂದ್ರನ ಸಂಗೀತ ಜರುಗಿತು. ಫೆ.20ರಂದು ಕೊಡಮಣಿತ್ತಾಯ, ಶಿರಾಡಿ, ಬಚ್ಚನಾಯ್ಕ, ಗುಳಿಗ ಇತ್ಯಾದಿ ದೈವಗಳ ನೇಮೋತ್ಸವ ಜರುಗಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.