ಸಾಮಾಜಿಕ ಭದ್ರತಾ ಯೋಜನೆ : ಆಧಾರ್ ಕಡ್ಡಾಯ

Advt_NewsUnder_1
Advt_NewsUnder_1
Advt_NewsUnder_1

   ಬೆಳ್ತಂಗಡಿ : ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ವೃದ್ದಾಪ್ಯ ವೇತನ ಹಾಗೂ ಮನಸ್ವಿನಿ ಯೋಜನೆಯಡಿಯಲ್ಲಿ ಬರುವ ಎಲ್ಲಾ ಫಲಾನುಭವಿಗಳಿಗೆ ಆಧಾರ್ ಮುಖಾಂತರ ಪಿಂಚಣಿ ಪಾವತಿಗೆ ಕ್ರಮ ವಹಿಸಲಾಗಿದ್ದು ಈವರೆಗೆ ಆಧಾರ್ ಸಂಖ್ಯೆ ನೀಡದೇ ಇರುವ ಫಲಾನುಭವಿಗಳು ಕೂಡಲೇ ಆಧಾರ್ ಸಂಖ್ಯೆ ನೀಡಬೇಕಾಗಿರುತ್ತದೆ. ಹಾಗೂ ಇನ್ನು ಮುಂದೆ ಬ್ಯಾಂಕ್ ಖಾತೆ ಮುಖಾಂತರ ವೇತನ ಪಾವತಿಯಾಗುವುದರಿಂದ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆ ನೀಡಬೇಕಾಗಿರುತ್ತದೆ. ಇಲ್ಲವಾದಲ್ಲಿ ಸದ್ರಿ ಫಲಾನುಭವಿಗಳ ಪಿಂಚಣಿ ರದ್ದತಿಯಾಗುತ್ತದೆ. ಆದ ಕಾರಣ ಎಲ್ಲಾ ಫಲಾನುಭವಿಗಳು ಕೂಡಲೇ ಗ್ರಾಮ ಕರಣಿಕರಿಗೆ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್/ಅಂಚೆ ಖಾತೆಯ ವಿವರ ನೀಡಬೇಕೆಂದು ಬೆಳ್ತಂಗಡಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.