ಮಾಲಾಡಿಯಲ್ಲಿ ಡಾ| ಎನ್. ಬಾಲಕೃಷ್ಣ ಭಟ್ ರಸ್ತೆಯ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

malady rasthe udgatane copyಮಾಲಾಡಿ : ಮಾಲಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಓಡರ ಲಚ್ಚಿಲ್ ಕಾಲನಿಯಲ್ಲಿ ಜಿ.ಪಂ ಮತ್ತು ತಾ.ಪಂ ಅನುದಾನದಲ್ಲಿ ನೂತನವಾಗಿ ಕಾಂಕ್ರೀಟೀಕರಣಗೊಂಡ ಕಾಂಕ್ರೀಟ್ ರಸ್ತೆಯನ್ನು ಕುವೆಟ್ಟು ಕ್ಷೇತ್ರದ ಜಿ.ಪಂ ಸದಸ್ಯೆ ಶ್ರೀಮತಿ ಮಮತಾ.ಎಂ ಶೆಟ್ಟಿಯವರು ಉದ್ಘಾಟಿಸಿದರು.
ಈ ಪ್ರದೇಶದಲ್ಲಿ ಓರ್ವ ವೈದ್ಯರಾಗಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಮಾಜಿ ಮಂಡಲ ಉಪಪ್ರಧಾನರಾಗಿ ಹಾಗೂ ಮಾಲಾಡಿ ಪಂಚಾಯತ್‌ನ ಅಧ್ಯಕ್ಷರಾಗಿ ಬಹಳಷ್ಟು ಸೇವೆ ಸಲ್ಲಿಸಿ ದಿವಂಗತರಾಗಿರುವ ಹಿರಿಯರಾದ ಎನ್.ಬಾಲಕೃಷ್ಣ ಭಟ್‌ರವರ ಸ್ಮರಣೆಗಾಗಿ ಊರಿನ ನಾಗರೀಕರ ಬೇಡಿಕೆಯಂತೆ ಈ ರಸ್ತೆಯನ್ನು ಎನ್.ಬಾಲಕೃಷ್ಣ ಭಟ್ ರಸ್ತೆ ಎಂದು ನಾಮಕರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಲಾಡಿ ಪಂಚಾಯತ್ ಅಧ್ಯಕ್ಷ ಎಸ್.ಬೇಬಿ ಸುವರ್ಣ, ದಿ| ಬಾಲಕೃಷ್ಣ ಭಟ್‌ರವರು ಮಾಡಿದ ಸಮಾಜ ಸೇವೆಯ ಗುಣಗಾನ ಮಾಡುತ್ತಾ ನಮ್ಮ ಪಂಚಾಯತ್‌ನಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಎಂ ಶೆಟ್ಟಿ ಮತ್ತು ಡೂಬರ್ಟ್ ಲೋಬೋ ಹಾಜರಿದ್ದರು. ಸದ್ರಿ ವಾರ್ಡ್‌ನ ಸದಸ್ಯರಾದ ಯಂ.ರವಿಶಂಕರ್ ಶೆಟ್ಟಿ ಮತ್ತು ಜಯಂತಿ ಎನ್.ನಾಯ್ಕ ಇವರು ಉಪಸ್ಥಿತರಿದ್ದರು. ಜಿ.ಪಂ ಮಾಜಿ ಸದಸ್ಯೆ ಶ್ರೀಮತಿ ತುಳಸಿ ಹಾರಬೆ, ಪಂ.ಉಪಾಧ್ಯಕ್ಷೆ ಶ್ರೀಮತಿ ಪ್ರೇಮ ಮತ್ತು ಪಂ.ಸದಸ್ಯರುಗಳಾದ ಶ್ರೀ ಕೃಷ್ಣ ಶೆಟ್ಟಿ, ಪುನೀತ್ ಕುಮಾರ್, ವಿಜಯ ಸಾಲಿಯಾನ್, ಕೃಷ್ಣಪ್ಪ ಪೂಜಾರಿ, ಶ್ರೀಮತಿ ಧನಲಕ್ಷ್ಮೀ ಚಂದ್ರಶೇಖರ್, ರೋಹಿಣಿ, ಕಾಂತಪ್ಪ ಗೌಡ ಮತ್ತಿತರರು ಸತ್ಕರಿಸಿದರು. ಚಂದ್ರಶೇಖರ ಉಪಾಧ್ಯಾಯ ಸ್ವಾಗತಿಸಿ, ಪ್ರಸ್ತಾವಿಸಿದ ಕಾರ್ಯಕ್ರಮದಲ್ಲಿ ಪಂ.ಸದಸ್ಯ ರವಿಶಂಕರ್ ಶೆಟ್ಟಿಯವರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.