ಸೇವಾಭಾರತಿ : 14ನೇ ವರ್ಷ ಸಂಭ್ರಮ ಸೇವಾ ಕಾರ್ಯಗಳ ಲೋಕಾರ್ಪಣೆ

  ಉಜಿರೆ : ಸೇವಾಭಾರತಿ(ರಿ) ಕನ್ಯಾಡಿ ಇದರ ೧೪ನೇ ವರ್ಷದ ಸಂಭ್ರಮಾಚರಣೆ ಮತ್ತು ವಿವಿಧ ಸೇವಾ ಕಾರ್ಯಗಳ ಲೋಕಾರ್ಪಣಾ ಸಮಾರಂಭವು ಫೆ.18ರಂದು ಕನ್ಯಾಡಿಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ. ಸಮಾರಂಭವನ್ನು ಸೇವಾಭಾರತಿ ಪೋಷಕ ; ನ್ಯಾಯವಾದಿ ಬಿ.ಕೆ ಧನಂಜಯರಾವ್ ಉದ್ಘಾಟಿಸಲಿದ್ದು, ಸೇವಾ ಭಾರತಿ ಅಧ್ಯಕ್ಷ ಬಿ.ಕೃಷ್ಣಪ್ಪ ಗುಡಿಗಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಭಾರತ್ ರಾಜ್ಯ ಪ್ರಭಾರಿ ನಿಕೇತ್‌ರಾಜ್ ಸೇವಾ ದಿಕ್ಸೂಚಿ ಭಾಷಣ ಮಾಡಲಿದ್ದು ಬೆಳ್ತಂಗಡಿ ತಾ.ಪಂ ಅಕ್ಷರ ದಾಸೋಹ ಬಿಸಿಯೂಟ ಯೋಜನಾ ನಿರ್ದೇಶಕ ಕೆ.ಜಿ ಲಕ್ಷ್ಮಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಸೇವಾ ಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ಮತ್ತು ಕಾರ್ಯದರ್ಶಿ ಕೆ. ವಿನಾಯಕ್ ರಾವ್ ತಿಳಿಸಿದ್ದಾರೆ.
ಸೇವಾಭಾರತಿ 14ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ವಿವಿಧ ಸೇವಾ ಕಾರ್ಯಗಳು ಲೋಕಾರ್ಪಣೆಗೊಳ್ಳಲಿವೆ. ತಾಲೂಕಿನ 41 ಗ್ರಾಮಗಳ ಆಯ್ದ 41 ಸರ್ಕಾರಿ ಶಾಲೆಗಳ ಗ್ರಂಥಾಲಯಕ್ಕೆ ರೂ 5ರಿಂದ 7 ಸಾವಿರ ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗುವುದು. ತಾಲೂಕಿನ 10 ಅರ್ಹ ಮನೆಗಳಿಗೆ ರೂ 10,000/- ವೆಚ್ಚದ ಉಚಿತ ಸೋಲಾರ್ ವಿದ್ಯುತ್ ಅಳವಡಿಸಲಾಗುವುದು. ಬೆನ್ನುಮೂಳೆ ಮುರಿತಕ್ಕೊಳಗಾದ 10 ಮಂದಿ ದಿವ್ಯಾಂಗರಿಗೆ ಉಚಿತವಾಗಿ ಗಾಲಿಕುರ್ಚಿ ವಿತರಿಸಲಾಗುವುದು. ತಾಲೂಕಿನ 241 ಸರ್ಕಾರಿ ಶಾಲೆಗಳ 606 ಅಡುಗೆ ಸಹಾಯಕಿಯರಿಗೆ ರಕ್ಷಾ ಉಡುಗೆ(ಆಫ್ರನ್) ಉಚಿತವಾಗಿ ವಿತರಿಸಲಾಗುವುದು. ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಆಯಾ ಗ್ರಾಮಗಳಲ್ಲಿ ಕಂಪ್ಯೂಟರ್ ತರಬೇತಿ ಶಿಕ್ಷಣ ಯೋಜನೆ ಆರಂಭಿಸಲಾಗುವುದು. ಬಂಟ್ವಾಳ ತಾಲೂಕು ಕನ್ಯಾನ ಭಾರತ ಸೇವಾಶ್ರಮ ಸೇವಾ ಸಂಸ್ಥೆ ಹಾಗೂ ಕಡಿರುದ್ಯಾವರ ಗ್ರಾಮದ ಭತ್ತದತಳಿ ಸಾವಯವ ಕೃಷಿಕ ಶಿವರಾವ್ ಅವರಿಗೆ ವಿಶೇಷ ಸಾಧನ ಪುರಸ್ಕಾರ ನಡೆಸಲಾಗುವುದೆಂದು ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ಮತ್ತು ಕಾರ್ಯದರ್ಶಿ ವಿನಾಯಕರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.