ಸರಕಾರಿ ಪ್ರೌಢಶಾಲೆ ಮಚ್ಚಿನ ಸಾಧನಾ ಸನ್ಮಾನ

machina highschool sadhakarige sanmana copy ಮಚ್ಚಿನ : ಸರಕಾರಿ ಪ್ರೌಢ ಶಾಲೆ, ಮಚ್ಚಿನ ಇಲ್ಲಿ 2015-16ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 7 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಸದಸ್ಯ ಮಹಮ್ಮದ್ ರಫಿಕ್ ವಹಿಸಿದ್ದರು. ಪ್ರಾಸ್ತವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಜಯನಾಯ್ಕ 2015-16 ಸಾಲಿನ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಕೆಲವೇ ಮಕ್ಕಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ 90% ಉತ್ತಮ ಗುಣಮಟ್ಟದ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, ಇದು ನಮ್ಮ ಶಿಕ್ಷಕ ವೃಂದದ ಸಾಂಘಿಕ ಪ್ರಯತ್ನದ ಫಲವಾಗಿದೆ ಎಂದು ಎಲ್ಲಾ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಸಾದಕ ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿ ಬಹುಮಾನಕ್ಕಾಗಿ ರೂ-7000 ನೀಡಿದ ಉದ್ಯಮಿ, ದಾನಿಗಳು ಆದ ಚಂದ್ರಕಾಂತ ನಿಡ್ಡಾಜೆ , ಹಾಗೂ ರೂ- 6000 ನೀಡಿದ ಅಮೆರಿಕದಲ್ಲಿ ಉದ್ಯೋಗದಲ್ಲಿ ಇರುವ ಸುಧೀಶ್ಚಂದ್ರ ಪಿ ಪೂಜಾರಿ (ದೈಹಿಕ ಶಿಕ್ಷಕ ಸುಭಾಷ್ ಚಂದ್ರರ ಸಹೋದರ) ಇವರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಚಂದ್ರಕಾಂತ ನಿಡ್ಡಾಜೆ ಮಾತನಾಡಿ ನಿಮ್ಮ ಸಾಧನೆಯ ಹಿಂದೆ ಸಮಾಜವೇ ಇರುತ್ತದೆಂದು ವಿದ್ಯಾರ್ಥಿಗಳ ಬೆನ್ನು ತಟ್ಟಿದರು.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ರಝಿನಾಬಾನು, ಅದಿತಿ ಕುಮಾರಿ, ಅಶ್ವಿತಾ, ಬುಶ್ರಾ, ದಿಕ್ಷೀತಾ, ಯೋಗೀಶ, ರಕ್ಷಿತಾ ಇವರನ್ನು ನಗದು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸಾಧನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ರಝಿನಾಬಾನು ಹಾಗೂ ಅದಿತಿ ಇವರು ನಮ್ಮ ಈ ಶೇ 96% ಫಲಿತಾಂಶ ಪಡೆಯಲು ಮುಖ್ಯೋಪಾಧ್ಯಾಯರ ಹಾಗೂ ಶಿಕ್ಷಕರ ಶ್ರಮದ ಮುಂದೆ ಇನ್ನೂ ಕಡಿಮೆ ಎನಿಸುತ್ತದೆಂದು ಆನಂದ ಭಾಷ್ಪಿತರಾದರು ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ರಾಮಣ್ಣ ಮೂಲ್ಯ, ಉಗ್ಗಪ್ಪ, ಶ್ರೀಮತಿ ಸುಧಾ, ಪಿ.ಟಿ.ಎ ಸದಸ್ಯರಾದ ಜನಾರ್ಧನ ಶಟ್ಟಿ, ಶಾಲಾ ಶಿಕ್ಷಕರಾದ ಸುಭಾಷ್ ಚಂದ್ರ ಪಿ ಪೂಜಾರಿ, ರಾಜೇಶ್ ನಾಯ್ಕ, ಶ್ರೀಮತಿ ಶಿಲ್ಪ, ದುರ್ಗಾಪ್ರಸಾದ್, ರೇವಣ್ಣ, ದಿನೇಶ್ ಹಾಗೂ ಹಳೆಯ ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ದುರ್ಗಾಪ್ರಸಾದ್ ನಡೆಸಿಕೊಟ್ಟರು, ಸುಭಾಷ್ ಸ್ವಾಗತಿಸಿ, ದಿನೇಶ್ ವಂದಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.