ಬೆಳ್ತಂಗಡಿ : ಕಳೆದ 39 ವರ್ಷಗಳಿಂದ ಹಲವಾರು ಸಮಾಜಮುಖಿ ಕೆಲಸಕಾರ್ಯಗಳನ್ನು ಹಮ್ಮಿಕೊಂಡು ಜನರ-ಪ್ರೀತಿ ವಿಶ್ವಾಸ ಗಳಿಸಿರುವ ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಫೆ.14ರಂದು ಸರಕಾರಿ ಆಸ್ಪತ್ರೆ ಬೆಳ್ತಂಗಡಿಗೆ ತೆರಳಿ ರೋಗಿಗಳಿಗೆ ಸಾಂತ್ವನ ಹೇಳುವ ಮುಖೇನ ಹಣ್ಣು ಹಂಪಲು ಹಾಗೂ ಏರ್ಟೆಲ್ ಕಂಪೆನಿಯಿಂದ ಕೊಡಲ್ಪಡುವ ಟಾರ್ಚ್ನ್ನು ವಿತರಿಸಲಾಯಿತು.
ಈ ಸಂದರ್ಭ ಆಸ್ಪತ್ರೆಯ ಸರ್ಜನ್ ಡಾ| ರಾಜೇಶ್, ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಸಂತೋಷ್.ಪಿ ಕೋಟ್ಯಾನ್ ಬಳಂಜ, ನಿಕಟಪೂರ್ವಾಧ್ಯಕ್ಷ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯ, ಜೇಸಿ ಪೂರ್ವಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಸಂತೋಷ್ ಕುಮಾರ್ ಜೈನ್, ಅಶೋಕ್ ಕುಮಾರ್ ಬಿ.ಪಿ, ಶ್ರೀನಾಥ್ ಕೆ.ಎಂ, ನಾರಾಯಣ ಶೆಟ್ಟಿ, ಕಾರ್ಯದರ್ಶಿ ರಂಜಿತ್ ಹೆಚ್.ಡಿ, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್, ಉಪಾಧ್ಯಕ್ಷರಾಗಿ ಗಣೇಶ್ ಶಿರ್ಲಾಲು, ಅಭಿನಂದನ್ ಹರೀಶ್ ಕುಮಾರ್, ಸ್ವರೂಪ್, ಪ್ರಶಾಂತ್ ಲಾಯಿಲ, ಕಿರಣ್ ಕುಮಾರ್ ಶೆಟ್ಟಿ, ದಾಮೋದರ್, ಯುವ ಜೇಸಿ ಅಧ್ಯಕ್ಷ ಮನೋಜ್, ಜೊತೆ ಕಾರ್ಯದರ್ಶಿ ಪ್ರೀತಂ ಶೆಟ್ಟಿ, ಗುರುರಾಜ್, ಶಿವಪ್ರಸಾದ್, ಜಿತೇಶ್ ಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.