ದಿಡುಪೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧರ್ಮಜಾಗೃತಿ ಸಭೆ

didupe hindu samavesha copy ದಿಡುಪೆ : ಹಿಂದೂ ಜನಜಾಗೃತಿ ಸಮಿತಿ ಇದರ ವತಿಯಿಂದ ಫೆ.೫ರಂದು ದಿಡುಪೆಯಲ್ಲಿ ನಡೆದ ಹಿಂದೂ ಧರ್ಮಜಾಗೃತಿ ಸಭೆಯನ್ನು ಮೂಡಬಿದ್ರೆ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಆಶೀರ್ವಚನ ನೀಡಿದ ಸ್ವಾಮೀಜಿಯವರು ಪವಿತ್ರ ಭಾರತ ಭೂಮಿಯಲ್ಲಿ ಇಡೀ ವಿಶ್ವದಲ್ಲಿಯೇ ಮಾನ್ಯತೆಯನ್ನು ಪಡೆದ ಗೋಮಾತೆಗೆ ಅನ್ಯಾಯವಾಗುತ್ತಿದೆ. ಸನಾತನ ಹಿಂದೂ ಧರ್ಮಕ್ಕೆ ಗೋವು ಜೀವಾಳದಂತೆ, ಜಗತ್ತು ಉಳಿದಿರುವುದು ಹಿಂದೂ ಧರ್ಮದಿಂದಾಗಿ, ಇಂದು ಹಿಂದೂ ಧರ್ಮಕ್ಕೆ ಅಘಾತಗಳಾಗುತ್ತಿರುವುದು ದುರ್ದೈವ, ಇಂದು ಇಡೀ ವಿಶ್ವ ಭಾರತದ ಕಡೆ ನೋಡುತ್ತಿದೆ ಆದರೆ ನಾವು ಪಾಶ್ಚಾತ್ಯ ಸಂಸ್ಕೃತಿಯೆಡೆ ಆಕರ್ಷಿತರಾಗುತ್ತಿದ್ದೇವೆ ಇದು ವಿಪರ್ಯಾಸ, ಸನಾತನ ಸಂಸ್ಥೆ ಸಂಸ್ಥಾಪಕರಾದ ಪರಾತ್ಪರ ಗುರು ಡಾ.ಜಯಂತ ಬಾಳಾಜಿ ಅಠವಳೆಯವರು ವಿಶ್ವಕ್ಕೆ ಜಗದ್ಗುರುವಿನ ಸ್ಥಾನದಲ್ಲಿದ್ದು, ಹಿಂದೂ ಜನಜಾಗೃತಿ ಸಮಿತಿ ಭಾರತವನ್ನು ವಿಶ್ವಗುರು ಮಾಡಲು ಹೊರಟಿರುವುದು ಅತ್ಯಂತ ಪ್ರಶಂಸನಿಯ ಎಂದರು.
ದ.ಕ ಜಿಲ್ಲಾ ಸಮನ್ವಯಕ ಚಂದ್ರ ಮೊಗೇರ ಮಾತನಾಡಿ, ಹಿಂದೂ ರಾಷ್ಟ್ರದ ಸ್ಥಾಪನೆಯೇ ದೇಶದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರೋಪಾಯ ಎಂದರು. ರಣರಾಗಿಣಿ ಶಾಖೆಯ ಸೌ. ಲಕ್ಷ್ಮೀ ಪೈ ಮಾತನಾಡಿ ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ವೀರಮಹಿಳೆಯ ಚರಿತ್ರೆ ನಮಗೆ ಆದರ್ಶವಾಗಿದೆ ಎಂದರು. ಸತಾನತ ಸಂಸ್ಥೆ ವಕ್ತಾರ ಸೌ. ಸಂಗೀತಾ ಪ್ರಭು ಮಾತನಾಡಿ ಧರ್ಮಾಚರಣೆ ಮಾಡುವುದರಿಂದ ನಮಗೆ ಭಗವಂತನ ಧೈವಿ ಶಕ್ತಿಯ ಲಾಭವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಭೆಯ ನಿಮಿತ್ತ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ಹೊರಟ ಬೈಕ್ ರ‍್ಯಾಲಿ ಲಾಯಿಲ, ಸೋಮಂತಡ್ಕ ಮಾರ್ಗವಾಗಿ ದಿಡುಪೆಗೆ ಆಗಮಿಸಿತು. ಹಿಂದೂ ಧರ್ಮಾಭಿಮಾನಿ ಬೈಕ್ ಸವಾರರಿಗೆ ಸುಬ್ರಹ್ಮಣ್ಯ ರಾವ್ ಕೊಲ್ಲಿಪಾಲು, ಸುರೇಶ ಪೂಜಾರಿ ಕೊಲ್ಲಿ, ನಾರಾಯಣ ಗೌಡ ಕೊಂಡಾಲು, ಪ್ರಮೋದ್, ದೀಪಕ್, ನಂದೀಶ್ ಭಗವಧ್ವಜವನ್ನು ಹಸ್ತಾಂತರಿಸಿದರು. ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸುವ ಹಾಗೂ ಮಕ್ಕಳಿಂದ ಧರ್ಮಾಚರಣೆಯನ್ನು ಕಲಿಸುವ ಬಲಕಕ್ಷೆಯನ್ನು ಏರ್ಪಡಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.