ಕಸಾಪ ಜಿಲ್ಲಾ ಸಮ್ಮೇಳನದ ಕೃತಜ್ಞತಾ ಸಭೆ

ka sa pa krthajnathe sabhe copyತಾಲೂಕು ಕಸಪಾ ಅಧ್ಯಕ್ಷ ಡಾ. ಬಿ. ಯಶೋವರ್ಮ ಮಾತನಾಡುತ್ತಿರುವುದು

  ಸನ್ಮಾನ : ಸಮ್ಮೇಳನದ ಸಮಿತಿ ಅಧ್ಯಕ್ಷರಾಗಿದ್ದ ವಿಜಯರಾಘವ ಪಡುವೆಟ್ನಾಯ, ಆತಿಥೇಯ ಪರಿಷತ್‌ನ ಅಧ್ಯಕ್ಷ ಡಾ| ಬಿ. ಯಶೋವರ್ಮ ಅವರನ್ನು ಸಮ್ಮೇಳನ ಸಮಿತಿ ಹಾಗೂ ಎಲ್ಲಾ ಸಂಯೋಜನಾ ಸಮಿತಿಯ ಪದಾಧಿಕಾರಿಗಳ ಪ್ರತಿನಿಧಿಗಳೆಂಬಂತೆ ಇಬ್ಬರನ್ನೂ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅವರು ಶಾಲು, ಹಣ್ಣುಹಂಪಲು ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು. 

ಉಜಿರೆ : ಉಜಿರೆಯಲ್ಲಿ ನಡೆದ 21 ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜನ ಅಪೇಕ್ಷೆಪಟ್ಟು ಮಾಡಿದ್ದಾರೆ. ಇಲ್ಲಿನ ಜನರ ಸಹಭಾಗಿತ್ವ ಆಸಕ್ತಿ ನೋಡಿದಾಗ ಜನತೆಗೆ ಇದ್ದ ಸಾಹಿತ್ಯದ ಹಸಿವು ವ್ಯಕ್ತವಾಗುತ್ತಿತ್ತು. ಆಗಿರುವ ವ್ಯತ್ಯಾಸಗಳನ್ನು ಗಮನಿಸಿಕೊಂಡು ಮುಂದಕ್ಕೆ ಬದಲಾವಣೆಗಳನ್ನು ಅಳವಡಿಸಿ ಕೊಳ್ಳುತ್ತೇವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಉಜಿರೆಯಲ್ಲಿ ನಡೆದ 21 ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ, ಸಂಯೋಜನಾ ಸಮಿತಿಗಳು ಹಾಗೂ ಸಮ್ಮೇಳನ ಯಶಸ್ವಿಗೆ ಶ್ರಮಿಸಿದವರಿಗೆ ಇಲ್ಲಿನ ರಾಮಕೃಷ್ಣ ಸಭಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ ಉತ್ತರದಾಯಿತ್ವ ಇದೆ. ಜಾಗರೂಕತೆ ಯಿಂದ ಹೆಜ್ಜೆ ಇಡಬೇಕಾದ ಅನಿವಾ ರ್ಯತೆ ಇದೆ. ವ್ಯವಸ್ಥೆಯ ದೃಷ್ಠಿಯಿಂದ ಪ್ರಶ್ನಿಸುವ ಎಲ್ಲರಿಗೂ ಸಮರ್ಪಕ ಉತ್ತರಗಳನ್ನು ನೀಡುತ್ತಾ, ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳ ಬೇಕಾಗಿರುವ ಜವಾಬ್ಧಾರಿ ಯೊಂದಿಗೆ ಕಾರ್ಯಕ್ರಮಗಳನ್ನು ಇದುವರೆಗೆ ಆಯೋಜಿಸುತ್ತಾ ಬರಲಾಗಿದೆ. ಉಜಿರೆಯ ಸಮ್ಮೇಳನ ಅಭೂತಪೂರ್ವ ವಾಗಿ ನಡೆದಿದ್ದು ನೆನಪಿನಲ್ಲಿ ಉಳಿಯು ವಂತಹದ್ದಾಗಿದೆ ಎಂದು ಮೆಚ್ಚುಗೆ ಮಾತನ್ನಾಡಿದರು. ಪ್ರಾರಂಭಿಕ ನೆಲೆಯಲ್ಲಿ ಮಾತನಾಡಿದ ಆತಿಥೇಯ ತಾ| ಕಸಾಪ ಅಧ್ಯಕ್ಷ ಡಾ| ಬಿ. ಯಶೋವರ್ಮ ಅವರು, ಕನಿಷ್ಠ ದಿನಗಳಲ್ಲಿ ಸಮಿತಿಯ ಪದಾಧಿಕಾರಿಗಳು ಗರಿಷ್ಠ ಶ್ರಮವಹಿಸಿ ಸಮ್ಮೇಳನ ಅವಿಸ್ಮರಣೀಯಗೊಳಿಸಿದ್ದಾರೆ. ತಪ್ಪು ಒಪ್ಪುಗಳು ವ್ಯತ್ಯಾಸಗಳು ಸಾಮಾನ್ಯ. ಅವುಗಳು ಆಂತರಿಕವಾಗಿ ತಿಳಿದುಬರುತ್ತದಾದರೂ ಸಾರ್ವಜನಿಕ ವಾಗಿ ಉತ್ತಮ ಸಮ್ಮೇಳನ ನಡೆದಿದೆ. ಇದರಲ್ಲಿ ಎರಡು ಮಾತಿಲ್ಲ. ಶ್ರಮಿಸಿದ ಎಲ್ಲರೂ ಕೃತಜ್ಞಾರ್ಹರು ಎಂದರು. ಅಧ್ಯಕ್ಷತೆಯಿಂದ ಮಾತನಾಡಿದ ಸಮ್ಮೇಳನ ಸಮಿತಿ ಅಧ್ಯಕ್ಷ ವಿಜಯ ರಾಘವ ಪಡುವೆಟ್ನಾಯ ಉಜಿರೆಯಲ್ಲಿ ಯಾವ ಕಾರ್ಯಕ್ರಮ ನಡೆದರೂ ವ್ಯವಸ್ಥಿತವಾಗಿರುತ್ತದೆ. ಇಲ್ಲಿನ ಜನತೆ ಅದಕ್ಕಾಗಿ ಅಪರಿಮಿತ ಶ್ರಮದಾನ ನಡೆಸುತ್ತಾರೆ. ರಾಜ್ಯಮಟ್ಟದ ವ್ಯವಸ್ಥೆ ಯೊಂದಿಗೆ ಇಲ್ಲಿ ಜಿಲ್ಲಾ ಸಮ್ಮೇಳನ ನಡೆದಿದೆ. ಈ ಯಶಸ್ಸಿನ ಕೀರ್ತಿ ಶ್ರೀ ಜನಾರ್ದನ ದೇವರಿಗೆ ಅರ್ಪಿತವಾದದ್ದು ಎಂದರು.ವಿವಿಧ ಸಂಯೋಜನಾ ಸಮಿತಿ ಮುಖ್ಯಸ್ಥರುಗಳು ಹಾಗೂ ಸಮಿತಿಯ ಪ್ರಮುಖರಾದ ಟಿ.ಕೆ. ಶರತ್ ಕುಮಾರ್, ಇಚ್ಚಿಲ ಸುಂದರ ಗೌಡ, ಪ್ರೊ. ಕೃಷ್ಣಪ್ಪ ಪೂಜಾರಿ, ಬಿ. ಸೋಮಶೇಖರ ಶೆಟ್ಟಿ , ಅನಿಲ್ ನಾಯ್ಗ, ಶರತ್‌ಕೃಷ್ಣ ಪಡುವೆಟ್ನಾಯ, ಪ್ರೋ. ಭಾಸ್ಕರ ಹೆಗ್ಡೆ, ಡಾ| ಪ್ರದೀಪ್ ಕುಮಾರ್ ನಾವೂರು, ಕೃಷ್ಣ ಶೆಟ್ಟಿ, ಡಿ. ಯದುಪತಿ ಗೌಡ, ವೆಂಕಟ್ರಮಣ ಭಟ್ ಪರಾರಿ, ಸತೀಶ್ ಗ್ರಾಮಾಭಿವೃದ್ಧಿ ಯೋಜನೆ ಇವರುಗಳು ಮುಂದಕ್ಕೆ ಆಗಬೇಕಾಗಿರುವ ಬದಲಾವಣೆಗಳು, ಸೇರ್ಪಡೆಗೊಳಿಸ ಬೇಕಾಗಿರುವ ಅಂಶಗಳನ್ನು ಸೂಚಿಸಿ ಮುಕ್ತ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಅವರು ಅನಿಸಿಕೆ ವ್ಯಕ್ತಪಡಿಸಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್. ನರೇಂದ್ರ, ಸಮ್ಮೇಳನ ಕೋಶಾಧ್ಯಕ್ಷ ಹರೀಶ್ ಪೂಂಜ, ಉಜಿರೆ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ, ಸಮ್ಮೇಳನ ಸಮಿತಿ ಪ್ರಧಾನ ಸಂಯೋಜಕರಾಗಿದ್ದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ| ಎಂ.ಪಿ. ಶ್ರೀನಾಥ್, ಸಮಿತಿ ಕಾರ್ಯದರ್ಶಿಗಳಾದ ಕೇಶವ ಪಿ. ಬೆಳಾಲು ಮತ್ತು ಸಂಪತ್ ಬಿ. ಸುವರ್ಣ, ಗಣ್ಯರಾದ ನಿತ್ಯಾನಂದ ಪೊಳಲಿ ಹಾಗೂ ಜನಾರ್ದನ ಹಂದೆ ಇವರುಗಳು ಉಪಸ್ಥಿತರಿದ್ದರು. ಸಮ್ಮೇಳನ ಸಮಿತಿ ಪ್ರ. ಕಾರ್ಯದರ್ಶಿ ಡಾ| ಎಂ.ಎಂ. ದಯಾಕರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು. ಇನ್ನೋರ್ವ ಕಾರ್ಯದರ್ಶಿ ಅಚ್ಚು ಮುಂಡಾಜೆ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.