ಸುರಕ್ಷಾ ನಿಡ್ಲೆಗೆ “ಜ್ಞಾನಶ್ರೀ ರಾಜ್ಯ ಪ್ರಶಸ್ತಿ- 2016” ಪ್ರದಾನ

sanamana ಬೆಳ್ತಂಗಡಿ: ನಿಡ್ಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಕಲಿತು ಉತ್ತಮ ಅಂಕ ಸಾಧಿಸುವುದರೊಂದಿಗೆ ಪ್ರತಿಭಾನ್ವಿತೆಯಾಗಿ ಹೊರಹೊಮ್ಮಿ ತರಗತಿಗೆ ಪ್ರಥಮ ಸ್ಥಾನಿಯಾಗಿ, ಪ್ರಸ್ತುತ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಥಮ ಪಿಯುಸಿ ಯಲ್ಲಿ ಕಲಿಯುತ್ತಿರುವ ನಿಡ್ಲೆ ಗ್ರಾಮ “ಸುಖಿಃ” ನಿಲಯದ ಸುರಕ್ಷಾ ಅವರಿಗೆ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ಕೊಡಮಾಡುವ ಕನ್ನಡ ಕಲಾಪ್ರತಿಭೋತ್ಸವ ಜ್ಞಾನಶ್ರೀ ರಾಜ್ಯ ಪ್ರಶಸ್ತಿ-2016 ದೊರೆತಿದೆ.
ಫೆ. 4 ರಂದು ಮಂಗಳೂರು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಗಣ್ಯರ ಸಮ್ಮುಖ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿಡ್ಲೆಯ ಗೋಪಾಲ ಆಚಾರ್ಯ ಮತ್ತು ರಾಜೀವಿ ದಂಪತಿ ಪ್ರಥಮ ಪುತ್ರಿಯಾಗಿರುವ ಸುರಕ್ಷಾ ಅವರು ಪ್ರಬಂಧ ಸ್ಪರ್ಧೆಯಲ್ಲೂ ಭಾಗವಹಿಸುತ್ತಾ ಬಹುಮಾನಗಳನ್ನು ಗೆದ್ದುಕೊಂಡಿದ್ದಲ್ಲದೆ ಯೋಗಾಭ್ಯಾಸದಲ್ಲೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.