HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮರೋಡಿ :ರಸ್ತೆ ಅಭಿವೃದ್ಧಿಯ ಬಗ್ಗೆ ಮಾಜಿ ಸಚಿವ ಅಭಯಚಂದ್ರ ಜೈನ್‌ರವರಿಗೆ ಮನವಿ

marody photos copy  ಮರೋಡಿ : ಮರೋಡಿ ಗ್ರಾಮವು ಮೂಡುಬಿದಿರೆಗೆ ಹೊಂದಿಕೊಂಡಿದ್ದು, ನಮ್ಮ ಎಲ್ಲಾ ದಿನಚರಿಗಳಿಗೆ ನಾವು ಮೂಡಬಿದಿರೆಯನ್ನೇ ಅವಲಂಬಿತರಾಗಿದ್ದೇವೆ. ಅಲ್ಲದೇ ಧರ್ಮಸ್ಥಳ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುವ ಎಲ್ಲಾ ವಾಹನಗಳು ನಾರಾವಿಯಿಂದ ಮರೋಡಿ-ಶಿರ್ತಾಡಿಗಾಗಿ ಮೂಡುಬಿದಿರೆಗೆ, ಕುತ್ಲೂರು ಸಾವ್ಯ ಕಡೆಯಿಂದ ಮರೋಡಿ-ಶಿರ್ತಾಡಿ ಮೂಡುಬಿದಿರೆಗೆ ದಿನಕ್ಕೆ ಸಾವಿರಾರು ವಾಹನಗಳು ಈ ರಸ್ತೆಯ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಆದ್ದರಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಈ ಭಾಗದ ನಾಗರಿಕರು ಮಾಜಿ ಸಚಿವ ಅಭಯ ಚಂದ್ರ ಜೈನ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಆದರೆ ಸದ್ರಿ ನಾರಾವಿ-ಮರೋಡಿ ರಸ್ತೆಯು ಮತ್ತು ಶಿರ್ತಾಡಿ-ಮೂಡಬಿದಿರೆ ರಸ್ತೆಯು ಒಳ್ಳೆಯ ರೀತಿಯಲ್ಲಿದ್ದು, ಮರೋಡಿ ಗ್ರಾಮದ ದೋಣಿಬಾಗಿಲು ಸೇತುವೆಯಿಂದ (ಬಹಳ ವರ್ಷಗಳ ಹಿಂದೆ ಫಲ್ಗುಣಿ ಹೊಳೆಗೆ ದೋಣಿ ಬಾಗಿಲು ಎಂಬಲ್ಲಿ ಸೇತುವೆ ನಿರ್ಮಿಸಲು ನೀವು ಮಾಡಿದ ಪ್ರಯತ್ನವನ್ನು ನೆನಪಿಸಿಕೊಂಡು, ಕೃತಜ್ಞತಾ ಭಾವದಿಂದ) ಮಕ್ಕಿ-ಶಿರ್ತಾಡಿಗೆ ಬರುವ ೨ ಕಿ.ಮೀ ರಸ್ತೆಯು ಬಹಳ ಕಿರಿದಾಗಿದ್ದು, ವಾಹನ ಸವಾರರಿಗೆ ಬಹಳ ಅಪಾಯಕಾರಿಯಾಗಿದೆ.
ಆದುದರಿಂದ ಈ ರಸ್ತೆಯನ್ನು ಅಗಲಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಜ.೨೬ರಂದು ನಾರಾವಿ ತಾಲೂಕು ಪಂ.ಸದಸ್ಯೆ ಶ್ರೀಮತಿ ರೂಪಲತಾ, ಪೆರಾಡಿ ವ್ಯ.ಸೇ.ಬ್ಯಾಂಕ್‌ನ ನಿರ್ದೇಶಕ ಜಯ ಕುಮಾರ್.ಕೆ, ಗ್ರಾ.ಪಂ ಮಾಜಿ ಸದಸ್ಯ ಇಗ್ನೇಷಿಯಸ್ ಸಾಂತೀಸ್, ಊರಿನ ಸಮಾಜ ಸೇವಾ ಕಾರ್ಯಕರ್ತರಾದ ವಿನೋಧರ ಸಾಲ್ಯಾನ್ ಕಲ್ಲಟ್ಟ, ಕರುಣಾಕರ ಸುವರ್ಣ ಚಂದಮಾಮ, ಸುಹಾಸ್ ಬಳ್ಳಾಲ್ ಅಂಗಡಿಬೆಟ್ಟು, ವಿಶು ಕುಮಾರ್ ಜೈನ್ ಪಾರ‍್ದೊಟ್ಟು, ಹರೀಶ್ ಸಾಲ್ಯಾನ್ ತುಂಬೆ, ರವೀಂದ್ರ ಪೂಜಾರಿ ಅಟ್ಲೊಟ್ಟು, ಇವರುಗಳು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.