ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಹುತಾತ್ಮ ದಿನಾಚರಣೆ

jci copyಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನಾಚರಣೆಯನ್ನು ಜ. 30ರಂದು ಬೆಳ್ತಂಗಡಿ ಜೆಸಿ ಭವನದಲ್ಲಿ ಆಚರಿಸಲಾಯಿತು.
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವುದರೊಂದಿಗೆ ಗೌರವವನ್ನು ಸೂಚಿಸಿ ಈ ದೇಶ ಕಂಡ ಮಹಾನ್ ವ್ಯಕ್ತಿ ಎಂದರೆ ಅದು ಮಹಾತ್ಮ ಗಾಂಧೀಜಿ, ಅಹಿಂಸ ತತ್ವದ ಮುಖಂತರ ಉಪ್ಪಿನ ಸತ್ಯಾಗ್ರಹ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜೆಸಿಐನ ಪೂರ್ವಾಧ್ಯಕ್ಷ ಶ್ರೀನಾಥ್ ಕೆ.ಎಂ. ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ವಹಿಸಿದ್ದರು.
ವಲಯಾಧಿಕಾರಿಯಾದ ಚಿದಾನಂದ ಇಡ್ಯ, ವಸಂತ ಶೆಟ್ಟಿ ಶ್ರದ್ಧಾ, ಕಾರ್ಯದರ್ಶಿ ರಂಜಿತ್ ಹೆಚ್.ಡಿ., ಯುವ ಜೇಸಿ ಅಧ್ಯಕ್ಷ ಮನೋಜ್, ಪೂರ್ವಾಧ್ಯಕ್ಷ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶಿರ್ಲಾಲು, ಪ್ರಸಾದ್ ಕಕ್ಕಿಂಜೆ, ಸ್ವರೂಪ್, ಪ್ರಶಾಂತ್ ಲಾಲ, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್, ಚಿದಾನಂದ, ವಿಜಯ್ ನಿಡಿಗಲ್, ಕಿರಣ್ ಶೆಟ್ಟಿ, ರತೀಶ್ ರಾವ್, ಪ್ರೀತಿ ರಾವ್, ಗಣೇಶ್ ಕಕ್ಕಿಂಜೆ, ಸದಾಶಿವ, ಶಿವಪ್ರಸಾದ್ ಹಾಗೂ ಜೇಸಿ ಮಿತ್ರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.