HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವಿದುಷಿ ಸುಚಿತ್ರಾ ಹೊಳ್ಳ ರಾಗಧನ ಪಲ್ಲವಿ ಪ್ರಶಸಿಗೆ ಆಯ್ಕೆ

Suchithra holla copyಉಜಿರೆ : ಉಡುಪಿ ರಾಗಧನ ಸುಶೀಲಾ ಉಪಾಧ್ಯಾಯ ಸಂಸ್ಮರಣಾರ್ಥ ಕೊಡ ಮಾಡುವ ಡಾ| ಯು.ಪಿ ಉಪಾಧ್ಯಾ ಪ್ರಾಯೋಜಿತ ರಾಗಧನ ಪಲ್ಲವಿ 2017ರ ಸಾಲಿನ ಪ್ರಶಸ್ತಿಗೆ ಉಜಿರೆಯ ಪ್ರತಿಭಾವಂತೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ, ವಿದುಷಿ ಶ್ರೀಮತಿ ಸುಚಿತ್ರಾ ಹೊಳ್ಳ ಆಯ್ಕೆಯಾಗಿದ್ದಾರೆ.
ಫೆ.4ರಂದು ರಾಗಧನ ಆಶ್ರಯದಲ್ಲಿ ಉಡುಪಿಯಲ್ಲಿ ನಡೆಯಲಿರುವ ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಧನೆ : ಶ್ರೀಮತಿ ಶ್ಯಾಮಲಾ ನಾಗರಾಜ್ ಅವರ ಬಳಿ ಸಂಗೀತ ಪಾಠ ಕಲಿಯಲು ಪ್ರಾರಂಭಿಸಿದ ಇವರು, ಕಾಂಚನದ ಕುದ್ಮಾರ್ ವೆಂಕಟರಾಮನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪಡೆದು, ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ನೀಲಾ ರಾಮ್‌ಗೋಪಾಲ್ ಬೆಂಗಳೂರು ಮಾರ್ಗದರ್ಶನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಮುಂದುವರಿಸಿದರು.
ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ 1991ರಲ್ಲಿ ರಾಗತರಂಗ ಸಂಸ್ಥೆ ಮಂಗಳೂರು ಇವರಿಗೆ ಬಾಲಪ್ರತಿಭಾ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಸುಚಿತ್ರ ಅವರ ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸ್ಕಾಲರ್‌ಶಿಪ್ ಕೂಡ ದೊರೆತಿದೆ. ಏರುಕಂಠ, ಚುರುಕು ನಡೆಯ ಪ್ರಸ್ತುತಿ ಇವರ ಹಾಡುಗಾರಿಕೆಯ ವಿಶೇಷತೆ. ಅಲ್ಪಕಾಲದಲ್ಲಿಯೇ ಇವರು ೬೦೦ಕ್ಕೂ ಹೆಚ್ಚಿನ ಸಂಗೀತ ಕಛೇರಿಗಳನ್ನು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಹಾಸನ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ನೀಡಿರುತ್ತಾರೆ. ಶ್ರೀಮತಿ ಸುಚಿತ್ರಾ ಹೊಳ್ಳ ತಮ್ಮ ಹೆಚ್ಚಿನ ಸಮಯವನ್ನು ಸಂಗೀತ ಕ್ಷೇತ್ರಕ್ಕೆ ಸಾಧನೆಗೆ ಮೀಸಲಾಗಿಸಿದ್ದರೂ. ಅದಕ್ಕೆ ಸೀಮಿತವಾಗದೆ, ಬಹುಮುಖ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರು ಎಂ.ಕಾಂ, ಎಂ.ಬಿ.ಎ, ಎಲ್.ಎಲ್.ಬಿ ಪದವೀದರೆ. ಅಲ್ಲದೆ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪಿ.ಹೆಚ್.ಡಿ ಮಾಡುತ್ತಿದ್ದಾರೆ. ಈಗಷ್ಟೇ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಎಂ.ಮ್ಯೂಸಿಕ್ ಪೂರೈಸಿ, ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ನ್ನು ಪಡೆದಿರುತ್ತಾರೆ. ವಕೀಲೆಯಾಗಿ ಸೇವೆ ಸಲ್ಲಿಸಿರುವ ಸುಚಿತ್ರಾ ಹೊಳ್ಳ ಸಂದೇಶ ಲಲಿತಾ ಕಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಕೆಲಸ ಮಾಡಿದ್ದು, ಪ್ರಸ್ತುತ ಸರ್ಕಾರಿ ಪದವಿಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆ ಮಾಡುತ್ತಿದ್ದಾರೆ. ಇತ್ತೀಚೆಗೆ ಉಜಿರೆಯಲ್ಲಿ ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಕಾರ್ಯಕ್ರಮ ನೀಡಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.