ನಾವೂರು ದೇವಸ್ಥಾನದಲ್ಲಿ ಜನಮನ ರಂಜಿಸಿದ ಅಷ್ಟಾವಧಾನ ಕಾರ್ಯಕ್ರಮ

Advt_NewsUnder_1
Advt_NewsUnder_1

navoor astavadhana copyನಾವೂರು : ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನಾವೂರು, ಅಷ್ಟಾವಧಾನ ಸಮಿತಿ ಇವರ ನೇತೃತ್ವದಲ್ಲಿ ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಇವರ ಸಹಭಾಗಿತ್ವದಲ್ಲಿ ಶತಾವಧಾನಿ ಡಾ| ಆರ್. ಗಣೇಶ್ ಬೆಂಗಳೂರು ಇವರಿಂದ ‘ಅಷ್ಟಾವಧಾನ’ ಕಾರ್ಯಕ್ರಮ ಜ.20ರಂದು ಸಂಜೆ ನಾವೂರು ದೇವಸ್ಥಾನದ ವಠಾರದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಜಮಾ ಉಗ್ರಾಣದ ಮುತ್ಸದ್ಧಿ ಬಿ. ಭುಜಬಲಿ ದೀಪ ಬೆಳಗಿಸಿ ಉದ್ಘಾಟಿಸಿ, ಅಷ್ಟಾವಧಾನ ಕಾರ್ಯಕ್ರಮ ಈ ಭಾಗದಲ್ಲಿ ನಡೆಯುತ್ತಿರುವುದು ಪ್ರಥಮವಾಗಿದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಅತ್ಯಂತ ಮಹತ್ವವಾಗಿದೆ. ಇದು ನಮ್ಮ ಸಂಸ್ಕೃತಿಯನ್ನು ಹೆಚ್ಚಿಸುವಲ್ಲಿಯೂ ಪರಿಣಾಮಕಾರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಗಾಡಿ ಅರಮನೆಯ ರವಿರಾಜ ಬಲ್ಲಾಳ್ ವಹಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮತ್ತು ವಕೀಲ ಬಿ.ಕೆ ಧನಂಜಯ ರಾವ್, ರೋಟರಿ ಕ್ಲಬ್‌ನ ಪಾಂಡುರಂಗ ಬಾಳಿಗ ಉಜಿರೆ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಬೆಳ್ತಂಗಡಿ, ಮಂಜುಶ್ರೀ ಜೇಸಿ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಡಾ| ಜಗನ್ನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಉಪಸ್ಥಿತರಿದ್ದರು.
ಅಷ್ಟಾವಧಾನ ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಕಾರ್ಯದರ್ಶಿ ಉಮೇಶ್ ಅತ್ಯಡ್ಕ, ಯಶೋಧರ ಬಲ್ಲಾಳ್, ಹರೀಶ್ ಕಾರಿಂಜ, ಮೋಹನ್ ಬಂಗೇರ, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ವಿಷ್ಣು ಶರ್ಮ ಅವರ ಪ್ರಾರ್ಥನೆ ಬಳಿಕ ಅಷ್ಟಾವಧಾನ ಸಮಿತಿ ಕಾರ್ಯಾಧ್ಯಕ್ಷ ಡಾ| ಪ್ರದೀಪ್ ಸ್ವಾಗತಿಸಿದರು. ಉಜಿರೆ ಕಾಲೇಜಿನ ಉಪನ್ಯಾಸಕ ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಶತವಧಾನಿ ಡಾ| ಆರ್ ಗಣೇಶ್ ಬೆಂಗಳೂರು ಇವರಿಂದ ಅಷ್ಟಾವಧಾನ ಕಾರ್ಯಕ್ರಮ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿತು. ವೇದಿಕೆಯಲ್ಲಿ ಎಂಟು ಕ್ಷೇತ್ರಗಳ ಪೃಚ್ಛಕರು ಕೇಳುವ ಪ್ರಶ್ನೆಗಳಿಗೆ ಅವಧಾನಿಗಳು ಉತ್ತರಿಸಿದರು. ದತ್ತಪದಿ, ಕಾವ್ಯವಾಚನ ಅಶುಕವಿತೆ, ನಿಷೇಧಪದ ತ್ಯಜಿಸಿ ಛಂದೋಬದ್ಧ ಕವಿತಾ ರಚನೆ, ಸಂಖ್ಯಾಶಾಸ್ತ್ರ ಜತೆಗೆ ಅಪ್ರಾಸಂಗಿಕ ಪ್ರಶ್ನೆಗಳಿಗೆ ಹೀಗೆ ಅವಧಾನಿಗಳು ಅನೇಕ ರೀತಿಯ ಕಸರತ್ತುಗಳಿಗೆ ಏಕಕಾಲಕ್ಕೆ ನಿರ್ವಹಿಸಬೇಕಾದ ಎಲ್ಲಾ ಕಾರ್ಯಗಳನ್ನು ಅವಧಾನಿಗಳು ಸಮರ್ಪಕವಾಗಿ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ನಿಷೇದಾಕ್ಷರಿಯಲ್ಲಿ ವಿದ್ವಾನ್ ಸುಬ್ರಹ್ಮಣ್ಯ ಭಟ್, ದತ್ತಪದಿಯಲ್ಲಿ ವಿದ್ವಾನ್ ಸೋಮಶೇಖರ ಶರ್ಮ ಬೆಂಗಳೂರು, ಸಮಸ್ಯಾಪೂರ್ಣ ವಿದ್ವಾನ್ ಗಣೇಶ್ ಭಟ್ ಕೊಪ್ಪಲತೋಟ, ಚಿತ್ರಕವಿತೆಯಲ್ಲಿ ವಿದ್ವಾನ್ ಡಾ| ಆರ್ ಶಂಕರ್, ಕಾವ್ಯವಾಚನದಲ್ಲಿ ವಿದ್ವಾನ್ ಕೆ.ವಿ ರಮಣ್ ಮಂಗಳೂರು, ಆಶುಕವಿತೆಯಲ್ಲಿ ವಿದ್ವಾನ್ ಮಹೇಶ್ ಭಟ್ ಹಾರ್ಯಾಡಿ, ಅಪ್ರಸ್ತುತದಲ್ಲಿ ವಿದ್ವಾನ್ ಡಾ| ರಾಮಕೃಷ್ಣ ಪೆಜತ್ತಾಯ, ಸಂಖ್ಯಾಬಂಧದಲ್ಲಿ ವಿದ್ವಾನ್ ಶ್ರೀಧರ ಭಟ್ ಶ್ರೀ ಧ.ಮಂ.ಕಾಲೇಜು ಉಜಿರೆ ಭಾಗವಹಿಸಿದ್ದರು.
ದೇವಸ್ಥಾನದ ವತಿಯಿಂದ ಅವಧಾನಿಗಳನ್ನು ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ, ಡಾ. ಬಿ. ಯಶೋವರ್ಮ, ವಿಜಯರಾಘವ ಪಡ್ವೆಟ್ನಾಯ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಸನ್ಮಾನಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.