HomePage_Banner_

2015-16 ನೇ ಭತ್ತದ ಬೆಳೆ ಸ್ಪರ್ಧೆ ತಾಲೂಕಿನ ತಲಾ 3 ಮಂದಿಗೆ ಜಿಲ್ಲೆ ಮತ್ತು ತಾಲೂಕು ಮಟ್ಟದ ಪ್ರಶಸ್ತಿ

frontಬೆಳ್ತಂಗಡಿ: 2015-16ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಾಲೂಕಿನ 3 ಮಂದಿಗೆ ಜಿಲ್ಲಾ ಮಟ್ಟದ 3 ಪ್ರಶಸ್ತಿಗಳು ಲಭಿಸಿದೆ. ಅಂತೆಯೇ ತಾಲೂಕು ಮಟ್ಟದಲ್ಲೂ ಕೂಡ 3 ಮಂದಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರು:
ಬೆಳಾಲು ಗ್ರಾಮದ ಜಾರಿಗೆದಡಿ ಸುರುಳಿ ಮನೆಯ ಶಿವಮ್ಮ, ಗರ್ಡಾಡಿ ಗ್ರಾಮದ ಪುಂಜಾಲಬೈಲು ನಿತ್ಯಾನಂದ ಶೆಟ್ಟಿ ಮತ್ತು ಹೊಸಂಗಡಿ ಗ್ರಾಮದ ಪಡ್ಡಂದಡ್ಕ ಮನೆಯ ಜೆರೋಮಿಯಸ್ ಮೋರಾಸ್ ಅವರಿಗೆ ಅನುಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಲಭಿಸಿದೆ. ಪ್ರಥಮ ಸ್ಥಾನಕ್ಕೆ ೨೫ ಸಾವಿರ ರೂ ವಿಶೇಷ ನಗದು ಪ್ರೋತ್ಸಾಹ, ದ್ವಿತೀಯ ಸ್ಥಾನಕ್ಕೆ ೧೫ ಸಾವಿರ ರೂ ನಗದು ಪ್ರೋತ್ಸಾಹ ಮತ್ತು ತೃತೀಯ ಸ್ಥಾನಕ್ಕೆ 10 ಸಾವಿರ ರೂ ನಗದು ಪುರಸ್ಕಾರ ಲಭಿಸಿದೆ.
ತಾಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತರು:
ಅದೇ ರೀತಿ ತಾಲೂಕು ಮಟ್ಟದಲ್ಲಿ ಘೋಷಿಸಲಾದ ಪ್ರಶಸ್ತಿಗಳ ಪೈಕಿ ಪ್ರಥಮ ಸ್ಥಾನಕ್ಕೆ ಉಜಿರೆಯ ಅರಿಪ್ಪಾಡಿ ಶ್ರೀ ದುರ್ಗಾ ನಿಲಯದ ನಿವಾಸಿ, ಉದ್ಯಮಿ ಹಾಗೂ ಕೊಡುಗೈ ದಾನಿಯೂ ಆಗಿರುವ ಸದಾಶಿವ ಶೆಟ್ಟಿ (ಸದ್ದು ಶೆಟ್ಟಿ), ದ್ವಿತೀಯ ಸ್ಥಾನವನ್ನು ಲಾಲ ಗ್ರಾಮದ ಆಯಿಲ್ ಮನೆಯ ಭೋಜ ಮಲೆಕುಡಿಯ ಮತ್ತು ತೃತೀಯ ಸ್ಥಾನವನ್ನು ನಾಲ್ಕೂರು ಗ್ರಾಮದ ಐತನಡ್ಕ ಮನೆಯ ನಾರಾಯಣ ಪೂಜಾರಿ ಅವರು ಪಡೆದುಕೊಂಡಿದ್ದಾರೆ. ಅವರಿಗೂ ಅನುಕ್ರಮವಾಗಿ 15 ಸಾವಿರ ರೂ. 10 ಸಾವಿರ ರೂ ಮತ್ತು 5ಸಾವಿರ ರೂ ನಗದಿನೊಂದಿಗೆ ವಿಶೇಷ ಪ್ರೋತ್ಸಾಹ ನೀಡಲಾಗಿದೆ.
ಗಣ್ಯರ ಉಪಸ್ಥಿತಿಯಲ್ಲಿ ಶಾಸಕರಿಂದ ಸನ್ಮಾನ:
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮುಖ್ಯಸ್ಥಿಕೆಯಲ್ಲಿ ತಾಲೂಕು ಕೇಂದ್ರದಲ್ಲಿ ಜ.26 ನೇ ಗಣರಾಜ್ಯೋತ್ಸವ ದಿನದಂದು ಸರಕಾರಿ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಅವರೆಲ್ಲರನ್ನೂ ವಿಶೇಷವಾಗಿ ಸನ್ಮಾನಿಸಿ ಇನ್ನಷ್ಟು ಪ್ರೋತ್ಸಾಹ ನೀಡಲಾಯಿತು. ಶಾಸಕ ವಸಂತ ಬಂಗೇರ ಅವರು ಇಲಾಖೆಯ ಪರವಾಗಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು. ಈ ಸಂದರ್ಭ ತಾಲೂಕು ತಹಶಿಲ್ದಾರ್ ಎಚ್. ಕೆ ತಿಪ್ಪೇಸ್ವಾಮಿ, ತಾ.ಪಂ ಅಧ್ಯಕ್ಷ ದಿವ್ಯಜ್ಯೋತಿ, ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ, ಮುಖ್ಯ ಅತಿಥಿಯಾಗಿದ್ದ ಪ್ರಜಾವಾಣಿ ವರದಿಗಾರ ಆರ್. ಎನ್ ಪೂವಣಿ, ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಸೋಮೇ ಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಿಲಕ್‌ಪ್ರಸಾದ್‌ಜಿ, ವಿವಿಧ ಇಲಾಖಾ ಅಧಿಕಾರಿಗಳಾದ ಶಿವಪ್ರಸಾದ್ ಅಜಿಲ, ಡಾ. ಕಲಾಮಧು ಶೆಟ್ಟಿ, ಚಿದಾನಂದ ಹೂಗಾರ್, ನಾಯಾಯಣ ಸುವರ್ಣ, ಸರಸ್ವತಿ, ಯಶೋಧರ ಸುವರ್ಣ, ಕೆ.ಜಿ. ಲಕ್ಷ್ಮಣ ಶೆಟ್ಟಿ, ನಿವೃತ್ತ ಸೇನಾನಿ ಎಂ. ಆರ್ ಜೈನ್, ಅರಣ್ಯಾಧಿಕಾರಿ ಸಹಿತ ಎಲ್ಲಾ ಇಲಾಖೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.