ತೆಂಕಕಾರಂದೂರು : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ

t

tt

ttt

tttt

ttttt

tttttt

tttttttt

ತೆಂಕಕಾರಂದೂರು :  ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತೆಂಕಕಾರಂದೂರುವಿನಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ.28ರಿಂದ ಆರಂಭವಾಗಿದ್ದು ಫೆ.4ರವರೆಗೆ ನಡೆಯಲಿದೆ. ಈ ಪ್ರಯುಕ್ತ ಜ.28ರಂದು ಬೆಳಿಗ್ಗೆ 8ರಿಂದ ಋತ್ವಿಜರ ಆಗಮನ, ಶಿಲ್ಪಿಯಿಂದ ಆಲಯ ಪರಿಗ್ರಹ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ ನಂತರ ತೆಂಕಕಾರಂದೂರು ಗ್ರಾಮಸ್ಥರಿಂದ ಹೊರೆಕಾಣಿಕೆ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಉಗ್ರಾಣ ಮುಹೂರ್ತವನ್ನು ಶ್ರೀಮತಿ ಮತ್ತು ಕೆ. ನಾರಾಯಣ ರೈ, ಕಾರಂದೂರು ಹಾಗೂ ಪಾಕಶಾಲೆ ಉದ್ಘಾಟನೆಯನ್ನು ಶ್ರೀಮತಿ ಮತ್ತು ಕೆ. ವಿಠಲ ಹೆಗ್ಡೆ, ಮಾರುತಿ ನಿಲಯ ನೆರವೇರಿಸಿದರು. ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು, ಅಳದಂಗಡಿ ಅರಮನೆ ಉದ್ಘಾಟನೆಯನ್ನು ನೆರವೇರಿಸಿದರು. ಆಶೀರ್ವಚನವನ್ನು ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು, ಉಡುಪಿ ಶ್ರೀ ಕಾಣಿಯೂರು ಮಠ ನೆರವೇರಿಸಿದರು.
ಅಧ್ಯಕ್ಷತೆಯನ್ನು ಕೆ. ವಸಂತ ಬಂಗೇರ, ಶಾಸಕರು, ಬೆಳ್ತಂಗಡಿ, ಅಧ್ಯಕ್ಷರು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಮಾನಾಥ ರೈ, ಅರಣ್ಯ, ಪರಿಸರ, ಜೀವಿಶಾಸ್ತ್ರ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀಮತಿ ದೇವಕಿ, ಅಧ್ಯಕ್ಷರು, ಗ್ರಾ.ಪಂ. ಬಳೆಂಜ, ಡಾ| ಎಲ್.ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು, ಎಸ್‌ಕೆಡಿಆರ್‌ಡಿಪಿ, ಧರ್ಮಸ್ಥಳ, ಪ್ರಕಾಶ್ ನಿಟ್ಟೂರು, ಇಂಡಸ್ಟ್ರೀಯಲಿಸ್ಟ್, ಬೆಂಗಳೂರು, ಟಿ.ಎನ್. ಮಧು, ಇಂಡಸ್ಟ್ರೀಯಲಿಸ್ಟ್, ಬೆಂಗಳೂರು, ಮಹೇಶ್ ಹುಲ್ಲಾರ್ಕಿ, ಇಂಡಸ್ಟ್ರೀಯಲಿಸ್ಟ್, ಬೆಂಗಳೂರು, ಕೆ. ಕೃಷ್ಣಮೂರ್ತಿ, ಇಂಡಸ್ಟ್ರೀಯಲಿಸ್ಟ್, ಬೆಂಗಳೂರು ಆಗಮಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.