ಉಜಿರೆಯ ’ಆಟೋರಾಜ’ರ ಕನ್ನಡ ಬಾವುಟಪ್ರೇಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

riksha ಉಜಿರೆಯ ಆಟೋಗಳು ಕನ್ನಡ ಬಾವುಟಗಳೊಂದಿಗೆ ಕಂಗೊಳಿಸುತ್ತಿವೆ. ಚಾಲಕ ’ಆಟೋರಾಜ’ರು ಕನ್ನಡಾಭಿಮಾನವನ್ನು ಮೆರೆಯುತ್ತಿದ್ದಾರೆ. ಅನೇಕ ಸಂಖ್ಯೆಯಲ್ಲಿರುವ ಇಲ್ಲಿಯ ಆಟೋಗಳು ಜ.26ರಿ0ದ ಕನ್ನಡದ ಕಂಪು ಹರಡುತ್ತಿವೆ.
ದ.ಕ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಮುಖ್ಯಬೀದಿಯ ಅಕ್ಕಪಕ್ಕದಲ್ಲಿ ಕನ್ನಡದ ಧ್ವಜಗಳು ಕಂಗೊಳಿಸುತ್ತಿರುವುದರ ಮಧ್ಯೆ ಆಟೋಗಳ ಕನ್ನಡ ಬಾವುಟಗಳು ಗಮನ ಸೆಳೆಯುತ್ತಿವೆ.
ಆಟೋ ಚಾಲಕರ ಕನ್ನಡ ಪ್ರೇಮದ ನಿದರ್ಶನಗಳನ್ನು ಸಾಕಷ್ಟು ಬಾರಿ ಕನ್ನಡ ಸಿನಿಮಾಗಳಲ್ಲಿ ಕಂಡಿದ್ದೇವೆ. ಇಂತಹ ಮತ್ತೊಂದು ನೋಟ ಉಜಿರೆಯಲ್ಲಿ ಕಂಡುಬರುತ್ತಿದೆ.
ಸಮ್ಮೇಳನಕ್ಕೆ ಅದ್ದೂರಿ ವೇದಿಕೆ, ಮಂಟಪಗಳ ಆಯೋಜನೆಯಾಗಿದ್ದರೂ, ಉಜಿರೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿರುವುದು ಈ ಅಲಂಕೃತ ಆಟೋಗಳೇ. ರಸ್ತೆಯಲ್ಲಿ ಜನರ ಸಂಚಾರಕ್ಕೆ ಸಹಕಾರಿ ಆಗಿಯೂ, ತಮ್ಮ ಅಂದ ಪ್ರದರ್ಶನದಲ್ಲಿತೊಡಗಿರುವ ಆಟೋಗಳು ನಗರದ ಸೊಬಗನ್ನು ಹೆಚ್ಚಿಸಿವೆ. ಸ್ವಾತಂತ್ರ್ಯ ದಿನಾಚರಣೆ ಇರಲಿ, ಗಣರಾಜೋತ್ಸವವಿರಲಿ, ಕನ್ನಡ ನುಡಿ ಹಬ್ಬವೇ ಇರಲಿ ಇಲ್ಲಿಯ ಆಟೋ ಚಾಲಕರ ಸಂಭ್ರಮ ಊರಿನ ಬೆಡಗು ಹೆಚ್ಚಿಸುವಂತಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.