HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರ ವಿದ್ವತ್ತಿಗೆ ಸಮ್ಮಾನದ ಗರಿ

prashasthiದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಮಾನ್ಯರಿಗೆ ಉಜಿರೆಯಲ್ಲಿ ನಡೆಯುತ್ತಿರುವ ದ.ಕ 21ನೇಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ವತ್ ಸಮ್ಮಾನದ ಗೌರವದ ಗರಿ ಮೂಡಿತು.
ಧರ್ಮಸ್ಥಳ ಮಂಜಯ್ಯ ಹೆಗ್ಗಡೆ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ರಂಗಗಳಲ್ಲಿ ಸಾಧನೆಮಾಡಿದವರನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಪ್ರೊ.ಎಸ್.ಪ್ರಭಾಕರ ಅವರು ಸನ್ಮಾನಿಸಿದರು.
ಸ್ತ್ರೀ ಸಂವೇದನೆಯನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ತೋರ್ಪಡಿಸಿದ ಸಾರಾ ಅಬುಬೂಕರ್, ಯಕ್ಷಗಾನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ನಿತ್ಯಾನಂದ ಕಾರಂತ ಪೋಳಲಿ, ಶಿಶು ಸಾಹಿತ್ಯ ಹಾಗೂ ಜನಪ್ರಿಯ ಬರಹಗಾರರಾದ ಪ.ರಾಮಕೃಷ್ಣ ಶಾಸ್ತ್ರಿ, ಸಂಸ್ಕೃತ ವಿದ್ವಾಂಸ ಕೇಶವ ಜೋಯಿಸ ವಳಲಿಂಬೆ, ತುಳುನಾಡಿನ ಜನಪದ ಕಲೆಗಳಿಗೆ ಜೀವ ಸತ್ವ ತುಂಬಿದ ಜಾನಪದ ವಿದ್ವಾಂಸ ಮಾಚಾರು ಗೋಪಾಲ ನಾಯ್ಕ್, ಸಂಗೀತ ವಿದ್ವಾಂಸ ಕುದ್ಮಾರು ವೆಂಕಟ್ರಾಮ ವಿದ್ವತ್ ಸಮ್ಮಾನಕ್ಕೆ ಭಾಜನರಾದರು.
ಯೋಧನನ್ನು ನೆನೆದ ಸಾಹಿತ್ಯ ಸಮ್ಮೇಳನ
ಕೆಲ ತಿಂಗಳ ಹಿಂದೆ ವಿಮಾನ ಅಪಘಾತದಲ್ಲಿ ನಾಪತ್ತೆಯಾಗಿರುವ ಗುರುವಾಯುನಕೆರಯ ಯೋಧ ಏಕನಾಥ ಶೆಟ್ಟಿಯವರನ್ನು ನೆನಪಿಸಿಕೊಳ್ಳಲಾಯಿತು. ದೇಶಸೇವೆಗಾಗಿ ಅವರ ಕುಟುಂಬದವರನ್ನು ವಿಶೇಷವಾಗಿ ಗೌರವಿಸಲಾಯಿತು. ಇಡೀ ಸಭಾಂಗಣದಲ್ಲಿ ಭಾವುಕತೆ ಆವರಿಸಿಕೊಂಡಿತ್ತು.
ಲಾಯಿಲಾ ಪಂಚಾಯಿತಿಗೆ ವಿಶೇಷ ಗೌರವ
ಕರ್ನಾಟಕ ರಾಜ್ಯದಲ್ಲಿ ಮೊದಲಬಾರಿಗೆ ಐಎಸ್‌ಒ ಮಾನ್ಯತೆ ಪಡೆದು ಮಾದರಿಯಾಗಿರುವ ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಿಬ್ಬಂದಿಗಳನ್ನು ವಿಶೇಷವಾಗಿ ಗೌರವಿಸಲಾಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.