ಉಜಿರೆ : ಸಾಹಿತ್ಯ ಸಮ್ಮೇಳನದಲ್ಲಿ ’ಉದಯರಾಗ’

Advt_NewsUnder_1
Advt_NewsUnder_1
Advt_NewsUnder_1

Udayaraga 2 copy

Udayaraga 1 copy

ಉಜಿರೆಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಬೆಳಿಗ್ಗೆ ಉದಯರಾಗ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಾಹಿತ್ಯಾಸಕ್ತರಿಗೆ, ಸಂಗೀತಪ್ರೇಮಿಗಳಿಗೆ ಮುದ ನೀಡಿತು.
ಮಂಗಳೂರಿನ ಪಾಂಡೇಶ್ವರದ ವಿದುಷಿ ಶಾರದಾ ಭಟ್ ಕಟ್ಟಿಗೆ ತಂಡದವರಿಂದ ಭಟಿಯಾರ ರಾಗದೊಂದಿಗೆ ಆರಂಭವಾದ ಕಾರ‍್ಯಕ್ರಮದಲ್ಲಿ ಡಿ.ಎಸ್.ಕರ್ಕಿಯವರ ’ತೇಲಿಸೆನ್ನನು’ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ತಬಲದಲ್ಲಿ ಭಾರವಿ, ಹಾರ್ಮೋನಿಯಂನಲ್ಲಿ ಗುರುಪ್ರಸಾದ್ ಹೆಗಡೆ ಧಾರವಾಡ ಸಹಕರಿಸಿದರು.
ವಿವೇಕಾನಂದ ಕಾಲೇಜು ಪುತ್ತೂರಿನ ವಿದ್ಯಾರ್ಥಿಗಳು ’ದಾಸರು ಕಂಡ ಕೃಷ್ಣ’ ಎಂಬ ದಾಸಕೀರ್ತನೆ ಕಾರ‍್ಯಕ್ರಮ ನಡೆಸಿಕೊಟ್ಟರು. ಶಾರದಾ ಕೆದಲಾಯ ಅವರು ಯೋಗಾಸನ ಪ್ರದರ್ಶಿಸಿದರು. ಕೃಷ್ಣಾ ಆಚಾರ್ ಅವರು ದಿನದ ಚಿಂತನ ಕಾರ‍್ಯಕ್ರಮ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.