ಉಜಿರೆ : ’ಆರೋಗ್ಯಪೂರ್ಣ ಚಿಂತನೆಗಳಿಂದ ಸ್ವಸ್ಥ ಸಮಾಜ’ : ಶಿವರಾಮ ಶಿಶಿಲ

Advt_NewsUnder_1
Advt_NewsUnder_1
Advt_NewsUnder_1

ujireeeeಆರೋಗ್ಯಪೂರ್ಣ ಚಿಂತನೆಗಳಿಂದ ಸ್ವಸ್ಥ ಸ್ವಚ್ಛ ಸಮಾಜವನ್ನು ಕಟ್ಟಬಹುದು ಎಂದು ನಿವೃತ್ತ ಮುಖ್ಯೋಪಾಧ್ಯಯ , ಸಾಹಿತಿ ಶಿವರಾಮ ಶಿಶಿಲ ಅಭಿಪ್ರಾಯಪಟ್ಟರು.
ಉಜಿರೆಯಲ್ಲಿ ನಡೆಯುತ್ತಿರುವ 21 ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ‘ ಸ್ವಚ್ಚ ಭಾಷೆ, ಸ್ವಚ್ಚ ಜೀವನ, ಸ್ವಚ್ಚ ಸಮಾಜ’ ಎಂಬ ಆಶಯ ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು .
ನಾಗರಿಕ ಸಮಾಜವನ್ನು ಭದ್ರವಾಗಿ ಕಟ್ಟಬೇಕಾದರೆ ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕು. ಸ್ಪಷ್ಟ ನಿಲುವುಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಆಲೋಚಿಸಲು ಸ್ವಚ್ಛ ಪರಿಕಲ್ಪನೆಯ ಆಶಯಗೋಷ್ಠಿಯು ಪೂರಕವಾಗಿದೆ ಎಂದರು.
’ಸ್ಚಚ್ಛ ಭಾಷೆ’ ಎಂಬ ವಿಷಯದ ಕುರಿತು ಮಾತನಾಡಿದ ಡಾ. ಸತ್ಯನಾರಯಣ ಮಲ್ಲಿಪಟ್ಟ ಭಾಷೆ ಬಹಿರಂಗ ಹಾಗೂ ಅಂತರಂಗವಾಗಿ ಶುದ್ದಿಯಾಗಿರಬೇಕು ಎಂದರು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಶುದ್ದ ಭಾಷೆ ಬಳಕೆ ಬಗ್ಗೆ ಹಿರಿಯ ಸಾಹಿತಿಗಳು ಮತ್ತು ವಿದ್ವಾಂಸರು ಒತ್ತಿ ಹೇಳಿದ್ದಾರೆ. ಸಾಹಿತ್ಯ ಭಾಷಿಕ ಜೀವ ಸಂಸ್ಕ್ರೃತಿಯನ್ನು ಎತ್ತಿ ಹಿಡಿಯಬೇಕು. ಅನ್ಯ ಭಾಷೆಗಳ ಎರವಲು ಪದಗಳಿಂದ ಕನ್ನಡ ಭಾಷೆ ನಾಶವಾಗುತ್ತದೆ ಎಂಬ ಆತಂಕ ಅಸಮಂಜಸ ಎಂದು ನುಡಿದರು.
ಡಾ, ಪುಂಡಿಕ್ಯಾ ಗಣಭಪ್ಪಯ್ಯ ಭಟ್ ’ಸ್ವಚ್ಚ ಸಮಾಜ’ ಕುರಿತು ವಿಚಾರಗಳನ್ನು ಮಂಡಿಸಿದರು. ಸ್ಥಾಪಿತ ಮಿಥ್ಯಗಳಿಂದ ಇಂದು ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಪರ ಧರ್ಮಗಳಿಗೆ ಗೌರವ ಕೊಡದಿರುವ ವಾತಾವರಣ ಸೃಷ್ಟಿಯಾಗುತ್ತಿದೆ. ಇದು ಸಮಾಜವನ್ನ ಕಲುಷಿತಗೊಳಿಸುತ್ತಿದೆ. ಇಂದು ಶಿಕ್ಷಿತಿತರರ ವರ್ಗದಲ್ಲಿಯೇ ಅಸಹನೆಯಿದ್ದು, ಪರರ ವಿಚಾರಗಳ ಮನ್ನಣೆಗೆ ಅವಕಾಶ ನೀಡದೆ ಇರುವುದರಿಂದ ಇಂದು ಸಮಾಜದಲ್ಲಿ ವೈಚಾರಿಕ ಭಿನ್ನಭಿಪ್ರಾಯಗಳು ಮೂಡುತ್ತಿವೆ. ಇಂದು ಇತಿಹಾಸದ ಪುರುಷರನ್ನ ಧಾರ್ಮಿಕತೆಗೆ ಒಳಪಡಿಸಿ ವೈಚಾರಿಕ ಮೂಲಭೂತವಾದವನ್ನು ಪ್ರತಿಪಾದಿಸುತ್ತರುವುದು ಖೇದನೀಯವಾಗಿದೆ ಎಂದು ಸಂಕಟ ವ್ಯಕ್ತ ಪಡಿಸಿದರು.
’ಸ್ವಚ್ಚ ಜೀವನ’ ಎಂಬ ವಿಷಯ ಮಂಡನೆ ಮಾಡಿದ ಆಕಾಶವಾಣಿಯ ನಿವೃತ್ತ ಹಿರಿಯ ಉದ್ಘೋಷಕರಾದ ಶಕುಂತಾಳ ಆರ್. ಕಿಣಿಯವರು ಅಹಿಂಸೆ ಮತ್ತು ಸತ್ಯ ಪ್ರತಿಪಾದನೆ ಮೂಲಕ ಸ್ವಚ್ಚ ಜೀವನವನ್ನ ಕಾಣಬಹುದು ಎಂದು ಹೇಳಿದರು. ಯೋಗ, ಸತ್ಸಂಗ, ಸಾಕ್ಷ್ಯಚಿತ್ರಗಳು, ಸಾತ್ವಿಕ ಚಿಂತನೆಗಳಿಂದ ಸ್ವಚ್ಚ ಜೀವನವನ್ನ ನಮ್ಮದಾಗಿಸಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್, ಪ್ರದೀಪ್ ಕುಮಾರು ಕಲ್ಕೂರ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.