ತಾಲೂಕಿನ 22 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರ ಆಯ್ಕೆಗೆ ಧಾರ್ಮಿಕ ದತ್ತಿ ಇಲಾಖೆ ಅರ್ಜಿ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1

  ಬೆಳ್ತಂಗಡಿ : ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆಯನ್ವಯ ಬೆಳ್ತಂಗಡಿ ತಾಲೂಕಿನ 22 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಸದಸ್ಯತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವ್ಯವಸ್ಥಾಪನಾ ಸಮಿತಿ ರಚನೆಯಾಗಬೇಕಾದ ದೇವಸ್ಥಾನಗಳಲ್ಲಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ಬೈಲಂಗಡಿ ತೋಟತ್ತಾಡಿ, ಶ್ರೀ ಕುರಾಯ ಸದಾಶಿವ ದೇವಸ್ಥಾನ ಬಂದಾರು, ಶ್ರೀ ಶಾಸ್ತಾವು ದೇವಸ್ಥಾನ ಮಚ್ಚಿನ, ಶ್ರೀ ಬ್ರಹ್ಮದೇವರ ದೇವಸ್ಥಾನ ಮೇಲಂತಬೆಟ್ಟು, ಶ್ರೀ ನರಸಿಂಹ ದೇವಸ್ಥಾನ ಮೇಲಂತಬೆಟ್ಟು, ಶ್ರೀ ಮುಂಡರಿ ಪಿಲಿಚಂಡಿ ದೇವಿ ದೇವಸ್ಥಾನ ಸೋಣಂದೂರು, ಶ್ರೀ ಅಳದಂಗಡಿ ಮಹಾಗಣಪತಿ ದೇವಸ್ಥಾನ ಬಡಗಕಾರಂದೂರು, ಶ್ರೀ ಕೂಡಬೆಟ್ಟು ಸದಾಶಿವ ದೇವಸ್ಥಾನ ಮಿತ್ತಬಾಗಿಲು, ಶ್ರೀ ದೇಲಂಪುರಿ ಮಹಾಗಣಪತಿ ದೇವಸ್ಥಾನ ಕರಿಮಣೇಲು, ಶ್ರೀ ಅರ್ಧನಾರೀಶ್ವರ ದೇವಸ್ಥಾನ ಇಂದಬೆಟ್ಟು, ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ ಲಾಲ, ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮಲೆಬೆಟ್ಟು ಕೊಯ್ಯೂರು, ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ ಕಾಳಿಬೆಟ್ಟ ಸವಣಾಲು, ಶ್ರೀ ಕೊರ್ಲಿ ಈಶ್ವರ ದೇವಸ್ಥಾನ ಕರಂಬಾರು, ಶ್ರೀ ಮಾಯಾ ಮಹಾದೇವ ದೇವಸ್ಥಾನ ಬೆಳಾಲು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕರಾಯ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಟ್ರಮೆ, ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಪಾರೆಂಕಿ, ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಶಿಪಟ್ಣ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು, ಶ್ರೀ ಬಡಗಕಾರಂದೂರು ಸೋಮನಾಥೇಶ್ವರಿ ದೇವಸ್ಥಾನ ಅಳದಂಗಡಿ. ವ್ಯವಸ್ಥಾಪನಾ ಸಮಿತಿಗೆ ೯ ಸದಸ್ಯರ ಆಯ್ಕೆ ನಡೆಯಲಿದ್ದು, ಪ್ರಧಾನ ಅರ್ಚಕ ಒಂದು, ಪ.ಜಾತಿ, ಪಂಗಡಕ್ಕೆ ಒಂದು, ಮಹಿಳೆ ಎರಡು, ಸಂಘ-ಸಂಸ್ಥೆ ಒಂದು, ಇತರ ನಾಲ್ಕು ಮಂದಿಯ ಆಯ್ಕೆ ನಡೆಯಬೇಕಾಗಿದೆ. ಅರ್ಜಿಯನ್ನು ಫೆ.೧೭ರ ಒಳಗೆ ಧಾರ್ಮಿಕ ದತ್ತಿ ಇಲಾಖೆ ಮಂಗಳೂರು ಇವರಿಗೆ ಸಲ್ಲಿಸಬೇಕು.
ಅರ್ಜಿಯ ಜೊತೆ ಗುರುತಿನ ಚೀಟಿ, ಒಂದು ಪೊಟೋ, ಮೀಸಲಾತಿ ಕೋರಿದ್ದಲ್ಲಿ ಜಾತಿ ದೃಢೀಕರಣ ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ಸತ್ಯಾಪನಾ ದೃಢಪತ್ರ ಇಡಬೇಕು ಇದರ ಒಂದು ಪ್ರತಿಯನ್ನು ಶಾಸಕರ ಕಚೇರಿಗೆ ನೀಡುವಂತೆ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಬಿ.ಎಸ್ ಮುಕುಂದ ಸುವರ್ಣ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.