ಜ. 28ರಿಂದ ಫೆ. 4ರವರೆಗೆ ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

Advt_NewsUnder_1
Advt_NewsUnder_1
Advt_NewsUnder_1

  ತೆಂಕಕಾರಂದೂರು : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತೆಂಕಕಾರಂದೂರಿನಲ್ಲಿ ಜ.28 ರಿಂದ ಫೆ.4ರ ವರೆಗೆ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಅಧ್ಯಕ್ಷ ಸಮಿತಿ ಅಧ್ಯಕ್ಷ ಕೆ.ಎಸ್. ಯೋಗೀಶ್ ಕುಮಾರ್ ನಡಕ್ಕರ ತಿಳಿಸಿದ್ದಾರೆ.
ಅವರು ಜ.21ರಂದು ದೇವಸ್ಥಾನದ ವಠಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ದೇವರಾದ ಶ್ರೀ ವಿಷ್ಣುಮೂರ್ತಿಯ ದೇವಾಲಯಕ್ಕೆ ಸಹಸ್ರಾರು ವರ್ಷಗಳ ಹಿಂದಿನ ಇತಿಹಾಸವಿದೆಯೆಂಬುದು ದೈವಜ್ಞರಿಂದ ತಿಳಿದುಬಂದ ವಿಷಯ. ಕರಾವಳಿಯಲ್ಲಿ ಭಗವಾನ್ ಪರಶುರಾಮರು ಸ್ಥಾಪಿಸಿದ 108 ವಿಷ್ಣು ದೇವಾಲಯಗಳಲ್ಲಿ ಇದೂ ಒಂದು ಎಂಬ ನಂಬಿಕೆಯಿದೆ. ಇಲ್ಲಿ ಪೂಜಾದಿ ಕೈಂಕರ್ಯಗಳನ್ನು ನಡೆಸಿಕೊಂಡು ಬರಲು ಮಯೂರ ವರ್ಮನು ವ್ಯವಸ್ಥೆ ಮಾಡಿದ್ದನೆಂಬುದನ್ನು ತಿಳಿಸುವ ಶಾಸನವಿದೆ. ನಂಬಿದ ಭಕ್ತರ ಮನದಿಂಗಿತವನ್ನು ನೆರವೇರಿಸುವ ಈ ಪರಮ ಪಾವನ ಸನ್ನಿಧಿ ಅನೂರ್ಜಿತ ವಾಗಿದ್ದುದನ್ನು ಊರ ಪರವೂರಿನ ಭಕ್ತ ವೃಂದದ ಅಖಂಡ ನೆರವಿನಿಂದ ಸಂಪಿಗೆತ್ತಾಯ ಮನೆತನದವರು ಜೀರ್ಣೋದ್ಧಾರ ಮಾಡಿ ನಿತ್ಯ ನೈಮಿತ್ತಿಕಗಳ ನಡೆದು ಬರಲು ವ್ಯವಸ್ಥೆಗೊಳಿಸಿದ್ದರು. 12ವರ್ಷಗಳ ಹಿಂದೆ ಗರ್ಭಗುಡಿ, ಪ್ರಾಂಗಣ ಜೀರ್ಣೋದ್ಧಾರ ಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ. ಈಗ ಜೀರ್ಣೋದ್ಧಾರಗೊಂಡು ಇತರ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗ ದರ್ಶನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು ಅಲ್ಲಿಂದ 3 ಲ.ರೂ ಅನುದಾನ ದೊರೆತಿದೆ. ಒಟ್ಟು 80 ಲ.ರೂ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆದಿದ್ದು ಅನುದಾನ ಹೊಂದಿಸುವ ಕಾರ್ಯ ನಡೆಯುತ್ತಿದೆ ಎಂದರು.
ಬ್ರಹ್ಮಕಲಶೋತ್ಸವದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಮಿತಿಯ ಅಧ್ಯಕ್ಷರು, ಸಂಚಾಲಕರು ಸದಸ್ಯರು, ಹಗಲಿರುಳು ಶ್ರಮಿಸುತ್ತಿದ್ದಾರೆ. ಜ. 26ರಂದು ಪ್ರಚಾರದ ಸಲುವಾಗಿ ಬೈಕ್ ರ‍್ಯಾಲಿ ನಡೆಯಲಿದೆ. ಜ. ೨೮ರಂದು ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಎಂದರು.
ಜ. 28ರಂದು ಉಗ್ರಾಣ ಮೂಹೂರ್ತ ನಡೆಯಲಿದೆ. ಜ.29 ರಂದು ಅಳದಂಗಡಿ ಅರಸರಾದ ಡಾ| ಪದ್ಮಪ್ರಸಾದ ಅಜಿಲರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೆ. ವಸಂತ ಬಂಗೇರ ವಹಿಸಲಿದ್ದಾರೆ. ಉಡುಪಿ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದಂಗಳ ರವರು ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಚಿವ ರಮಾನಾಥ ರೈ ಭಾಗವಹಿಸಲಿದ್ದಾರೆ. ಜ. 30ರಂದು ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಡಾ| ಬಿ. ಯಶೋವರ್ಮ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಜ. 31ರಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಡಿ. ಹರ್ಷೇಂದ್ರ ಕುಮಾರ್, ಫೆ. ೧ರಂದು ಬೆಳಿಗ್ಗೆ 7.42ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಡಾ| ಎಂ.ಎನ್. ರಾಜೇಂದ್ರ ಕುಮಾರ್, ಡಾ| ಮೋಹನ ಆಳ್ವ ಶಾಸಕಿ ಶಕುಂತಲ ಶೆಟ್ಟಿ ಚಿತ್ರನಟ ವಿನೋದ್ ಆಳ್ವ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಪ್ರತಿದಿನ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಅನುವಂಶಿಯ ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯ, ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಮಾಳಿಗೆಮನೆ, ಗೌರವ ಮಾರ್ಗದರ್ಶಕ ವಸಂತ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ, ಉಪಾಧ್ಯಕ್ಷ ರಮಾನಾಥ ರೈ, ಕೋಶಾಧಿಕಾರಿ ಸಂತೋಷ್ ಹೆಗ್ಡೆ ಕಾರ್ಯದರ್ಶಿ ಸದಾನಂದ ಶೆಟ್ಟಿ, ಅನಂತರಾಮ ಸಂಪಿಗೆತ್ತಾಯ, ಜತೆ ಕಾರ್ಯದರ್ಶಿ ಶರತ್‌ಕುಮಾರ್, ಸ್ವಾಗತ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ, ಆರ್ಥಿಕ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಸಹ ಸಂಚಾಲಕ ವಿಶ್ವನಾಥ ಸಫಲ್ಯ, ಸಮ್ಮಾನ ಸಮಿತಿ ಸಂಚಾಲಕ ಜಯಂತ್ ಕುಲಾಲ್, ಅತಿಥಿ ಸತ್ಕಾರ ಸಮಿತಿ ಸಹ ಸಂಚಾಲಕ ಶಾಂತಪ್ಪ ಮೂಲ್ಯ, ಚಪ್ಪರ ಸಮಿತಿ ಅಧ್ಯಕ್ಷ ಗುರುರಾಜ್ ಹೆಗ್ಡೆ, ವೈದಿಕ ಸಮಿತಿ ಅಧ್ಯಕ್ಷ ವಿಷ್ಣು ಸಂಪಿಗೆತ್ತಾಯ, ಭಜನಾ ಸಮಿತಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪ್ರಚಾರ ಸಮಿತಿಯ ಬಾಲಕೃಷ್ಣ ಶೆಟ್ಟಿ, ಪ್ರವೀಣ ಶಿವಾನಿ, ಸಂತೆ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಮೇಶ್ ರೈ, ಖರೀದಿ ಸಮಿತಿ ಅಧ್ಯಕ್ಷ ಹೇಮಂತ್ ಕುಮಾರ್, ಮಹಿಳಾ ಸಮಿತಿಯ ಅಧ್ಯಕ್ಷೆ ಗೀತಾ, ಸುಮಾ ಭಟ್, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.