ಫೆ. 1-8ರವರೆಗೆ ಶಿರ್ಲಾಲು ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ

  ಶಿರ್ಲಾಲು ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶ್ರೀ ದೇವರಿಗೆ ಆಭರಣ ಸಮರ್ಪಣೆ, ಭವ್ಯ ಮೆರವಣಿಗೆ ಕಾರ್ಯಕ್ರಮವು ಫೆ. 3ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ. ಸತ್ಯ ದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲರು ಚಾಲನೆ ನೀಡಲಿದ್ದಾರೆ.

ಶಿರ್ಲಾಲು : ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದ ಶ್ರೀ ಲೋಕನಾಥೇಶ್ವರ ದೇವರ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನಡ್ವಂತಾಡಿ ಶ್ರೀ ಪಾದ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ಹರಿಪ್ರಸಾದ ಉಪಾಧ್ಯಾಯ ಕುಂಪ್ಲಾಜೆ ಇವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವಿಜೃಂಭಣೆಯಿಂದ ಫೆ. 1ರಿಂದ 8ರ ತನಕ ನಡೆಯಲಿದೆ.
ಅಳದಂಗಡಿ ಅಜಿಲ ಸೀಮೆಗೆ ಒಳಪಟ್ಟ ಸುಮಾರು ೫೨೫ ವರ್ಷಗಳ ಇತಿಹಾಸವಿರುವ ತಾಲೂಕಿನ ಪುರಾತನ ದೇವಸ್ಥಾನಗಳಲ್ಲಿ ಒಂದಾದ ಶಿರ್ಲಾಲು ಗ್ರಾಮದ ಬದ್ಯಾರು ಎಂಬ ಸ್ಥಳದಲ್ಲಿ ದೇವಪ್ರಶ್ನೆಯಲ್ಲಿ ಕಂಡುಬಂದಂತೆ ವಾಸ್ತು ಶಿಲ್ಪಿಗಳ ಸಲಹೆಯಂತೆ ಸುಂದರವಾದ ಶ್ರೀ ಲೋಕನಾಥೇಶ್ವರ ದೇವಸ್ಥಾನವನ್ನು ದಿ| ಮಾಯಿಲ ಪೂಜಾರಿ ಮುಡ್ಜಾಲುರವರು ಊರವರ ಸಹಕಾರದೊಂದಿಗೆ ಕಳೆದ ೨೦೦೫ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಹಕಾರದೊಂದಿಗೆ ಬ್ರಹ್ಮಕಲಶಾಭಿಷೇಕ ನೆರವೇರಿಸಿದರು. ಅಂದಿನಿಂದ ಇಂದಿನ ವರೆಗೆ ಪ್ರತಿದಿನ ಪೂಜೆ, ಅಮಾವಾಸ್ಯೆ, ಸಂಕ್ರಮಣದಂದು ವಿಶೇಷ ಪೂಜೆ, ಪ್ರತಿಯೊಂದು ಹಬ್ಬಗಳನ್ನು ವಾರ್ಷಿಕ ಉತ್ಸವಾದಿಗಳನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಿಕೊಂಡು ಬಂದು ಇದೀಗ ಮತ್ತೆ ೧೨ ವರ್ಷಗಳ ಬಳಿಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
ಇಗಾಗಲೇ ದೇವಸ್ಥಾನದಲ್ಲಿ ನೂತನ ಧ್ವಜಸ್ತಂಭ, ವಸಂತ ಮಂಟಪ, ನವೀಕೃತ ನಾಗಸನ್ನಿಧಿ, ಲಕ್ಷ್ಮೀನಾರಾಯಣ ದೇವರ ಸನ್ನಿಧಿ, ಸಿರಿ ಸನ್ನಿಧಿ, ರಸ್ತೆಯ ವ್ಯವಸ್ಥೆ, ಬಯಲು ರಂಗಮಂದಿರ ನಿರ್ಮಾಣ ಅಭಿವೃದ್ಧಿ ಕಾರ್ಯ ನಡೆದಿದ್ದು ಸುಮಾರು ೫೦ಲಕ್ಷ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ. ಬ್ರಹ್ಮಕಲಶೋತ್ಸವದ ಯಶಸ್ಸಿಗೆ ವಿವಿಧ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಸದಸ್ಯರು, ವಿವಿಧ ಸಮಿತಿ ಸಂಚಾಲಕರು, ಅಧ್ಯಕ್ಷರು ಶ್ರಮಿಸುತ್ತಿದ್ದಾರೆ
ಫೆ. ೧ ರಂದು ಶಿರ್ಲಾಲು ಮತ್ತು ನಲ್ಲಾರು ಗ್ರಾಮದಿಂದ, ಫೆ. ೨ರಂದು ಸುಲ್ಕೇರಿಮೊಗ್ರು, ಬಡಗಕಾರಂದೂರು, ನಾವರ ಗ್ರಾಮದಿಂದ, ಫೆ. ೩ರಂದು ಕರಂಬಾರು, ಬಳಂಜ, ನಾಲ್ಕೂರು ಗ್ರಾಮದಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.
ಫೆ. ೧ರಂದು ಅಳದಂಗಡಿ ಲಕ್ಷ್ಮೀನಿವಾಸ ಡಾ| ಪ್ರಶಾಂತ್ ದೇವಾಡಿಗರವರು ಉಗ್ರಾಣದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಫೆ. ೨ರಂದು ವೈದಿಕ ಪರಿವರ್ತನೆ, ಭಜನಾ ಕಾರ್ಯಕ್ರಮ ನಡೆಯಲಿದೆ. ಫೆ. ೩ರಂದು ನಾಗಪ್ರತಿಷ್ಠೆ ಹಾಗೂ ವಿವಿಧ ಕಾರ್ಯಕ್ರಮ ನಡೆಯಲಿದೆ. ಫೆ. ೪ ರಂದು ಧಾರ್ಮಿಕ ಸಮಾರಂಭದಲ್ಲಿ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೆ. ವಸಂತ ಬಂಗೇರವರು ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ನಿವೃತ್ತ ಜಿಲ್ಲಾ ಪೊಲೀಸ್ ಅಧಿಕಾರಿ ಪೀತಾಂಬರ ಹೆರಾಜೆ, ಶಿವಪ್ರಸಾದ ಅಜಿಲರು, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಉದ್ಯಮಿ ರವಿ ಪೂಜಾರಿ ಮಂಗಳೂರು, ಕೇಶವ ಬಿ., ಅಳದಂಗಡಿ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ವಸಂತ ಸಾಲ್ಯಾನ್ ಕಾಪಿನಡ್ಕ ಭಾಗವಹಿಸಲಿದ್ದಾರೆ. ಫೆ. ೬ರಂದು ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆಯ ಆಡಳಿಯ ಮೊಕ್ತೇಸರ ಯು, ವಿಜಯರಾಘವ ಪಡ್ವೆಟ್ನಾಯ, ಉದ್ಯಮಿ ರಮಾನಂದ ಸಾಲ್ಯಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಎಸ್.ಕೆ.ಡಿ. ಆರ್.ಡಿ.ಪಿ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಕರ್ನಾಟಕ ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಸೇನೆರೆಬೈಲು ಡಾ| ಶಶಿಧರ ಡೋಂಗ್ರೆ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಪ್ರತಿದಿನ ವಿವಿಧ ಸಾಂಸ್ಕೃತಿಕ ವೈವಿದ್ಯಮಯ, ನಾಟಕ, ಯಕ್ಷಗಾನ ನಡೆಯಲಿದೆ. ಫೆ. ೭ರಂದು ದಿವ್ಯದರ್ಶನ, ಶನಿಪೂಜೆ ನಡೆಯಲಿದೆ. ಫೆ. ೮ರಂದು ರಕ್ತೇಶ್ವರಿ, ಮೈಸಂದಾಯ, ಕೊಡಮಣಿತ್ತಾಯ, ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ಗಗ್ಗರ ಸೇವೆ ನಡೆಯಲಿದೆ ಎಂದು ಗೌರವಾಧ್ಯಕ್ಷ ಅಳದಂಗಡಿ ಅರಮನೆ ಅರಸರು ಡಾ| ಪದ್ಮಪ್ರಸಾದ ಅಜಿಲರು, ಅಧ್ಯಕ್ಷ ಎಂ. ಗಂಗಾಧರ ಮಿತ್ತಮಾರು, ವಂಶೀಯ ಆಡಳಿಯ ಮೊಕ್ತೇಸರ ಶ್ರೀಧರ ಪೂಜಾರಿ ಮುಡ್ಜಾಲು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.