ಫೆ.19ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಶಿಲಾನ್ಯಾಸ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

gejjegiri shilanyasa copy  ಬೆಳ್ತಂಗಡಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್, ದೇಯಿ ಬೈದ್ಯೆತಿ ಮತ್ತು ಶಕ್ತಿ ಪೀಠದ ಶಿಲಾನ್ಯಾಸದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಕಾರ್ಯಕ್ರಮವು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಆಶಾ ಸಾಲ್ಯಾನ್ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್‌ರವರು ಎಲ್ಲಾ ಭಕ್ತರ ಆಶಯದಂತೆ ಕೋಟಿ-ಚೆನ್ನಯ-ದೇಯಿ ಬೈದ್ಯೆತಿ ಮೂಲಸ್ಥಾನ, ತರವಾಡು ಮನೆ ಇದ್ದಹಾಗೆ ಕ್ಷೇತ್ರಾಭಿವೃಧ್ದಿಯಲ್ಲಿ ಎಲ್ಲರೂ ಕೈ ಜೋಡಿಸುವುದರೊಂದಿಗೆ ಫೆ.19ರಂದು ನಡೆಯುವ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ತಿಳಿಸಿದರು.
ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ ಬಿಡುಗಡೆಗೊಳಿಸಿದರು. ಫೆ.19 ರಂದು ಜರಗುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನಿಂದ ಅತೀ ಹೆಚ್ಚು ಜನರು ಭಾಗವಹಿಸಿ ಪುನೀತರಾಗಬೇಕೆಂದು ತಿಳಿಸಿದರು. ಕಾರ್ಯಧ್ಯಕ್ಷ ಪಿತಾಂಬರ ಹೆರಾಜೆ ಪ್ರಸ್ತಾಪನೆಗೈದರು. ಸುಜೀತ.ವಿ ಬಂಗೇರ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಭಗೀರಥರವರು ಸಭೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ರಾಜಶ್ರೀ ರಮಣ, ಸದಾನಂದ ಉಂಗಿಲಬೈಲು, ಶ್ರೀಮತಿ ವಿನೋದಿನಿ ರಾಮಪ್ಪ, ಗಣೇಶ, ಜಯರಾಮ ಬಂಗೇರ, ಜಗದೀಶ್ ಡಿ, ಶೇಖರ್ ಬಂಗೇರ, ನಾರಾಯಣ, ಮಂಜುನಾಥ್ ಸಾಲ್ಯಾನ್, ಪುರುಷೋತ್ತಮ, ಸಂತೋಷ್ ಕಾಪಿನಡ್ಕ, ರವಿಕುಮಾರ್, ಜಗನ್ನಾಥ್ ಬಂಗೇರ, ಪದ್ಮನಾಭ ಸಾಲ್ಯಾನ್, ಪ್ರಶಾಂತ್ ಪೂಜಾರಿ, ಗೋಪಾಲ್ ಕೋಲಾಜೆ, ಮೋಹನ್, ಚಿದಾನಂದ ಮತ್ತಿತರರು ಪಾಲ್ಗೊಂಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.