ಹಿಂದೂ ವಾರಿಯರ್ಸ್ ಸದಸ್ಯರಿಂದ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1

hindu varriours copy  ಬೆಳ್ತಂಗಡಿ : ಹಿಂದೂವಾರಿಯರ್ಸ್‌ನ ಬೆಳ್ತಂಗಡಿ ವಿಭಾಗದಿಂದ ಮಾಸಿಕ ಸೇವಾಯೋಜನೆಯಂತೆ ಈ ತಿಂಗಳಲ್ಲಿ 6ನೇ ಹಾಗೂ 7ನೇ ಸೇವಾಯೋಜನೆಯನ್ನು ಯಶಸ್ವಿಯಾಗಿ ತಲುಪಿದ್ದು ಏಳು ತಿಂಗಳಲ್ಲಿ ಏಳು ಸೇವಾಯೋಜನೆಯ ಮೂಲಕ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ.6ನೇ ಯೋಜನೆಯಾಗಿ ಹೊಸಂಗಡಿ ಗ್ರಾಮದ ಮದಕುಡೆ ಮನೆಯ ನಿವಾಸಿಯಾಗಿರುವ ಶ್ರೀಮತಿ ಸುಶೀಲಾ ಶೆಟ್ಟಿ ಇವರಿಗೆ ಒಂದು ವರ್ಷದ ಮೊದಲು ಗರ್ಭಕೋಶದ ಕ್ಯಾನ್ಸರ್ ಉಂಟಾಗಿ ಶಸ್ತ್ರಚಿಕಿತ್ಸೆ ಮೂಲಕ ಗುಣ ಹೊಂದುತ್ತಿದ್ದು, ಹಣ ಇಲ್ಲದೆ ದೈನಂದಿನ ಔಷಧಿಗಳನ್ನು ಹೊರತುಪಡಿಸಿ ಕೇವಲ ಸ್ಥಳೀಯ ವೈದ್ಯರಿಂದ ಔಷಧ ಪಡೆಯುತ್ತಿದ್ದು ತಿಂಗಳಿಗೆ ಸುಮಾರು ರೂ 1 ರಿಂದ 2ಸಾವಿರವರೆಗೆ ವ್ಯಯಿಸುತ್ತಿದ್ದಾರೆ. ವೃದ್ಧರ ಪೆನ್ಶನ್ ಹಣವಾಗಿ ತಿಂಗಳಿಗೆ ರೂ.500 ಸರಕಾರದಿಂದ ಲಭ್ಯವಿದೆಯಾದರೂ ಔಷಧಿ ವೆಚ್ಚ ಹಾಗೂ ದೈನಂದಿನ ಖರ್ಚುವೆಚ್ಚ ಕ್ಕಾಗಿ ಹಿಂದೂ ವಾರಿಯರ್ಸ್‌ನ 6ನೇ ಸೇವಾಯೋಜನೆಯಾಗಿ ರೂಪಾಯಿ 10,000 ವನ್ನು ಬೆಳ್ತಂಗಡಿ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಸುರೇಶ್‌ರಾವ್ ಹಾಗೂ ಅಲ್ಲಿನ ಅರ್ಚಕರಾದ ಗೋಪಾಲ್‌ಕೃಷ್ಣ ಉಡುಪ ಹಾಗೂ ಗುಂಪಿನ ಸಹೋದರರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಏಳನೇ ಯೋಜನೆಯಾಗಿ ಅರಸಿನಮಕ್ಕಿ ಗ್ರಾಮದ ಪಡ್ಡಾಯಿಬೆಟ್ಟು ಮನೆ ನಿವಾಸಿ ಶ್ರೀನಿವಾಸ ಗೌಡ ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ವರೆಗೂ ರೂ.1ಲಕ್ಷಕ್ಕೂ ಮಿಕ್ಕಿ ಹಣ ಖರ್ಚುಮಾಡಿದ್ದು ತಿಂಗಳಿಗೊಮ್ಮೆ ಪರೀಕ್ಷೆ ಹಾಗೂ ಔಷಧಿಯ ವೆಚ್ಚವಾಗಿ 1ರಿಂದ 2ಸಾವಿರವರೆಗೆ ಬೇಕಾಗಿದೆ.
ಮನೆಯ ದೈನಂದಿನ ಖರ್ಚು, ಮಕ್ಕಳ ವಿದ್ಯಾಭ್ಯಾಸ ಮತ್ತು ಪತಿಯ ಆರೋಗ್ಯ ಸುಧಾರಣೆಗಾಗಿ ಹಿಂದೂ ವಾರಿಯರ್ಸ್‌ನ 7ನೇ ಸೇವಾಯೋಜನೆಯಾಗಿ ರೂಪಾಯಿ 10,000 ವನ್ನು ಗುಂಪಿನ ಸಹೋದರ ಶಿವರಂಜನ್ ನಿಡ್ಲೆಯವರ ಮೂಲಕ ಫಲಾನುಭವಿಯವರ ಮನೆಗೆ ತೆರಳಿ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.