ಚಂದ್ಕೂರು ದೇವಸ್ಥಾನದಲ್ಲಿ ಷಢಾದಾರ ಪ್ರತಿಷ್ಠೆ

chandkru 1 copy

chndkuru copy

ಲಾಯಿಲ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಲಾಯಿಲ ಇದರ ಜೀರ್ಣೋದ್ಧಾರ ಮತ್ತು ನವೀಕರಣವಾಗುತ್ತಿದ್ದು ಆ ಪ್ರಯುಕ್ತ ಷಡಾಧಾರ ಪ್ರತಿಷ್ಠೆ (ನಿಧಿಕುಂಭ) ಮತ್ತು ಗರ್ಭನ್ಯಾಸ ವಿಧಿ ವಿಧಾನಗಳು ಉಚ್ಚಿಲ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ಮತ್ತು ವಾಸ್ತುಶಿಲ್ಪಿ ಶ್ರೀ ಪ್ರಸಾದ್ ಮುನಿಯಂಗಳ ಇವರ ನೇತೃತ್ವದಲ್ಲಿ ನಡೆಯಿತು.
ಷಡಾಧಾರ ಪ್ರತಿಷ್ಠೆಗೆ ಲಾಯಿಲ, ನಡ ಗ್ರಾಮದ ಊರ ನೂರಾರು ಭಕ್ತರಿಂದ, ಸುಮಾರು 400 ಚಿನ್ನದ ನಾಣ್ಯಗಳು ಮತ್ತು ೩೦೦ ಬೆಳ್ಳಿ ನಾಣ್ಯಗಳನ್ನು ನಿಧಿಕುಂಭಕ್ಕೆ ಭಕ್ತರು ಸಮರ್ಪಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಉದ್ಯಮಿ ಗೋಕುಲ್‌ದಾಸ್ ಭಂಡಾರ್ಕರ್, ರಮೇಶ್ ಪೈ, ಶಶಿಧರ ಪೈ, ಅನುವಂಶಿಕ ಆಡಳಿತ ಮೊಕ್ತೇಸರರಾದ ಧನಂಜಯ ಅಜ್ರಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಧನಂಜಯ ರಾವ್, ಕೋಶಾಧಿಕಾರಿ ಯೋಗೀಶ್ ಭಿಡೆ ಲಾಯಿಲ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಗಣೇಶ್ ಗ್ಯಾರೇಜ್ ಮಾಲಕ ರಾಜೇಶ್ ಶೆಟ್ಟಿ, ಸಮಿತಿಯ ಸುಬ್ರಾಯ ಡೋಂಗ್ರೆ, ಲಾಯಿಲ ಗ್ರಾ.ಪಂ ಸದಸ್ಯರಾದ ವಸಂತ ಸುವರ್ಣ, ಮುನಿರಾಜ ಅಜ್ರಿ ನಡ, ಶಿಲ್ಪಿ ವೆಂಕಟೇಶ್ ಕಾಶಿಬೆಟ್ಟು, ಸದಾನಂದ ಶೆಟ್ಟಿ, ದಯಾನಂದ ಸಾಲಿಯಾನ್, ವಿಠಲ ಶೆಟ್ಟಿ, ಚಿತ್ತರಂಜನ್ ಹೆಗ್ಡೆ, ಕೃಷ್ಣಪ್ಪ ಪೂಜಾರಿ, ಗಿರಿಧರ ಪೂಜಾರಿ, ರುಕ್ಮಯ್ಯ ಕನ್ನಾಜೆ, ಅರ್ಚಕರಾದ ಗಣೇಶ್ ಐತಾಳ್, ಕೃಷ್ಣ ಭಟ್ ಉಪಸ್ಥಿತರಿದ್ದರು. ಸಂಜೆ ಗಂಟೆ 6.30ಕ್ಕೆ ಷಡಧಾರ ಪ್ರತಿಷ್ಠೆ ಮತ್ತು ರಾತ್ರಿ 11.58ಕ್ಕೆ ಗರ್ಭನ್ಯಾಸ ವಿಧಿವಿಧಾನಗಳು ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.