ದುಶ್ಚಟಗಳನ್ನು ತ್ಯಜಿಸಿದಾಗ ಜೀವನ ಸಾರ್ಥಕ: ಶ್ರೀ ಪ್ರಸಂಗ ಸಾಗರ ಮುನಿಶ್ರೀ

Advt_NewsUnder_1
Advt_NewsUnder_1
Advt_NewsUnder_1

venur deeksha jayanthi copyವೇಣೂರು: ಪಿಂಛಿ ಪರಿವರ್ತನೆ-ದೀಕ್ಷಾ ಜಯಂತಿ ಕಾರ್ಯಕ್ರಮ

ವೇಣೂರು: ಫಲ-ಪುಷ್ಪ, ಹಣದ ತ್ಯಾಗದಿಂದ ಮೋಕ್ಷ ಸಾಧ್ಯವಿಲ್ಲ. ಬದಲಾಗಿ ದುಶ್ಚಟ, ಕ್ರೋಧ, ಮತ್ಸರಗಳನ್ನು ತ್ಯಜಿಸಿದಾಗ ಮೋಕ್ಷ ಪ್ರಾಪ್ತಿಯಾಗಿ ಜೀವನ ಸಾರ್ಥಕವಾಗುತ್ತದೆ. ದ.ಕ. ಜಿಲ್ಲೆಯ ಈ ತುಳುನಾಡಿನಲ್ಲಿ ಧರ್ಮ ನೆಲೆಯೂರಿದೆ ಎಂದು 108 ಸಂತ ಪರಮಗುರು ಹಾವೇರಿಯ ಶ್ರೀ ಪ್ರಸಂಗ ಸಾಗರ ಮುನಿ ಮಹಾರಾಜರು ನುಡಿದರು.
ಅವರು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ರವಿವಾರ ಜರಗಿದ ಪಿಂಛಿ ಪರಿವರ್ತನೆ ಹಾಗೂ ದೀಕ್ಷಾ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚ ನೀಡಿದರು.
ಮಕ್ಕಳಿಗೆ ಪೋಷಕರು ಸಂಸ್ಕಾರಯುತ ಜೀವನ ಪದ್ಧತಿ ಕಲಿಸಿಕೊಡಬೇಕು. ಮಕ್ಕಳಿಗೆ ಚೆನ್ನಾಗಿ ಓದುವಂತೆ ಪ್ರೇರೇಪಿಸಿ. ಆದರೆ ನಿಮ್ಮ ಬುದ್ದಿಮಾತು ಮಕ್ಕಳ ಆತ್ಮಹತ್ಯೆಗೆ ಚಿಂತನೆ ಆಗಬಾರದು ಎಂದರು.
ಮೂಡಬಿದಿರೆ ಶ್ರೀ ದಿಗಂಬರ ಜೈನ ಮಠದ ಭಾರತ ಭೂಷಣ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಮಹಾಸ್ವಾಮೀ ಜಿಯವರು ಆಶೀರ್ವಚನ ನೀಡಿ, ಮುನಿಗಳ ಪಿಂಛಿಗಾಗಿ ರಾಷ್ಟ್ರಮಟ್ಟದಲ್ಲಿ ಅನುಮತಿ ಇದೆ. ಪಿಂಛಿ ದಿಗಂಬರ ಮುನಿಗಳ ಅಹಿಂಸೆಯ ಪ್ರತೀಕ. ಜೀವ ರಕ್ಷಣೆಯೂ ಅದರಲ್ಲಿದೆ. ಸಾಧುತ್ವದ ಬಹಿರಂಗ ಉಪಕರಣ ಕಮಾಂಡಲ ಹಾಗೂ ಪಿಂಛಿ ಆಗಿದೆ. ಮುನಿಗಳಲ್ಲಿ ಸಹಿಷ್ಣುತೆ ಹೆಚ್ಚಿದೆ.
ಸಂಯಮ, ಕರುಣೆ, ಪ್ರೀತಿ, ಅನುಕಂಪ ಅವರಲ್ಲಿ ಮನೆಮಾಡಿದೆ. ಅವರ ಆಗಮನದಿಂದ ಇಲ್ಲಿ ಧರ್ಮ ಪ್ರಭಾವನೆಯಾಗಲಿ, ಅಹಿಂಸೆ ಮೇಲೈಸಲಿ ಎಂದು ನುಡಿದರು. ಮಾಜಿ ಸಚಿವ ಧನಂಜಯ ಕುಮಾರ್ ವೇದಿಕೆಯಲ್ಲಿದ್ದರು.
ಇದಕ್ಕೂ ಮೊದಲು ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಗಣಧರ ವಲಯ ಯಂತ್ರ ಆರಾಧನೆ, ಬಳಿಕ ಶ್ರೀ ಬಾಹುಬಲಿ ಸಭಾಭವನದಲ್ಲಿ ಮುನಿಶ್ರೀಯವರ ಪಾದಪೂಜೆ, ಪಿಂಛಿ ಪರಿವರ್ತನೆ, ಶಾಸ್ತ್ರದಾನ ಜರಗಿತು.
ವೇಣೂರು ದಿಗಂಬರ ತೀರ್ಥಕ್ಷೇತ್ರ ಸಮಿತಿ, ಭಾರತೀಯ ಜೈನ್ ಮಿಲನ್, ಬಾಹುಬಲಿ ಯುವಜನ ಸಂಘ, ಬ್ರಾಹ್ಮೀ ಮಹಿಳಾ ಸಂಘದ ಪದಾಧಿಕಾರಿಗಳು ಸಹಕರಿಸಿದರು. ವೇಣೂರು ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಡಾ| ಪದ್ಮಪ್ರಸಾದ ಅಜಿಲ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕಾರ್ಯದರ್ಶಿ ಯಂ. ವಿಜಯ ರಾಜ ಅಧಿಕಾರಿ ಸ್ವಾಗತಿಸಿ, ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: ರಾಜ್, ವೇಣೂರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.