ಜ.27: ಉಜಿರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, 100 ಸಾಹಿತಿಗಳ ಬದುಕು-ಬರಹಗಳ ವೀಡಿಯೋ ಮಾಲಿಕೆ ಲೋಕಾರ್ಪಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Sahithya sammelana press copyಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿರುವ ಕಸಾಪ ಮತ್ತು ಸಮ್ಮೇಳನ ಸಮಿತಿ ಪದಾಧಿಕಾರಿಗಳು

ಸಮ್ಮೇಳನದ ವಿಶೇಷತೆಗಳು…….

*ಜ. 27 ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಭುವನೇಶ್ವರೀ ಮೆರವಣಿಗೆ.
*ಜ. 28 ಮಕ್ಕಳ ಸಾಹಿತ್ಯ ಸಂಭ್ರಮ.
*ವಿದ್ವತ್ ಸನ್ಮಾನ, ಸಾಧಕರಿಗೆ ಸನ್ಮಾನ, ಸಂಘ ಸಂಸ್ಥೆಗೆ ಪುರಸ್ಕಾರ, ಪುಟಾಣಿ ಪ್ರತಿಭೆಗಳಿಗೆ ಪ್ರೋತ್ಸಾಹ.
*ಕವಿಗೋಷ್ಠಿ ಸಹಿತ ವಿವಿಧ ವಿದ್ವತ್‌ಪೂರ್ಣ ಗೋಷ್ಠಿಗಳು.
*ಮೂರೂ ದಿನಗಳಲ್ಲಿ ಮುಕ್ತ ಊಟೋಪಚಾರ ವ್ಯವಸ್ಥೆ.
*21ನೇಯ ಸಮ್ಮೇಳನದಲ್ಲಿ ೨೧ ಪುಸ್ತಗಳ ಬಿಡುಗಡೆ.
*100 ಕ್ಕೂ ಮಿಕ್ಕಿದ ಪುಸ್ತಕ ಮಳಿಗೆಗಳು.
*ಕನ್ನಡ ಸಂಸ್ಕೃತಿ ಇಲಾಖೆ, ಜಾನಪದ ಅಕಾಡಮಿಯ ಪುಸ್ತಕ ಭಂಡಾರಗಳಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ.
*ಹಳೆಯ ಪುಸ್ತಕಗಳ ಮಾರಾಟ.
*ಹಾಸ್ಯಗೋಷ್ಠಿ ಸಹಿತ ಆಯ್ದ ಕಲಾವಿದರಿಂದ ಸಾಂಸ್ಕೃತಿಕ ರಸದೌತಣ.
*ಮಹಿಳಾ ಗೋಷ್ಠಿ, ಬಹಿರಂಗ ಅಧಿವೇಶನ.
*ಪ್ರಧಾನ ವೇದಿಕೆ, ಶಾರದಾ ಮಂಟಪ, ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣ ವೇದಿಕೆಗಳಲ್ಲಿ ಕಾರ್ಯಕ್ರಮ.
*ಸಮ್ಮೇಳನದ ಅಂಗವಾಗಿ ನಾವೂರಿನಲ್ಲಿ ಶತಾವಧಾನಿ ಡಾ| ಆರ್. ಗಣೇಶ್‌ರಿಂದ ಅಷ್ಠಾವಧಾನ ಕಾರ್ಯಕ್ರಮ.

ಉಜಿರೆ : ರಾಜ್ಯದ ಹಿರಿಯ ಹಾಗೂ ಜನಪ್ರಿಯ ಸಾಹಿತಿಗಳ ಬದುಕು-ಬರಹ, ಜೀವನ-ಸಾಧನೆ, ವಿಚಾರಧಾರೆ, ಚಿಂತನ-ಮಂಥನದ ವೀಡಿಯೋ ಚಿತ್ರೀಕರಣದ ವಿಶೇಷ ಸುವರ್ಣ ಉಪನ್ಯಾಸ ಮಾಲಿಕೆ ದಕ್ಷಿಣ ಕನ್ನಡ ಜಿಲ್ಲಾ 21ನೇ ಸಾಹಿತ್ಯ ಸಮ್ಮೇಳನದ ಶುಭಾವಸರದಲ್ಲಿ ಪ್ರಾರಂಭಿಕ ಹಂತದಲ್ಲಿ 100 ಮಾಲಿಕೆಗಳು ಬಿಡುಗಡೆಗೊಳ್ಳಲಿದೆ ಎಂದು ತಾ| ಕಸಾಪ ಅಧ್ಯಕ್ಷ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕರೂ ಆಗಿರುವ ಡಾ| ಬಿ. ಯಶೋವರ್ಮ ಪ್ರಕಟಿಸಿದರು.
ಅವರು ಉಜಿರೆ ಎಸ್‌ಡಿಎಂ ಎಜುಕೇ ಶನಲ್ ಟ್ರಸ್ಟ್ ಕಚೇರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಂಗವಾಗಿ ಜ.25 ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.
ಸುವರ್ಣ ಉಪನ್ಯಾಸ ಮಾಲಿಕೆ ಯೋಜನೆಯನ್ವಯ ಧಾರವಾಡ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಹಿರಿಯ ಸಾಹಿತಿಗಳ ಬದುಕು-ಬರಹದ ಅನುಭವ ಕಥನವನ್ನು ಅವರ ಸ್ವಗೃಹಕ್ಕೆ ತೆರಳಿ ವಿಡಿಯೋ ಚಿತ್ರೀಕರಣದ ಮೂಲಕ ದಾಖಲಿಸಿಕೊಳ್ಳಲಾಗಿದೆ. ಈ ವಿಶೇಷ ಕಾರ್ಯಕ್ಕಾಗಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಕನ್ನಡ ಹಾಗೂ ಪತ್ರಿಕೋದ್ಯಮ ವಿಭಾಗ ಸುಮಾರು 1 ವರ್ಷಗಳ ಕಾಲ ಶ್ರಮಿಸಿ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ವಿಡಿಯೋ ದಾಖಲೆಯೊಂದನ್ನು ಸಮರ್ಪಿಸಲಿದೆ. ಇದು ಬಿಡುಗಡೆಯ ಬಳಿಕ ಯೂಟೂಬ್‌ನಲ್ಲಿ ಅಪ್‌ಲೋಡ್ ಮಾಡಿ ಸಾಹಿತ್ಯ ಲೋಕಕ್ಕೆ ಅರ್ಪಿಸಲಾಗುವುದು. ಆಂಗ್ಲ ಮತ್ತು ಇತರ ಭಾಷಾ ಸಾಹಿತಿಗಳ ಈ ರೀತಿಯ ಧ್ವನಿ ಮಾಲಿಕೆಗಳು ಈಗಾಗಲೇ ಅಂತರ್ಜಾಲ ದಲ್ಲಿದ್ದು, ಕನ್ನಡದ ಕವಿಗಳ ವಿಚಾರವಾಗಿ ಇದ್ದ ದೊಡ್ಡ ಕೊರತೆಯೊಂದು ಈ ಮೂಲಕ ನಿವಾರಣೆಯಾಗಲಿದೆ ಎಂಬ ಅಭಿಮಾನ ನಮ್ಮದು ಎಂದವರು ತಿಳಿಸಿದರು.
ಮೊದಲ ಹಂತದಲ್ಲಿ ಬಿಡುಗಡೆ ಗೊಳ್ಳಲಿರುವ ಪ್ರಮುಖ ಸಾಹಿತಿಗಳ ವಿವರ :
ಶತಾಯುಷಿ ಡಾ. ಜಿ. ವೆಂಕಟ ಸುಬ್ಬಯ್ಯ, ಡಾ. ಜಿ.ಎಸ್. ಆಮೂರು, ನಾಡೋಜ ಚೆನ್ನವೀರ ಕಣವಿ, ಪ್ರೊ. ಅ.ರಾ. ಮಿತ್ರ, ಪ್ರೊ. ಹಂಪಾ ನಾಗರಾಜಯ್ಯ, ಪ್ರೊ. ಕಮಲಾಹಂಪನ, ಡಾ. ಎಂ.ಎಂ. ಕಲಬುರ್ಗಿ, ಡಾ. ಗಿರಡ್ಡಿ ಗೋವಿಂದರಾಜ, ಡಾ. ವೀಣಾ ಶಾಂತೇಶ್ವರ, ಪ್ರೊ. ರಾಘವೇಂದ್ರ ಪಾಟೀಲ, ಪ್ರೊ. ಅರವಿಂದ ಮಾಲಗತ್ತಿ, ಪ್ರೊ. ಎನ್.ಎಸ್. ತಾರನಾಥ, ಪ್ರೊ. ಎಂ. ರಾಮಚಂದ್ರ, ಡಾ. ಬಾಳಾಸಾಹೇಬ ಲೋಕಾಪುರ, ಪ್ರಹ್ಲಾದ ಅಗಸನಕಟ್ಟೆ, ಡಾ. ಶ್ರೀರಾಮ ಭಟ್, ಶ್ರೀಮತಿ ರೋಹಿಣಿ, ಡಾ. ಚಂದ್ರಕಲಾ ನಂದಾವರ, ಡಾ. ಪಂಚಾಕ್ಷರಿ ಹಿರೇಮಠ, ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿ, ಪ್ರೊ. ಪಾದೇಕಲ್ಲು ವಿಷ್ಣುಭಟ್ಟ, ಪ್ರೊ. ತಾಳ್ತಾಜೆ ವಸಂತಕುಮಾರ್ ಪೆರ್ಲ ಮುಂತಾದ ಸಾಹಿತಿಗಳ ನೂರಕ್ಕಿಂತಲೂ ಅಧಿಕ ಉಪನ್ಯಾಸ ಮಾಲಿಕೆಯನ್ನು ವಿಡಿಯೋ ದಾಖಲೀಕರಣ ಮಾಡಲಾಗಿದ್ದು ಮೊದಲ ಹಂತದಲ್ಲಿ ೧೦೦ ಉಪನ್ಯಾಸಗಳ ಮಾಲಿಕೆ ಲೋಕಾರ್ಪಣೆಗೊಳ್ಳಲಿದೆ.
ಈ ಪ್ರಯತ್ನದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಎಸ್.ಡಿ.ಎಂ. ಮಲ್ಟಿಮೀಡಿಯಾ ಸ್ಟುಡಿಯೋ ವಿಶೇಷ ಸಹಕಾರ ನೀಡಿದೆ. ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಹಯೋಗದಿಂದ ರೂಪಿಸಿದ ಈ ಮಾಲಿಕೆಗಾಗಿ ರಾಜ್ಯದಾದ್ಯಂತ ಸಂಚರಿಸಿ ಸಾಹಿತಿಗಳ ಉಪನ್ಯಾಸಗಳನ್ನು ವಿಡಿಯೋಗಳನ್ನು ಚಿತ್ರೀಕರಿಸಿ, ಸಂಸ್ಕರಿಸಿ ಅವುಗಳನ್ನು ಜನಬಳಕೆಗೆ ಲಭ್ಯವಾಗಿಸುವಲ್ಲಿ ಮಲ್ಟಿಮೀಡಿಯಾ ಸ್ಟುಡಿಯೋದ ಕಾರ್ಯಕ್ರಮ ನಿರ್ಮಾಪಕ ಮಾಧವ ಹೊಳ್ಳ ಶ್ರಮಿಸಿದ್ದಾರೆ. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್‌ಕುಮಾರ್, ಡಾ. ರಾಜಶೇಖರ್ ಹಳೆಮನೆ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗಡೆ, ಸುನಿಲ್ ಹೆಗ್ಡೆ ಸಹಕಾರ ನೀಡಿದ್ದಾರೆ ಎಂದು ಅವರು ವಿವರ ನೀಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ವಿಜಯರಾಘವ ಪಡುವೆಟ್ನಾಯ, ಮಾಧ್ಯಮ ಸಮಿತಿ ಸಂಯೋಜಕ ಪ್ರೊ. ಭಾಸ್ಕರ ಹೆಗ್ಡೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ. ತಮ್ಮಯ್ಯ ಬಂಟ್ವಾಳ ಮತ್ತು ಡಾ| ಎಂ.ಪಿ. ಶ್ರೀನಾಥ್, ತಾ| ಕಸಾಪ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.